ನವದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಹುದ್ದೆಗೆ ಇಂದು (ಮಂಗಳವಾರ) ಚುನಾವಣೆ ನಡೆಯುತ್ತಿದೆ.

10 ಗಂಟೆಗೆ ಮತದಾನ ಆರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಸೇರಿದಂತೆ ಹಲವು ನಾಯಕರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

ಜುಲೈ 21ರಂದು ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ದಿಢೀರ್ ರಾಜೀನಾಮೆ ನೀಡಿದ್ದರು.

ಎನ್ಡಿಎ ಮೈತ್ರಿಕೂಟದಿಂದ ಉಪರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್ ಹಾಗೂ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ನ್ಯಾ. ಸುದರ್ಶನ ರೆಡ್ಡಿ ಕಣಕ್ಕಿಳಿದಿದ್ದಾರೆ.

ಎನ್ಡಿಎ ಬಳಿ ಬಹುಮತ ಇರುವುದಿಂದ ಸಿ.ಪಿ. ರಾಧಾಕೃಷ್ಣನ್ ಅವರ ಗೆಲುವು ಬಹುತೇಕ ಖಚಿತವಾಗಿದೆ. ಆದರೆ, 1962ರಿಂದ ಇಲ್ಲಿಯವರೆಗೂ ವಿರೋಧ ಪಕ್ಷಗಳ ಅಭ್ಯರ್ಥಿಗೆ ಸಿಕ್ಕ ಮತಗಳ ಹೋಲಿಕೆಯಲ್ಲಿ ಈ ಬಾರಿ ನ್ಯಾ. ಸುದರ್ಶನ ರೆಡ್ಡಿ ಅವರಿಗೆ ಅತಿ ಹೆಚ್ಚು ಮತಗಳು ಲಭಿಸುವ ಸಾಧ್ಯತೆ ಹೆಚ್ಚು. ಎರಡೂ ಮೈತ್ರಿಕೂಟಗಳು ಸಭೆಗಳನ್ನು ನಡೆಸಿ ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಒಗ್ಗಟ್ಟು ಪ್ರದರ್ಶಿಸಿವೆ

ಒಟ್ಟು ಬಲಾಬಲ

788 : ಒಟ್ಟು ಸಂಸದರು

245 : ರಾಜ್ಯಸಭೆ

543 : ಲೋಕಸಭೆ

12 : ರಾಜ್ಯಸಭೆಗೆ ನಾಮನಿರ್ದೇಶನಗೊಂಡವರು

ಈ ಬಾರಿಯ ಬಲಾಬಲ

781 : ಒಟ್ಟು ಸಂಸದರು

239 : ರಾಜ್ಯಸಭೆ (ಆರು ಸ್ಥಾನಗಳು ಖಾಲಿ ಇವೆ)

542 : ಲೋಕಸಭೆ (ಒಂದು ಸ್ಥಾನ ಖಾಲಿ ಇದೆ)

391 : ಬಹುಮತ

‘ಮೈತ್ರಿ’ಗಳ ಬಲಾಬಲ

436 : ಎನ್ಡಿಎ (ವೈಎಸ್ಆರ್ ಕಾಂಗ್ರೆಸ್ ಬೆಂಬಲ ಸೇರಿ)

324 : ಇಂಡಿಯಾ

10 : ಪಕ್ಷೇತರರು

4 : ಬಿಆರ್ಎಸ್

7 : ಬಿಜೆಡಿ
.Vice Presidential Election: ಉಪರಾಷ್ಟ್ರಪತಿ ಚುನಾವಣೆ ಇಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.