ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 8ನೇ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣ ಪ್ರಮಾಣದ ಬಜೆಟ್ ಇದಾಗಿದ್ದು, ಸಂಸತ್ತಿನಲ್ಲಿ ಇಂದು (ಶನಿವಾರ) ಬೆಳಿಗ್ಗೆ 11ಕ್ಕೆ ಮಂಡನೆ ಆರಂಭವಾಗಲಿದೆ.

ಮಧ್ಯಮ ವರ್ಗದ ಜನರ ಮೇಲಿನ ತೆರಿಗೆ ಹೊರೆ ಇಳಿಕೆ, ಬೆಲೆ ಏರಿಕೆಗೆ ಕಡಿವಾಣ, ಆರ್ಥಿಕ ಪ್ರಗತಿಗೆ ವೇಗ ನೀಡುವುದಕ್ಕೆ ಸಂಬಂಧಿಸಿದ ಮಹತ್ವದ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ.

ಬಜೆಟ್ ಮಂಡನೆಗೆ ಮುನ್ನಾ ದಿನ (ಶುಕ್ರವಾರ) ಮಾತನಾಡಿರುವ ಪ್ರಧಾನಿ ಮೋದಿ, ಬಡವರು, ಮಧ್ಯಮ ವರ್ಗದವರು ಮತ್ತು ಮಹಿಳೆಯರಿಗೆ ಕೆಲವು ವಿಶೇಷ ಕೊಡುಗೆಗಳನ್ನು ಘೋಷಿಸುವ ಸುಳಿವು ನೀಡಿದ್ದಾರೆ.

ಕೇಂದ್ರ ಸರ್ಕಾರದ ಬಜೆಟ್ ವೆಬ್ಸೈಟ್ (indiabudget.gov.in), ಡಿಡಿ ನ್ಯೂಸ್ ವಾಹಿನಿಯಲ್ಲಿ ಬಜೆಟ್ ನೇರಪ್ರಸಾರವಾಗಲಿದೆ. ಸಂಸದ್ ಟಿವಿ ವೆಬ್ಸೈಟ್ ಹಾಗೂ ಯುಟ್ಯೂಬ್ ಚಾನೆಲ್ನಲ್ಲೂ ಪ್ರಸಾರವಾಗಲಿದೆ.

ಬಜೆಟ್ ಸಂಬಂಧಿತ ಸುದ್ದಿಗಳು, ಪ್ರಮುಖಾಂಶಗಳು ಹಾಗೂ ಕ್ಷಣಕ್ಷಣದ ಅಪ್ಡೇಟ್ಗಳನ್ನು ಪ್ರಜಾವಾಣಿ ವೆಬ್ಸೈಟ್ನಲ್ಲಿ ವೀಕ್ಷಿಸಬಹುದು.
.Budget 2025: ಸತತ 8ನೇ ಸಲ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್.Budget 2025 Highlights: ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಮುಖ್ಯಾಂಶಗಳು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.