ಕೈರೊ/ಟೆಲ್ ಅವೀವ್: ಇಸ್ರೇಲ್ ಮತ್ತು ಹಮಾಸ್ ಸಂಘಟನೆ ಮಧ್ಯೆ ಈಜಿಪ್ಟ್ನ ರೆಸಾರ್ಟ್ವೊಂದರಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆಯು ಬುಧವಾರಕ್ಕೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಅಮೆರಿಕ, ಮಾತುಕತೆಗೆ ಮಧ್ಯಸ್ಥಿಕೆ ವಹಿಸಿರುವ ಈಜಿಪ್ಟ್ ಮತ್ತು ಕತಾರ್ನ ಹಿರಿಯ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

‘ನಮ್ಮ ಬಳಿ ಇರುವ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಬಳಿಕ ಇಸ್ರೇಲ್ ಮತ್ತೆ ಗಾಜಾದ ಮೇಲೆ ಸೇನಾ ದಾಳಿ ನಡೆಸುವುದಿಲ್ಲ ಎನ್ನುವ ಖಚಿತ ಪ್ರಮಾಣವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಬೇಕು’ ಎನ್ನುವುದು ಹಮಾಸ್ ವಾದ.

ಎರಡು ವರ್ಷದಿಂದ ನಡೆಯುತ್ತಿರುವ ಯುದ್ಧ ಅಂತ್ಯಗೊಳ್ಳುತ್ತದೆ ಎನ್ನುವುದು ಮಾತುಕತೆಯಲ್ಲಿ ಪಾಲ್ಗೊಂಡಿರುವ ಎಲ್ಲರ ಆಶಾಭಾವನೆ. ಆದರೆ, ಶಾಂತಿ ಒಪ್ಪಂದದ ಕೆಲವು ಅಂಶಗಳ ಕುರಿತು ಈವರೆಗೂ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.

ಅವುಗಳೆಂದರೆ, ಹಮಾಸ್ ಶಸ್ತ್ರಾಸ್ತ್ರ ತ್ಯಜಿಸಬೇಕು. ಯಾವಾಗ ಮತ್ತು ಎಷ್ಟುರ ಮಟ್ಟಿಗೆ ತನ್ನ ಸೇನೆಯನ್ನು ಇಸ್ರೇಲ್ ಗಾಜಾದಿಂದ ವಾಪಸು ಕರೆಸಿಕೊಳ್ಳಬೇಕು, ಗಾಜಾದ ಆಡಳಿತ ನಿರ್ವಹಣೆಯ ಅಧಿಕಾರವನ್ನು ಹಮಾಸ್ ಬಿಟ್ಟುಕೊಡಬೇಕು ಮತ್ತು ಹೀಗೆ ಅಧಿಕಾರ ಬಿಟ್ಟುಕೊಟ್ಟ ಬಳಿಕ ಆಂತರಿಕವಾದ ಸರ್ಕಾರವೊಂದನ್ನು ರಚಿಸಬೇಕು. ಈ ಬಗ್ಗೆ ಈವರೆಗೂ ನಿರ್ಧಾರಕ್ಕೆ ಬರಲಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.