ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Vande Bharath | ಕಾರವಾರ ತಲುಪಿದ ‘ವಂದೇ ಭಾರತ್’ ರೈಲು

Published 26 ಡಿಸೆಂಬರ್ 2023, 13:41 IST
Last Updated 26 ಡಿಸೆಂಬರ್ 2023, 13:41 IST
ಅಕ್ಷರ ಗಾತ್ರ

ಕಾರವಾರ: ಇದೇ ಡಿ. 30 ರಿಂದ ಮಂಗಳೂರು ಸೆಂಟ್ರಲ್‍ನಿಂದ ಗೋವಾದ ಮಡಗಾಂವಗೆ ಸಂಚರಿಸಲಿರುವ ‘ವಂದೇ ಭಾರತ್ ಎಕ್ಸಪ್ರೆಸ್’ ರೈಲಿನ ಪ್ರಾಯೋಗಿಕ ಚಾಲನೆ ಮಂಗಳವಾರ ನಡೆದಿದ್ದು ಇದೇ ಮೊದಲ ಬಾರಿಗೆ ಈ ವಿಶೇಷ ರೈಲು ಕಾರವಾರಕ್ಕೆ ಆಗಮಿಸಿತು.

ಬೆಳಿಗ್ಗೆ 8.30ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಟಿದ್ದ ರೈಲು 11.45ಕ್ಕೆ ಕಾರವಾರ ರೈಲು ನಿಲ್ದಾಣ ತಲುಪಿತು. ಆದರೆ ಇಲ್ಲಿ ನಿಲುಗಡೆ ಮಾಡಲಿಲ್ಲ. ನೇರವಾಗಿ ಮಡಗಾಂವಗೆ ತಲುಪಿದ ಬಳಿಕ ಮಧ್ಯಾಹ್ನ 2 ಗಂಟೆಗೆ ಮರಳಿ ಬಂದಿತು.

ದೇಶದ ಹಲವು ನಗರಗಳನ್ನು ಸಂಪರ್ಕಿಸಲು ಸಂಚರಿಸುತ್ತಿರುವ ವಂದೇ ಭಾರತ್ ಸಾಕಷ್ಟು ಖ್ಯಾತಿ ಪಡೆದಿದೆ. ಐಷಾರಾಮಿ ಕೋಚ್‍ಗಳನ್ನು ಹೊಂದಿರುವ ರೈಲು ಸಂಪೂರ್ಣ ಸ್ವದೇಶಿ ನಿರ್ಮಿತವಾಗಿದೆ.

‘ಡಿ.30 ರಂದು ದೇಶದ ವಿವಿಧೆಡೆ ಹೊಸದಾಗಿ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಮಂಗಳೂರು–ಮಡಗಾಂವ ನಡುವೆ ಸಂಚರಿಸಲಿರುವ ರೈಲು ಉಡುಪಿ ಮತ್ತು ಕಾರವಾರದಲ್ಲಿ ನಿಲುಗಡೆಯಾಗಲಿದೆ. ತಾತ್ಕಾಲಿಕ ವೇಳಾಪಟ್ಟಿಯ ಅನ್ವಯ ಮಂಗಳೂರಿನಿಂದ ಬೆಳಿಗ್ಗೆ 8.30ಕ್ಕೆ ಹೊರಡುವ ರೈಲು ಕಾರವಾರಕ್ಕೆ ಮಧ್ಯಾಹ್ನ 12.10ಕ್ಕೆ ತಲುಪಲಿದೆ. ಮಡಗಾಂವದಿಂದ ಸಂಜೆ ಹೊರಡುವ ರೈಲು 6.57ಕ್ಕೆ ಪುನಃ ಕಾರವಾರಕ್ಕೆ ತಲುಪಲಿದೆ’ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT