ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಮಾಸ್ ದಾಳಿಯಿಂದ ಮೃತಪಟ್ಟವರು 1400 ಅಲ್ಲ, 1200: ಸಂಖ್ಯೆ ಪರಿಷ್ಕರಿಸಿದ ಇಸ್ರೇಲ್

Published 11 ನವೆಂಬರ್ 2023, 2:58 IST
Last Updated 11 ನವೆಂಬರ್ 2023, 2:58 IST
ಅಕ್ಷರ ಗಾತ್ರ

ಜೆರುಸಲೇಂ: ಅಕ್ಟೋಬರ್‌ 7 ರಂದು ಹಮಾಸ್‌ ಬಂಡುಕೋರರು ನಡೆಸಿದ್ದ ದಾಳಿಯಲ್ಲಿ ಸಾವಿಗೀಡಾದದವರ ಸಂಖ್ಯೆಯನ್ನು ಇಸ್ರೇಲ್‌ ಪರಿಷ್ಕರಿಸಿದೆ. ದಾಳಿಯಲ್ಲಿ 1,200 ಮಂದಿ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಲಿಯರ್‌ ಹಯಾತ್‌ ಹೇಳಿದ್ದಾರೆ.

1,400 ಮಂದಿ ಸಾವಿಗೀಡಾಗಿದ್ದಾಗಿ ಈ ಹಿಂದೆ ಇಸ್ರೇಲ್ ಹೇಳಿತ್ತು.

‘ಇದು ಸಾವಿಗೀಡಾದವರ ಹೊಸ ಅಂದಾಜು’ ಎಂದು ಹೇಳಿರುವ ಅವರು, ‘ಇದರಲ್ಲಿ ವಿದೇಶಿ ನೌಕರರು ಹಾಗೂ ವಿದೇಶಿ ಪ್ರಜೆಗಳು ಇದ್ದಾರೆ’ ಎಂದು ತಿಳಿಸಿದ್ದಾರೆ.

‘ಈ ಸಂಖ್ಯೆಯೇ ಅಂತಿಮವಲ್ಲ. ಎಲ್ಲಾ ದೇಹಗಳ ಗುರುತು ಪತ್ತೆಯಾದ ಬಳಿಕ ಇದು ಬದಲಾಗಬಹುದು’ ಎಂದು ಹೇಳಿದ್ದಾರೆ.

ಈ ದಾಳಿಯ ಬಳಿಕ ಹಮಾಸ್ ನಿರ್ನಾಮಕ್ಕೆ ಪಣ ತೊಟ್ಟಿರುವ ಇಸ್ರೇಲ್, ಗಾಜಾ ಪಟ್ಟಿಯಲ್ಲಿ ಸತತವಾಗಿ ದಾಳಿ ನಡೆಸುತ್ತಿದೆ. ಇಸ್ರೇಲ್ ದಾಳಿಯಿಂದಾಗಿ 4 ಸಾವಿರಕ್ಕೂ ಅಧಿಕ ಮಕ್ಕಳು ಸೇರಿ 11 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ಗಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT