ತನಿಖೆಗಾಗಿ ನಿಮಗೂ ನೋಟಿಸ್ ನೀಡಬೇಕಲ್ಲವೇ: ಅರಗ ಜ್ಞಾನೇಂದ್ರಗೆ ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ –ಬಿಜೆಪಿ ನಾಯಕರ ಮಧ್ಯೆ ಪರಸ್ಪರ ವಾಗ್ದಾಳಿ, ಕೆಸರೆರಚಾಟ ಜೋರಾಗಿದೆ.
ಪ್ರಕರಣ ಸಂಬಂಧ ವಿಡಿಯೊ ಸಮೇತ ಟ್ವೀಟ್ ಮಾಡಿರುವ ಕಾಂಗ್ರೆಸ್, ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಕಿಡಿಕಾರಿದೆ.
‘ಪಿಎಸ್ಐ ನೇಮಕಾತಿಯಲ್ಲಿ ಅಕ್ರಮವೇ ಆಗಿಲ್ಲವೆಂದು ಇಷ್ಟು ಆತ್ಮವಿಶ್ವಾಸದಿಂದ ಸದನದಲ್ಲಿ ಸಮರ್ಥಿಸಿದ ಅರಗ ಜ್ಞಾನೇಂದ್ರ ಅವರೇ, ಈ ಸಮರ್ಥನೆಗೂ, ದಿವ್ಯಾ ಹಾಗರಗಿ ಬಂಧನ ಆಗದಿರುವುದಕ್ಕೂ, ನೀವು ಅವರ ಆದರಾತಿಥ್ಯ ಸ್ವೀಕರಿಸಿದ್ದಕ್ಕೂ ಗಾಢಸಂಬಂಧ ಇದೆಯಲ್ಲವೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಓದಿ... ಕಿಮೋಥೆರಪಿ ವೇಳೆ ಸಂದರ್ಶನಕ್ಕೆ ಹಾಜರಾದ ಕ್ಯಾನ್ಸರ್ ಪೀಡಿತ ವ್ಯಕ್ತಿ: ಫೋಟೊ ವೈರಲ್
‘ಪ್ರಕರಣಕ್ಕೆ ಸಂಬಂಧಿಸಿ ನಿಮ್ಮ ಸಮರ್ಥನೆಯನ್ನು ಬಾಲಿಶತನ ಎನ್ನೋಣವೇ?, ಸಿಐಡಿ ತನಿಖೆಗಾಗಿ ನಿಮಗೂ ನೋಟಿಸ್ ನೀಡಬೇಕಲ್ಲವೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ರುದ್ರಗೌಡ ಡಿ. ಪಾಟೀಲ ಸೇರಿದಂತೆ ಹಲವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸೇರಿದಂತೆ ಇತರೆ ಆರೋಪಿಗಳು ಎರಡು ವಾರಗಳಿಂದ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಓದಿ: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಮಹತ್ವದ ತಿರುವು: ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ
PSI ನೇಮಕಾತಿಯಲ್ಲಿ ಅಕ್ರಮವೇ ಆಗಿಲ್ಲವೆಂದು ಇಷ್ಟು ಆತ್ಮವಿಶ್ವಾಸದಿಂದ ಸದನದಲ್ಲಿ ಸಮರ್ಥಿಸಿದ @JnanendraAraga ಅವರೇ,
ಈ ಸಮರ್ಥನೆಗೂ, ದಿವ್ಯಾ ಹಾಗರಗಿ ಬಂಧನ ಆಗದಿರುವುದಕ್ಕೂ, ನೀವು ಅವರ ಆದರಾತಿಥ್ಯ ಸ್ವೀಕರಿಸಿದ್ದಕ್ಕೂ ಗಾಢಸಂಬಂಧ ಇದೆಯಲ್ಲವೇ❓ನಿಮ್ಮ ಸಮರ್ಥನೆಯನ್ನ ಬಾಲಿಶತನ ಎನ್ನೋಣವೇ❓
ತನಿಖೆಗಾಗಿ ನಿಮಗೂ ನೋಟಿಸ್ ನೀಡಬೇಕಲ್ಲವೇ❓ pic.twitter.com/nCWEs4NLre— Karnataka Congress (@INCKarnataka) April 27, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.