ಕಣ್ಣಿನ ಕೆಳಭಾಗದಲ್ಲಿ ಕಪ್ಪಾಗುವುದು (ಡಾರ್ಕ್ ಸರ್ಕಲ್) ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಕಣ್ಣಿನ ಕೆಳಭಾಗದಲ್ಲಿ ಕಪ್ಪಾಗುವುದರಿಂದ ಮುಖ ದಣಿದ, ಒತ್ತಡಕ್ಕೊಳಗಾದ ಅಥವಾ ವಯಸ್ಸಾದಂತೆ ಕಾಣುತ್ತದೆ. ಬಹುತೇಕರಿಗೆ ಡಾರ್ಕ್ ಸರ್ಕಲ್ ಉಂಟಾಗಲು ಕಾರಣ ಏನು ಎಂದು ತಿಳಿದಿರುವುದಿಲ್ಲ.

ಕಣ್ಣಿನ ಕೆಳಭಾಗದಲ್ಲಿ ಕಪ್ಪಾಗುವುದಕ್ಕೆ ಹಲವು ಕಾರಣಗಳಿವೆ. ಇದು ಸಾಮಾನ್ಯವಾಗಿ ಜೀವನಶೈಲಿಯ ಅಭ್ಯಾಸ, ತ್ವಚೆಯ ವೈಶಿಷ್ಟ್ಯ ಹಾಗೂ ಕೆಲವೊಮ್ಮೆ ಅನುವಂಶಿಕತೆಯ ಸಂಯೋಜನೆಯಿಂದ ಉಂಟಾಗುತ್ತವೆ. ನಮ್ಮ ಕಣ್ಣುಗಳ ಸುತ್ತಲಿನ ತ್ವಚೆ ತುಂಬಾ ತೆಳುವಾಗಿರುತ್ತದೆ. ರಕ್ತದ ಹರಿವು, ನೀರಿನ ಪ್ರಮಾಣ, ಅಥವಾ ಮೆಲನಿನ್ ಉತ್ಪಾದನೆಯಲ್ಲಿನ ಸಣ್ಣ ಬದಲಾವಣೆಯಾದರೂ ಸಹ ಕಣ್ಣಿನ ಕೆಳಭಾಗದಲ್ಲಿ ಕಪ್ಪಾಗುತ್ತದೆ.
.ಹಾಲಿನ ಉತ್ಪನ್ನಗಳು: ಚಳಿಗಾಲದಲ್ಲಿ ಇವುಗಳ ಸೇವನೆ ಆರೋಗ್ಯಕರವೇ? ಇಲ್ಲಿದೆ ಮಾಹಿತಿ.Joint Pain | ಚಳಿಗಾಲದಲ್ಲಿ ಕೀಲು ನೋವು, ಉರಿಯೂತ: ಇಲ್ಲಿವೆ ಪರಿಣಾಮಕಾರಿ ಸಲಹೆಗಳು.
ಕಣ್ಣಿನ ಕೆಳಭಾಗದಲ್ಲಿ ಕಪ್ಪಾಗಲು ಮುಖ್ಯ ಕಾರಣ ನಿದ್ರಾಹೀನತೆ. ಸಾಕಷ್ಟು ನಿದ್ದೆ ಮಾಡದಿರುವುದರಿಂದ ನಿಮ್ಮ ಕಣ್ಣಿನ ರೆಪ್ಪೆಗಳ ಕೆಳಗಿರುವ ರಕ್ತನಾಳಗಳು ಸಾಮಾನ್ಯಕ್ಕಿಂತ ಹೆಚ್ಚು ಉಬ್ಬಿಕೊಳ್ಳುತ್ತವೆ. ಇವು ಕಪ್ಪಗಿನ ಉಂಗುರಾಕಾರದಲ್ಲಿ ಕಾಣುತ್ತವೆ.

ಕೆಲವು ಸಂದರ್ಭಗಳಲ್ಲಿ ಕುಟುಂಬದ ಇತಿಹಾಸ ಕೂಡಾ ಕಣ್ಣಿನ ಕೆಳಭಾಗ ಕಪ್ಪಾಗಲು ಕಾರಣವಾಗುತ್ತದೆ. ಹೀಗಾಗಿ ಸರಿಯಾದ ನಿದ್ದೆ ಮತ್ತು ಆರೋಗ್ಯಕರ ದಿನಚರಿಯನ್ನು ಕಾಪಾಡಿಕೊಂಡರೂ ಸಹ ಕಪ್ಪಾಗಿ ಕಾಣಿಸಬಹುದು. ಇದಲ್ಲದೆ, ಫೋನ್, ಲ್ಯಾಪ್ಟಾಪ್ಗಳ ವ್ಯಾಪಕ ಬಳಕೆಯಿಂದ ಕಣ್ಣಿಗೆ ಉಂಟಾಗುವ ಆಯಾಸವೂ ಸಹ ಇದಕ್ಕೆ ಕಾರಣವಾಗಬಹುದು.

ಅಲರ್ಜಿಗಳ ಕಾರಣದಿಂದಲೂ ಕೂಡಾ ಕಣ್ಣಿನ ಕೆಳಭಾಗ ಕಪ್ಪಾಗುತ್ತದೆ. ತುರಿಕೆಯಿಂದ ನಿರಂತರವಾಗಿ ಕಣ್ಣನ್ನು ಉಜ್ಜುವುದರಿಂದ ಕಣ್ಣಿನ ಕೆಳಭಾಗದಲ್ಲಿರುವ ಸೂಕ್ಷ್ಮವಾದ ರಕ್ತನಾಳಗಳು ಕೆರಳುತ್ತವೆ. ಆಸ್ತಮಾ ಕೂಡ ಕಣ್ಣುಗಳ ಸುತ್ತ ಕಪ್ಪಾಗಲು ಕಾರಣವಾಗಬಹುದು. ಕಡಿಮೆ ನೀರು ಕುಡಿಯುವುದರಿಂದಲೂ ಕಣ್ಣಿನ ಕೆಳಭಾಗ ಕಪ್ಪಾಗುತ್ತದೆ.

ಕಾರಣಗಳು ಮತ್ತು ಚಿಕಿತ್ಸೆ ಎನು?

ಕಣ್ಣಿನ ಕೆಳಭಾಗದಲ್ಲಿ ಕಪ್ಪಾಗಲು ಕಾರಣವೇನು ಎಂಬುದನ್ನು ತಿಳಿಯುವುದು ಚಿಕಿತ್ಸೆಯ ಮೊದಲ ಹೆಜ್ಜೆಯಾಗಿದೆ. ದಿನಕ್ಕೆ ಸುಮಾರು 7 ರಿಂದ 9 ಗಂಟೆಗಳ ಆರಾಮದಾಯಕ ನಿದ್ದೆ ಸೂಕ್ತವಾಗಿದೆ. ಇದಕ್ಕಿಂತ ಕಡಿಮೆ ಸಮಯ ನಿದ್ದೆ ಮಾಡಿದರೆ, ಅಥವಾ ನಿದ್ದೆಗೆಟ್ಟರೆ ಈ ಸಮಸ್ಯೆಯಾಗಬಹುದು.

ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದು ಕೂಡಾ ಕಣ್ಣಿನ ಸುತ್ತ ಕಪ್ಪಾಗಲು ಕಾರಣವಾಗಬಹುದು.

ಕಣ್ಣನ್ನು ಪದೇ ಪದೇ ಕೈಯಿಂದ ಸ್ಪರ್ಶಮಾಡುವುದು ಕೂಡಾ ಇದಕ್ಕೆ ಕಾರಣವಾಗಬಹುದು.

ಪರಿಹಾರಗಳು:

ಐಸ್ ಪ್ಯಾಕ್ ಅಥವಾ ಸೌತೆಕಾಯಿಯ ಸ್ಲೈಸ್ಗಳನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳುವುದರಿಂದ ಕಣ್ಣಿಗೆ ತಂಪು ನೀಡುತ್ತದೆ. ಇದರಿಂದಾಗಿ ಉಬ್ಬಿರುವ ರಕ್ತನಾಳ ಸಾಮಾನ್ಯ ಸ್ಥಿತಿಗೆ ಬರುತ್ತವೆ.

ವಿಟಮಿನ್ ಸಿ, ಹೈಲುರಾನಿಕ್ ಆಸಿಡ್, ಪೆಪ್ಟೈಡ್ಗಳು ಅಥವಾ ನಿಯಾಸಿನಮೈಡ್ ಹೊಂದಿರುವ ಕಣ್ಣಿನ ಮೂಲಾಮುಗಳನ್ನು ಬಳಕೆ ಮಾಡಬಹುದು.

ಸನ್ಸ್ಕ್ರೀನ್, ಸನ್ಗ್ಲಾಸ್ ಧರಿಸುವುದರಿಂದ ಕಣ್ಣಿನ ಕೆಳಭಾಗ ಕಪ್ಪಾಗುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು.

ಪರದೆ ನೋಡಿಕೊಂಡು ಕೆಲಸ ಮಾಡುವಾಗ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಏಕೆಂದರೆ ಇದು ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿ ನೀಡಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಲೇಖಕರು: ಡಾ. ಸುನಿಲ್ ಕುಮಾರ್ ಪ್ರಭು, ಸಲಹೆಗಾರ ಚರ್ಮರೋಗ ವೈದ್ಯ ಮತ್ತು ಸೌಂದರ್ಯ ವೈದ್ಯ ಆಸ್ಟರ್ ಆರ್ವಿ ಆಸ್ಪತ್ರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.