ಆಧುನಿಕ ಜೀವನ ಶೈಲಿಯ ಒತ್ತಡ ಮತ್ತು ಆತಂಕದಿಂದಾಗಿ ಮಾನಸಿಕ ಆರೋಗ್ಯವು ಕಿರಿಯರಿಂದ ಹಿರಿಯರವರೆಗೆ ಕಾಡುತ್ತಿರುವ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರವೆಂಬಂತೆ ಯೋಗಾಸನ ಮಾಡುವುದರಿಂದ ಮನಸ್ಸಿಗೆ ಶಾಂತಿ ಮತ್ತು ಮಾನಸಿಕ ಸಮತೋಲನ ಲಭಿಸಲಿದೆ. ಯೋಗಾಸನದ ಯಾವ ಆಸನಗಳು ಮಾನಸಿಕ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ ಎಂಬುದನ್ನು ತಿಳಿಯೋಣ.
.ಹೃದಯಕ್ಕೆ ಹಾನಿಯುಂಟು ಮಾಡುತ್ತವೆ ಈ ಆಹಾರಗಳು: ಇವುಗಳ ಸೇವನೆಯಿಂದ ಸಮಸ್ಯೆ ಏನು?.ಹಾಲಿನ ಉತ್ಪನ್ನಗಳು: ಚಳಿಗಾಲದಲ್ಲಿ ಇವುಗಳ ಸೇವನೆ ಆರೋಗ್ಯಕರವೇ? ಇಲ್ಲಿದೆ ಮಾಹಿತಿ.

ಬಾಲಾಸನ (ಮಗುವಿನ ಭಂಗಿ): ಬಾಲಾಸನವು ಮನಸ್ಸಿಗೆ ವಿಶ್ರಾಂತಿ ನೀಡುವ ಸರಳವಾದ ಹಾಗೂ ಪರಿಣಾಮಕಾರಿ ಆಸನವಾಗಿದೆ. ಈ ಭಂಗಿಯಲ್ಲಿ ಮೊಣಕಾಲು ಮಡಚಿ ಕುಳಿತು, ಮುಂದಕ್ಕೆ ಬಾಗಿ ಹಣೆಯನ್ನು ನೆಲಕ್ಕೆ ಮುಟ್ಟಿಸಬೇಕು. ಇದು ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ನರಮಂಡಲವನ್ನು ಶಾಂತಗೊಳಿಸುತ್ತದೆ ಮತ್ತು ಮನಸ್ಸಿಗೆ ಸ್ಥಿರತೆ ತರುತ್ತದೆ.

ಶವಾಸನ (ಶವದ ಭಂಗಿ): ಶವಾಸನವು ಅತ್ಯಂತ ವಿಶ್ರಾಂತಿದಾಯಕ ಆಸನವಾಗಿದೆ. ನೇರವಾಗಿ ಮಲಗಿಕೊಂಡು ಕಾಲುಗಳನ್ನು ಸಡಿಲಗೊಳಿಸಿ. ನಂತರ ಕೈ, ಭುಜ, ಬೆರಳುಗಳನ್ನು ಆರಾಮದಾಯಕವಾಗಿ ಸಡಿಲಬಿಡಿ. ಇದು ಆಳವಾದ ವಿಶ್ರಾಂತಿಯನ್ನು ನೀಡುತ್ತದೆ. ಖಿನ್ನತೆ ಹಾಗೂ ನಿದ್ದೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಧ್ಯಾನದ ನಂತರ ಈ ಆಸನವನ್ನು ಮಾಡುವುದು ಪ್ರಯೋಜನಕಾರಿಯಾಗಿದೆ.

ಸೇತುಬಂಧಾಸನ (ಸೇತುವೆ ಭಂಗಿ): ಬೆನ್ನು ಮೇಲೆ ಮಲಗಿ ಮೊಣಕಾಲುಗಳನ್ನು ಮಡಚಿ, ಸೊಂಟವನ್ನು ಮೇಲಕ್ಕೆ ಎತ್ತುವ ಈ ಆಸನವು ಮೆದುಳಿಗೆ ರಕ್ತ ಪೂರೈಕೆಯನ್ನು ಹೆಚ್ಚಿಸುತ್ತದೆ. ಇದು ಆತಂಕ, ಒತ್ತಡ ಮತ್ತು ಸೌಮ್ಯ ಖಿನ್ನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮನಸ್ಸಿನಲ್ಲಿ ಹೊಸ ಚೈತನ್ಯವನ್ನು ತುಂಬುತ್ತದೆ.

ವೃಕ್ಷಾಸನ (ವೃಕ್ಷದ ಭಂಗಿ): ಒಂದು ಕಾಲಿನ ಮೇಲೆ ನಿಂತು ಸಮತೋಲನ ಕಾಯ್ದುಕೊಳ್ಳುವ ಈ ಆಸನವು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಮಾನಸಿಕ ಸ್ಥಿರತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ.

ಪಶ್ಚಿಮೋತ್ತಾಸನ (ಮುಂದಕ್ಕೆ ಬಾಗುವ ಭಂಗಿ): ಕಾಲುಗಳನ್ನು ಚಾಚಿ ಕುಳಿತು ಮುಂದಕ್ಕೆ ಬಾಗಿ ಕಾಲಿನ ಬೆರಳುಗಳನ್ನು ಹಿಡಿಯುವ ಈ ಆಸನವು ನರಮಂಡಲವನ್ನು ಶಾಂತಗೊಳಿಸುತ್ತದೆ. ಒತ್ತಡ, ತಲೆನೋವು ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಮನಸ್ಸಿಗೆ ಆಂತರಿಕ ಶಾಂತಿ ನೀಡುತ್ತದೆ.

ವಿಪರೀತ ಕರಣಿ (ಕಾಲುಗಳನ್ನು ಗೋಡೆಗೆ ಒರಗಿಸುವ ಭಂಗಿ): ಬೆನ್ನ ಮೇಲೆ ಮಲಗಿ ಕಾಲುಗಳನ್ನು ಗೋಡೆಗೆ ಒರಗಿಸುವ ಈ ಸರಳ ಆಸನವು ಆತಂಕವನ್ನು ಕಡಿಮೆ ಮಾಡುತ್ತದೆ. ದಣಿವನ್ನು ನೀಗಿಸುತ್ತದೆ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ನಿದ್ರಾಹೀನತೆಯ ಸಮಸ್ಯೆಗೆ ಇದು ಉತ್ತಮ ಪರಿಹಾರವಾಗಿದೆ.

ಪ್ರಾಣಾಯಾಮ ಮತ್ತು ಧ್ಯಾನ: ಆಸನಗಳ ಜೊತೆ ಜೊತೆಗೆ ಪ್ರಾಣಾಯಾಮ ಮತ್ತು ಧ್ಯಾನ ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯವಾಗಿದೆ. ಅನುಲೋಮ-ವಿಲೋಮ, ಭ್ರಾಮರಿ ಪ್ರಾಣಾಯಾಮ ಮತ್ತು ನಿಯಮಿತ ಧ್ಯಾನವು ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡುತ್ತದೆ.

ಪ್ರತಿದಿನ ಕನಿಷ್ಠ 20 ರಿಂದ 30 ನಿಮಿಷಗಳ ಯೋಗಾಭ್ಯಾಸವು ಮಾನಸಿಕ ಆರೋಗ್ಯದ ಗಮನಾರ್ಹ ಸುಧಾರಣೆ ತರುತ್ತದೆ. ನಿಯಮಿತವಾಗಿ ಮತ್ತು ತಾಳ್ಮೆಯಿಂದ ಅಭ್ಯಾಸ ಮಾಡಿದರೆ, ಯೋಗವು ಮನಸ್ಸಿಗೆ ಶಾಶ್ವತ ಶಾಂತಿ ಮತ್ತು ಸ್ಥಿರತೆಯನ್ನು ನೀಡುತ್ತದೆ.

ಲೇಖಕರು: ಡಾ. ಸುಮಲತಾ ಕೆ.ಬಿ., ಹಿರಿಯ ಸಲಹೆಗಾರರು – ಫಿಜಿಕಲ್ ಮೆಡಿಸಿನ್ ಮತ್ತು ರಿಹ್ಯಾಬಿಲಿಟೇಷನ್, ಆಸ್ಟರ್ CMI ಆಸ್ಪತ್ರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.