ಗುರುವಾರ, 3 ಜುಲೈ 2025
×
ADVERTISEMENT
ಒಳನೋಟ: ದಟ್ಟ ಕಾಡಿಗೆ ಜನರೇ ಜೀವ
ಒಳನೋಟ: ದಟ್ಟ ಕಾಡಿಗೆ ಜನರೇ ಜೀವ
ಫಾಲೋ ಮಾಡಿ
Published 9 ಫೆಬ್ರುವರಿ 2025, 0:05 IST
Last Updated 9 ಫೆಬ್ರುವರಿ 2025, 0:05 IST
Comments
ಕುಮಟಾ ತಾಲ್ಲೂಕಿನ ಹಳಕಾರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಸ ಎಸೆಯದಂತೆ ಎಚ್ಚರಿಸುವ ಫಲಕವನ್ನು ಗ್ರಾಮ ಅರಣ್ಯ ಪಂಚಾಯಿತಿಯಿಂದ ಅಳವಡಿಸಲಾಗಿದೆ

ಕುಮಟಾ ತಾಲ್ಲೂಕಿನ ಹಳಕಾರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಸ ಎಸೆಯದಂತೆ ಎಚ್ಚರಿಸುವ ಫಲಕವನ್ನು ಗ್ರಾಮ ಅರಣ್ಯ ಪಂಚಾಯಿತಿಯಿಂದ ಅಳವಡಿಸಲಾಗಿದೆ

ಶಿವಮೊಗ್ಗ ಜಿಲ್ಲೆಯ ತೋರಣಗೊಂಡನಕೊಪ್ಪ ಗ್ರಾಮಸ್ಥರು ತಾವೇ ಮುಂದಾಗಿ ಅರಣ್ಯಾಧಿಕಾರಿಗಳ ನೆರವಿನಿಂದ ಅರಣ್ಯ ಗಡಿ ಗುರುತಿಸಿ ಕಂದಕ ತೋಡಿಸಿದ ಸಂದರ್ಭ.

ಶಿವಮೊಗ್ಗ ಜಿಲ್ಲೆಯ ತೋರಣಗೊಂಡನಕೊಪ್ಪ ಗ್ರಾಮಸ್ಥರು ತಾವೇ ಮುಂದಾಗಿ ಅರಣ್ಯಾಧಿಕಾರಿಗಳ ನೆರವಿನಿಂದ ಅರಣ್ಯ ಗಡಿ ಗುರುತಿಸಿ ಕಂದಕ ತೋಡಿಸಿದ ಸಂದರ್ಭ.

ಹಸಿರು ಸಮೃದ್ಧವಾಗಿ ಹರಡಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹಳಕಾರ ಗ್ರಾಮ ಅರಣ್ಯ

ಹಸಿರು ಸಮೃದ್ಧವಾಗಿ ಹರಡಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹಳಕಾರ ಗ್ರಾಮ ಅರಣ್ಯ

ಚಿತ್ರ: ಯೋಗೇಶ ಮಡಿವಾಳ

ಕುಮಟಾ ತಾಲ್ಲೂಕಿನ ಹಳಕಾರ ಗ್ರಾಮ ಅರಣ್ಯ ಕಾಯಲು ನಿಂತಿರುವ ಗ್ರಾಮ ಅರಣ್ಯ ಪಂಚಾಯಿತಿಯ ಸದಸ್ಯರು ಹಾಗೂ ಅರಣ್ಯ ಪಂಚಾಯಿತಿ ನೇಮಿಸಿದ ಕಾವಲುಗಾರ

ಕುಮಟಾ ತಾಲ್ಲೂಕಿನ ಹಳಕಾರ ಗ್ರಾಮ ಅರಣ್ಯ ಕಾಯಲು ನಿಂತಿರುವ ಗ್ರಾಮ ಅರಣ್ಯ ಪಂಚಾಯಿತಿಯ ಸದಸ್ಯರು ಹಾಗೂ ಅರಣ್ಯ ಪಂಚಾಯಿತಿ ನೇಮಿಸಿದ ಕಾವಲುಗಾರ

ಕುಮಟಾ ತಾಲ್ಲೂಕಿನ ಹಳಕಾರ ಗ್ರಾಮದ ಅರಣ್ಯವನ್ನು ನಿರಂತರವಾಗಿ ಕಾಯುವ ಗ್ರಾಮ ಅರಣ್ಯ ಪಂಚಾಯಿತಿಯ ಸದಸ್ಯರು

ಕುಮಟಾ ತಾಲ್ಲೂಕಿನ ಹಳಕಾರ ಗ್ರಾಮದ ಅರಣ್ಯವನ್ನು ನಿರಂತರವಾಗಿ ಕಾಯುವ ಗ್ರಾಮ ಅರಣ್ಯ ಪಂಚಾಯಿತಿಯ ಸದಸ್ಯರು

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಭರಣಿ ಗ್ರಾಮದಲ್ಲಿ ಅರಣ್ಯದ ಅಂಚಿನಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಭರಣಿ ಗ್ರಾಮದಲ್ಲಿ ಅರಣ್ಯದ ಅಂಚಿನಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ

ಸ್ಥಳೀಯ ಜನರು ಒಂದಾಗಿ ಕೆಲಸ ಮಾಡಿದರೆ ಪಶ್ಚಿಮಘಟ್ಟದ ಸಮೃದ್ಧ ಕಾಡನ್ನು ಯಶಸ್ವಿಯಾಗಿ ಸಂರಕ್ಷಿಸಲು ಸಾಧ್ಯ. ಅರಣ್ಯ ಇಲಾಖೆಯ ‘ಜಂಟಿ ಅರಣ್ಯ ನಿರ್ವಹಣೆ’ ಹಾಗೂ ’ಸಾಮಾಜಿಕ ಅರಣ್ಯ’ ಯೋಜನೆಗಳು ಜನರ ಸಹಯೋಗದಿಂದ ಕಾಡನ್ನು ರಕ್ಷಿಸಬಹುದು.
ಕೇಶವ ಎಚ್.ಕೊರ್ಸೆ, ಶಿರಸಿ ಸಂರಕ್ಷಣಾ ಜೀವಶಾಸ್ತ್ರಜ್ಞ
ಕಾಡನ್ನು ಅರಣ್ಯ ಇಲಾಖೆಯೊಂದೇ ರಕ್ಷಿಸುವುದಿಲ್ಲ. ಸ್ಥಳೀಯ ಗ್ರಾಮಸ್ಥರು ಕಾಡಂಚಿನಲ್ಲಿ ವಾಸವಿರುವ ಜನರಿಗೆ ಊರಿನ ಕಾಡಿನ ಬಗ್ಗೆ ಗೌರವ ಮತ್ತು ಹೆಮ್ಮೆ ಇದ್ದೇ ಇರುತ್ತದೆ. ಅವರು ಕೂಡ ಅರಣ್ಯ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಸುರೇಶ ಹೆಬ್ಳಿಕರ್, ಪರಿಸರವಾದಿ
ಶಿವಮೊಗ್ಗ ಜಿಲ್ಲೆಯ ಕಂದಾಯ ಅರಣ್ಯಗಳು ವಿನಾಶದ ಅಂಚಿನಲ್ಲಿವೆ. ಅವುಗಳ ಸಂರಕ್ಷಣೆ ಜೊತೆಗೆ ಭದ್ರಾವತಿಯಲ್ಲಿರುವ ಎಂಪಿಎಂ ಕಾರ್ಖಾನೆ ಕೆಪಿಸಿ ಸುಪರ್ದಿಯಲ್ಲಿರುವ ಅರಣ್ಯ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದು ಜನರ ಸಹಭಾಗಿತ್ವದಲ್ಲಿ ಸಂರಕ್ಷಣೆ ಆಗಬೇಕು.
ಅನಂತ ಹೆಗಡೆ ಅಶೀಸರ, ಅಧ್ಯಕ್ಷ, ವೃಕ್ಷಲಕ್ಷ ಆಂದೋಲನ ಸಮಿತಿ
ಹಳಕಾರ ಗ್ರಾಮ ಅರಣ್ಯ ಪಂಚಾಯಿತಿಯ ಗಡಿ ಅಂತಿಮಗೊಳಿಸಲು ಸರ್ವೆ ನಡೆಸಿ ಅರಣ್ಯ ಅಂಚಿಗೆ ಸಂರಕ್ಷಣೆ ಉದ್ದೇಶದಿಂದ ಕಾಂಪೌಂಡ್ ನಿರ್ಮಿಸಲು ಸರ್ಕಾರ ಅನುದಾನ ನೀಡಬೇಕು. ಹಳೆಯ ಕಾಲುವೆಯಿಂದ ಸದ್ಯ ಅರಣ್ಯ ಒತ್ತುವರಿಗೆ ಅವಕಾಶ ಆಗುತ್ತಿಲ್ಲ.
ನಾಗರಾಜ ಭಟ್ಟ, ಅಧ್ಯಕ್ಷ, ಹಳಕಾರ ಗ್ರಾಮ ಅರಣ್ಯ ಪಂಚಾಯಿತಿ
ಮಂಚಿಕೇರಿ ವಲಯ ಅರಣ್ಯ ವ್ಯಾಪ್ತಿಯ ಭರಣಿ ಹೆಮ್ಮಾಡಿ ವ್ಯಾಪ್ತಿಯಲ್ಲಿ ಕಾಡಿನಲ್ಲಿ ಸಿಸಿಟಿವಿ ಅಳವಡಿಸಿ ಮರಕಳವು ನಡೆಯದಂತೆ ಕಣ್ಗಾವಲಿಡಲಾಗಿದೆ. ತಂತ್ರಜ್ಞಾನ ಬಳಕೆ ಮಾಡಿ ಕಾಡು ಸಂರಕ್ಷಣೆಗೆ ಇದು ಮುನ್ನುಡಿಯಾಗಿದೆ.
ಹರ್ಷ ಬಾನು, ಯಲ್ಲಾಪುರ ಡಿಸಿಎಫ್
ಗ್ರಾಮ ಅರಣ್ಯವನ್ನು ಹಗಲು ರಾತ್ರಿ ಪಾಳಿ ಆಧಾರದಲ್ಲಿ ಕಾವಲು ಕಾಯುತ್ತೇವೆ. ಇದಕ್ಕಾಗಿ ಯಾವುದೇ ಹಣ ಪಡೆಯುವುದಿಲ್ಲ. ಮರಗಿಡಗಳ ಸಂರಕ್ಷಿಸುವುದು ಪೂರ್ವಜರಿಂದಲೂ ನಡೆದುಕೊಂಡು ಬಂದ ಜವಾಬ್ದಾರಿ.
ಅನಂತ ಪಟಗಾರ, ಹಳಕಾರ ಗ್ರಾಮಸ್ಥ
ಮೂರು ದಶಕಗಳ ಹಿಂದೆ ದೊಡ್ಡ ಮರಗಳನ್ನೊಳಗೊಂಡ ಕಾಡಿನಲ್ಲಿ ನೀರುನೇರಳೆ ರಾಮಪತ್ರೆ ಮರಗಳು ವಿನಾಶದ ಅಂಚಿನಲ್ಲಿದ್ದವು. ಆಗ ಗ್ರಾಮಸ್ಥರೆಲ್ಲ ಸಂಘಟಿತಗೊಂಡು ಸಂರಕ್ಷಣೆ ಮಾಡಿದ ಫಲವಾಗಿ ಸಮೃದ್ಧ ಅರಣ್ಯ ಇಂದಿಗೂ ಉಳಿದುಕೊಂಡಿದೆ. ಇಡೀ ಗ್ರಾಮಕ್ಕೆ ವರ್ಷಾವಧಿ ಸಾಲುವಷ್ಟು ನೀರು ಕಾಡಿನಿಂದ ಹರಿಯುವ ತೊರೆಯಿಂದ ಸಿಗುತ್ತಿದೆ.
ಆನೆಗೋಳಿ ಸುಬ್ಬ ರಾವ್, ಹುಳಕೋಡು ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT