ಸೆಪ್ಟೆಂಬರ್ 7, 2025, ರಂದು ರಾಹು ಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಈಗಾಗಲೇ ಯಾವ ರಾಶಿಗೆ ಶುಭ ಮತ್ತು ಅಶುಭ ಎಂಬ ಲೇಖನ ಪ್ರಕಟಿಸಲಾಗಿದೆ. ಈ ಗ್ರಹಣದ ಪ್ರತಿಕೂಲ ಪ್ರಭಾವವನ್ನು ಕಡಿಮೆ ಮಾಡಲು ಮತ್ತು ಅನುಕೂಲಕರ ಶಕ್ತಿಗಳನ್ನು ಪಡೆಯಲು ಕೆಲವು ಸರಳ ಆಚರಣೆಗಳನ್ನು ಮಾಡಬಹುದು.
.Lunar Eclipse | ಚಂದ್ರಗ್ರಹಣ ಫಲಾಫಲ: ನಿಮ್ಮ ರಾಶಿಗೆ ಶುಭವೇ ಅಶುಭವೇ?.
1. ಗ್ರಹಣ ಸಮಯದಲ್ಲಿ

· ಗ್ರಹಣದ ಸಮಯದಲ್ಲಿ (7 ರಾತ್ರಿ 09-45ರಿಂದ 8ನೇ ತಾರೀಕು ಬೆಳಿಗ್ಗೆ 1:27ರವರೆಗೆ) ನಿದ್ರೆ, ಆಹಾರ ಸೇವನೆ, ಪ್ರಯಾಣ ಮಾಡಬಾರದು. ಆ ಸಮಯದಲ್ಲಿ ಸ್ನಾನ, ದೇವರ ಜಪ, ಸ್ತೋತ್ರ ಪಠಣ, ಹೋಮ, ಪೂಜೆಗಳನ್ನು ಮಾಡಬೇಕು. ದಾನ ಕೊಡುವ ವಸ್ತುಗಳ ಮೇಲೆ ತುಳಸಿ ನೀರು ಬಿಟ್ಟು ಇಡಬೇಕು.

· ಈ ಸಮಯದಲ್ಲಿ ಯಾವುದೇ ಆಹಾರ ಅಥವಾ ಪಾನೀಯವನ್ನು ಸೇವಿಸಬೇಡಿ. ಗರ್ಭಿಣಿ ಮಹಿಳೆಯರು, ವೃದ್ಧರು ಮತ್ತು ರೋಗಿಗಳು ಹಣ್ಣು, ಹಾಲು ಇತ್ಯಾದಿ ಸೇವಿಸಬಹುದು. ಆದರೆ ಅದಕ್ಕೂ ಮುಂಚೆ ತುಸು ತುಳಸಿ ಎಲೆ ಅಥವಾ ದೂರ್ವೆ (ಗರಿಕೆ) ಹಾಕಿ ಪವಿತ್ರಗೊಳಿಸಬೇಕು.

· ಗ್ರಹಣದ ಸಮಯದಲ್ಲಿ ಮಲಗಬಾರದು. ಜಪ ಮಾಡಬೇಕು ಅಥವಾ ಧ್ಯಾನ ಮಾಡಬೇಕು ಎಂದು ಶಾಸ್ತ್ರಗಳು ಸೂಚಿಸುತ್ತವೆ.

· ಯಾವುದೇ ಶುಭ ಕಾರ್ಯಗಳನ್ನು ಆರಂಭಿಸಬೇಡಿ.

2. ಗ್ರಹಣದ ನಂತರ

· ಗ್ರಹಣ ಮುಗಿದ ತಕ್ಷಣ (8 ಸೆಪ್ಟೆಂಬರ್ ಬೆಳಿಗ್ಗೆ 1:30ರ ನಂತರ) ಸ್ನಾನ ಮಾಡಿ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ.

· ಮನೆ ಮತ್ತು ಪೂಜಾ ಸ್ಥಳವನ್ನು ಗಂಗಾಜಲ/ತುಳಸಿ ನೀರಿನಿಂದ ಶುದ್ಧಿ ಮಾಡಿ.

· ಇಷ್ಟದೇವತೆಯನ್ನು ಸ್ಮರಿಸಿ, ಪೂಜೆ-ಅರ್ಚನೆ ಮಾಡಿ.

· ದಾನ-ಧರ್ಮ ಮಾಡುವುದು ಅತ್ಯಂತ ಶುಭಕರ. ನಿಮ್ಮ ಶಕ್ತಿ ಮತ್ತು ರಾಶಿಯ ಅನುಸಾರ ಈ ಕೆಳಗಿನ ವಸ್ತುಗಳನ್ನು ದಾನ ಮಾಡಬಹುದು.

3. ರಾಶಿ ಅನುಸಾರ ಪರಿಹಾರ

· ಕುಂಭ, ವೃಶ್ಚಿಕ, ಕರ್ಕಾಟಕ ಮತ್ತು ಮೀನ ರಾಶಿಯವರು (ಅಶುಭ ಫಲ): ನೀಲಿ/ಕಪ್ಪು ಬಟ್ಟೆ, ಎಳ್ಳು, ಕಬ್ಬಿಣ ಪಾತ್ರೆ, ಉದ್ದಿನಬೇಳೆ ಹಾಗೂ ಅಕ್ಕಿ, ಚಂದ್ರ ಬಿಂಬ, ಒಂದು ಉಪ್ಪಿನ ಕಟ್ಟು ದಾನ ಮಾಡಿ. ಚಂದ್ರ ಗ್ರಹಣ ಶಾಂತಿ ಮಾಡಿಸಿ, ಶಿವನಿಗೆ ಬಿಲ್ವ ಪತ್ರೆ ಅರ್ಪಿಸಿ. "ಓಂ ನಮಃ ಶಿವಾಯ" ಮಂತ್ರದ ಜಪ ಮಾಡಿ.

· ಮಿಥುನ, ತುಲಾ, ಸಿಂಹ ಮತ್ತು ಮಕರ ರಾಶಿಯವರು (ಮಿಶ್ರ ಫಲ): ಹಳದಿ ಬಟ್ಟೆ, ಅರಿಶಿನ, ಬೆಲ್ಲ, ತರಕಾರಿ ದಾನ ಮಾಡಿ. ಚಂದ್ರ ಗ್ರಹಣ ಶಾಂತಿ ಮಾಡಿಸಿ. ದೇವೀ ಸ್ತೋತ್ರಗಳನ್ನು ಪಠಿಸಿ.

· ಮೇಷ, ವೃಷಭ, ಕನ್ಯಾ ಮತ್ತು ಧನು ರಾಶಿಯವರು (ಶುಭ ಫಲ): ನಿಮ್ಮ ಇಷ್ಟದೇವತೆಗೆ ಕೃತಜ್ಞತೆ ಸಲ್ಲಿಸಿ. ಬೆಲ್ಲ, ವಸ್ತ್ರ, ಹಣ್ಣುಗಳು ಇತ್ಯಾದಿ ದಾನ ಮಾಡಿ. ಚಂದ್ರ ಗ್ರಹಣ ಶಾಂತಿ ಮಾಡಿಸಿ ನಿಮ್ಮ ಶುಭ ಫಲವನ್ನು ದೃಢಪಡಿಸಿಕೊಳ್ಳಿ.

ವಿಶೇಷ ಚಂದ್ರ ಗ್ರಹಣ ಶಾಂತಿಗಾಗಿ ನಮ್ಮನ್ನು ಸಂಪರ್ಕಿಸಬಹುದು: ವಿಠ್ಠಲ್ ಭಟ್
.Lunar Eclipse: ಈ ವಾರದ ಚಂದ್ರಗ್ರಹಣ ಅಪಾಯ ತರುವ ರಕ್ತ ಚಂದ್ರಗ್ರಹಣವೇ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.