ಗುರುವಾರ , ಜೂನ್ 30, 2022
27 °C

ಹಿಂದಿ ರಾಷ್ಟ್ರಭಾಷೆ ಸಮರ್ಥನೆ: ರಾಜಕಾರಣಿಗಳಿಗೆ ಛೀಮಾರಿ ಹಾಕಿದ ನಟ ಪ್ರಕಾಶ್ ರಾಜ್

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆ ಎಂದು ನಟ ಹಾಗೂ ವಿಮಲ್ ಗುಟ್ಕಾ ಪಾನ್ ಮಸಲಾ ಜಾಹೀರಾತಿನ ರಾಯಭಾರಿ ಅಜಯ್ ದೇವಗನ್ ಹೇಳಿರುವುದು ಪರ ವಿರೋಧದ ಚರ್ಚೆ ಮುಂದುವರೆಸಿದೆ.

ಈ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಪ್ರತಿಕ್ರಿಯಿಸಿದ್ದು, ಅಜಯ್ ದೇವಗನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕರ್ನಾಟಕದ ರಾಜಕಾರಣಿಗಳ ಹೇಳಿಕೆಯನ್ನು ತೀಕ್ಷ್ಣವಾಗಿ ಕುಟುಕಿದ್ದಾರೆ.

‘ಹೆತ್ತ ತಾಯಿಗೆ..ಹೊತ್ತ ಮಣ್ಣಿಗೆ..ಜೀವ ಕೊಟ್ಟ ನೆಲದ ಬೇರಿಗೆ ..ನಮ್ಮೊಳಗೆ ಹರಿಯುವ ಜೀವ ನದಿ ಕನ್ನಡಕ್ಕೇ.. ದ್ರೋಹ ಬಗೆಯಲು ನಾಚಿಕೆಯಾಗಲ್ವೆ .. ಛೀ’ ಎಂದು ಸಚಿವ ಅಶ್ವತ್ಥ್ ನಾರಾಯಣ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹಾಗೂ ಸಂಸದ ರಮೇಶ್ ಜಿಗಜಿಣಗಿ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರಿಗೆ ಛೀಮಾರಿ ಹಾಕಿದ್ದಾರೆ.

 

ನಟ ಕಿಚ್ಚ ಸುದೀಪ್ ಅವರು ಕಾರ್ಯಕ್ರಮವೊಂದರಲ್ಲಿ ‘ಹಿಂದಿ ಅದೇನೂ ರಾಷ್ಟ್ರಭಾಷೆ ಅಲ್ಲ’ ಎಂದು ಹೇಳಿದ್ದರು. ಇದಕ್ಕೆ ಕುಪಿತಗೊಂಡು ಟ್ವೀಟ್ ಮಾಡಿದ್ದ ಅಜಯ್ ದೇವಗನ್, ‘ಹಿಂದಿ ರಾಷ್ಟ್ರಭಾಷೆ ಅಲ್ಲವೆಂದರೆ ನೀವೆಕೆ ನಿಮ್ಮ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡುತ್ತೀರಾ? ಹಿಂದಿ ಎಂದೆಂದಿಗೂ ರಾಷ್ಟ್ರಭಾಷೆ’ ಎಂದು ಹೇಳಿದ್ದರು.

ಅಜಯ್ ದೇವಗನ್ ಅವರ ಈ ಹೇಳಿಕೆಯನ್ನು ವಿರೋಧಿಸಿ ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲೆಯಾಳಿಗರು ಹೇಳಿಕೆ ನೀಡಿದ್ದರು. ಕೆಲವರು ಸಮರ್ಥಿಸಿಕೊಂಡಿದ್ದರು.

ಇವನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು