ಆರ್ಸಿಬಿ ತಂಡವು ಜೂನ್ 3ರ ತಡರಾತ್ರಿ ಐಪಿಎಲ್ ಫೈನಲ್ ಪಂದ್ಯದಲ್ಲಿ ಗೆದ್ದು, ಟ್ರೋಫಿ ಎತ್ತಿ ಹಿಡಿದಿತ್ತು. ಬೆಂಗಳೂರು ಸೇರಿ ರಾಜ್ಯದಾದ್ಯಂತ ಆರ್ಸಿಬಿ ಅಭಿಮಾನಿಗಳು ಜೂನ್ 4ರ ಬೆಳಗಿನ ಜಾವದವರೆಗೂ ರಸ್ತೆಗಳಲ್ಲಿ ಸಂಭ್ರಮಾಚರಣೆ ನಡೆಸಿದ್ದರು. ಜೂನ್ 4ರ ಬೆಳಿಗ್ಗೆ 7ರ ವೇಳೆಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ಆರ್ಸಿಬಿ, ‘ಬೆಂಗಳೂರಿನಲ್ಲಿ ವಿಜಯೋತ್ಸವ ಮೆರವಣಿಗೆ’ ನಡೆಸುತ್ತೇವೆ ಎಂದು ಘೋಷಿಸಿತ್ತು. ಆನಂತರ ವಿಜಯೋತ್ಸವದ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವ, ಆರ್ಸಿಬಿ ಸಾಮಾಜಿಕ ಜಾಲತಾಣಗಳಲ್ಲಿ ನೀಡಿದ ಮಾಹಿತಿ ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳು ವಿಧಾನಸೌಧ ಮತ್ತು ಕ್ರೀಡಾಂಗಣದತ್ತ ಬರಲಾರಂಭಿಸಿದರು. ಅವಘಡ ಸಂಭವಿಸುವುದಕ್ಕೂ ಮುನ್ನ ನಡೆದ ಪ್ರಮುಖ ಬೆಳವಣಿಗೆಗಳನ್ನು ತೆರೆದಿಡುವ ವಿವರ ಇಲ್ಲಿದೆ. 11 ಅಮಾಯಕರ ಜೀವಗಳನ್ನು ಬಲಿ ಪಡೆದೇ ಬಿಟ್ಟ ಮಹಾ ಅವಘಡ ಬಾಯ್ತೆರೆದುಕೊಂಡಿದ್ದಕ್ಕೆ ಇವೇ ಪ್ರಮುಖ ಕಾರಣಗಳು ಎಂದರೆ ತಪ್ಪಾಗಲಿಲ್ಲ...

1) ಬೆಳಿಗ್ಗೆ 7.01ಕ್ಕೆ ಆರ್ಸಿಬಿ ‘ಎಕ್ಸ್’ ಪೋಸ್ಟ್

2) ಬೆಳಿಗ್ಗೆ 9.30ರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿ

ಆರ್ಸಿಬಿ ಆಟಗಾರರಿಗೆ ವಿಧಾನಸೌಧದಲ್ಲಿ ಸನ್ಮಾನ ನಡೆಸುವ ಬಗ್ಗೆ ನಾನು, ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಚರ್ಚಿಸಿ ನಿರ್ಧಾರ ಹೇಳುತ್ತೇವೆ. ಇನ್ನೂ ಏನೂ ಅಂತಿಮವಾಗಿಲ್ಲ. ಆರ್ಸಿಬಿಯವರು ಟ್ವೀಟ್ ಮಾಡಿಬಿಟ್ಟಿದ್ದಾರೆ. ನಾವು ಸಿದ್ಧತೆ ಮಾಡಿಕೊಳ್ಳಬೇಕಲ್ಲವೇ? ಸಮಯ ಆನಂತರ ತಿಳಿಸುತ್ತೇವೆ: ಡಿ.ಕೆ.ಶಿವಕುಮಾರ್

3) ಬೆಳಿಗ್ಗೆ 9.50ರಲ್ಲಿ ಗೃಹ ಸಚಿವ ಜಿ.ಪರಮೇಶ್ವರ

ಆರ್ಸಿಬಿ ಆಟಗಾರರು ಮೆರವಣಿಗೆ ನಡೆಸುತ್ತೇವೆಂದು ಕೋರಿದ್ದಾರೆ. ಮೆರವಣಿಗೆ ವೇಳೆ ಆಟಗಾರರ ಹತ್ತಿರ ಹೋಗಲು ಅಭಿಮಾನಿಗಳು ನುಗ್ಗಬಹುದು, ಮತ್ತೇನನ್ನಾದರೂ ಎಸೆಯಬಹುದು. ಹೀಗಾಗಿ ಮೆರವಣಿಗೆಗೆ ಅವಕಾಶ ನೀಡಲು ಸಾಧ್ಯವಿಲ್ಲ: ಜಿ.ಪರಮೇಶ್ವರ

4) ಮಧ್ಯಾಹ್ನ 1.09ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್’ ಪೋಸ್ಟ್

5) ಮಧ್ಯಾಹ್ನ 1.40ಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಹಿತಿ

ಭದ್ರತೆ ದೃಷ್ಟಿಯಿಂದ ಮೆರವಣಿಗೆಗೆ ಅವಕಾಶ ನೀಡುತ್ತಿಲ್ಲ. ವಿಧಾನಸೌಧದಲ್ಲಿ ಕಾರ್ಯಕ್ರಮ ನಡೆಸುತ್ತೇವೆ. ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರಲಿ. ಇದನ್ನು ಬಹಳ ಎಚ್ಚರಿಕೆಯಿಂದ ನಡೆಸಬೇಕಿದೆ. ಏನಾದರೂ ಹೆಚ್ಚೂ ಕಡಿಮೆ ಆಗಿ ಯಾರದಾದರೂ ಕೈಕಾಲು ಮುರಿದರೆ ಅಥವಾ ಪ್ರಾಣ ಹೋದರೆ ದೇಶದಲ್ಲೇ ಕೆಟ್ಟ ಹೆಸರು ತೆಗೆದುಕೊಳ್ಳಬೇಕಾಗುತ್ತದೆ. ಅಭಿಮಾನಿಗಳು ಸಂಯಮದಿಂದ ವರ್ತಿಸಬೇಕು: ಡಿ.ಕೆ.ಶಿವಕುಮಾರ್

6) ಮಧ್ಯಾಹ್ನ 1.50ರಿಂದ 3ರವರೆಗೆ: ವಿಧಾನಸೌಧ ಸನ್ಮಾನ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಎಂದು ಸುದ್ದಿ ವಾಹಿನಿಗಳಲ್ಲಿ ಪ್ರಸಾರ. ಆನಂತರದಲ್ಲಿ ವಿಧಾನಸೌಧ ಮತ್ತು ಕಬ್ಬನ್ಪಾರ್ಕ್ನತ್ತ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದರು.

7) ಮಧ್ಯಾಹ್ನ 3.14ಕ್ಕೆ ಆರ್ಸಿಬಿ ‘ಎಕ್ಸ್’ ಪೋಸ್ಟ್

8) ಮಧ್ಯಾಹ್ನ 3.32ಕ್ಕೆ ಜೆಡಿಎಸ್ ‘ಎಕ್ಸ್’ ಪೋಸ್ಟ್

9) ಸಂಜೆ 4ರ ವೇಳೆಗೆ ಕಾಲ್ತುಳಿತ ಮತ್ತು ಅಭಿಮಾನಿಗಳ ಸಾವಿನ ಬಗ್ಗೆ ಸುದ್ದಿವಾಹಿನಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ

10) ಸಂಜೆ 5.05ಕ್ಕೆ ಬಿಜೆಪಿ ‘ಎಕ್ಸ್’ ಪೋಸ್ಟ್

11) ಸಂಜೆ 6.16ಕ್ಕೆ ಬಿಜೆಪಿ ‘ಎಕ್ಸ್’ ಪೋಸ್ಟ್

12) ಸಂಜೆ 7.07ಕ್ಕೆ ಜೆಡಿಎಸ್ ‘ಎಕ್ಸ್’ ಪೋಸ್ಟ್

* ‘ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ ಅಭಿಮಾನಿಯೊಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಜೂನ್ 4ರ ಮಧ್ಯಾಹ್ನ 3.10ಕ್ಕೆ ನಮಗೆ ದೊರೆತ್ತಿತ್ತು. ಮುಖ್ಯಮಂತ್ರಿಗೆ ಸಿಕ್ಕಿರಲಿಲ್ಲವೇ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶುಕ್ರವಾರದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಆದರೆ, ವಿಜಯೋತ್ಸವ ಮೆರವಣಿಗೆ ನಡೆಸಲು ಅವಕಾಶ ನೀಡಬೇಕು ಎಂದು ಜೂನ್ 4ರ ಮಧ್ಯಾಹ್ನ 3.32ಕ್ಕೆ ಜೆಡಿಎಸ್, 5.05ಕ್ಕೆ ಬಿಜೆಪಿ ತಮ್ಮ ಅಧಿಕೃತ ‘ಎಕ್ಸ್’ ಖಾತೆಗಳಲ್ಲಿ ಒತ್ತಾಯಿಸಿದ್ದವು.

ಮರೆತೇ ಹೋಯ್ತು ಶಿಷ್ಟಾಚಾರ

‘ವಿಧಾನಸೌಧದ ಆವರಣದಲ್ಲಿ ಆಯೋಜಿಸುವ ಮುನ್ನ ಸರ್ಕಾರದ ಶಿಷ್ಟಾಚಾರ ಇಲಾಖೆಗೆ ಆ ಬಗ್ಗೆ ಮಾಹಿತಿ ನೀಡಬೇಕು. ಆನಂತರ ಕಾರ್ಯಕ್ರಮದ ಸ್ವರೂಪ ಭಾಗವಹಿಸಬಹುದಾದ ಜನರು ಅಗತ್ಯ ಸಿದ್ಧತೆಗಳು ಭದ್ರತಾ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಮುಂದಿನ ಹಂತದಲ್ಲಿ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿ ಅವರ ಸಲಹೆಯನ್ನೂ ಪಡೆಯಲಾಗುತ್ತದೆ. ಎಲ್ಲವೂ ಸರಿಹೊಂದಿದ ಬಳಿಕವಷ್ಟೇ ಕಾರ್ಯಕ್ರಮ ಆಯೋಜನೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತದೆ’ ಎಂದು ರಾಜ್ಯ ಸರ್ಕಾರದ ಶಿಷ್ಟಾಚಾರ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಆದರೆ ಆರ್ಸಿಬಿ ಆಟಗಾರರಿಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಕಾರ್ಯಕ್ರಮ ಆಯೋಜಿಸುವ ಮುನ್ನ ಶಿಷ್ಟಾಚಾರದ ನಿಯಮಗಳನ್ನು ಪಾಲಿಸಲಿಲ್ಲ. ಕಾರ್ಯಕ್ರಮದ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ದಿಢೀರ್ ಎಂದು ಕಾರ್ಯಕ್ರಮವನ್ನು ಘೋಷಿಸಿದ್ದರು. ಕಾರ್ಯಕ್ರಮಕ್ಕೆ ಯಾರೆಲ್ಲಾ ಬರುತ್ತಾರೆ ಎಂಬ ಮಾಹಿತಿಯೂ ಇರಲಿಲ್ಲ. ಈ ಕಾರಣದಿಂದಲೇ ವೇದಿಕೆ ಕಾರ್ಯಕ್ರಮ ಸಂಪೂರ್ಣ ಅಸ್ತವ್ಯಸ್ತವಾಯಿತು. ರಾಜ್ಯಪಾಲರನ್ನೂ ದಿಢೀರ್ ಎಂದು ಕರೆದುಕೊಂಡು ಬರಲಾಗಿತ್ತು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.