ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಗೊ,ಸ್ಪೈಸ್‌ಜೆಟ್ ಷೇರುಗಳ ಚೇತರಿಕೆ: ಚಂಚಲತೆಯ ನಡುವೆ ಖರೀದಿಯತ್ತ ಹೂಡಿಕೆದಾರರು

Last Updated 21 ಮೇ 2020, 8:30 IST
ಅಕ್ಷರ ಗಾತ್ರ

ಮುಂಬೈ: ದೇಶದಾದ್ಯಂತ ಕೋವಿಡ್‌–19 ಲಾಕ್‌ಡೌನ್‌ ನಡುವೆಯೂ ಮೇ 25ರಿಂದ ನಾಗರಿಕ ವಿಮಾನಗಳ ಹಾರಾಟ ಆರಂಭಿಸುವ ಮಾಹಿತಿ ಸರ್ಕಾರದಿಂದ ಹೊರ ಬಂದಿರುವ ಬೆನ್ನಲ್ಲೇ ದೇಶದ ಷೇರುಪೇಟೆಗಳಲ್ಲಿ ವಿಮಾನ ಸಂಸ್ಥೆಗಳಿಗೆ ಸಂಬಂಧಿಸಿದ ಷೇರುಗಳು ಶೇ 10ರ ವರೆಗೂ ಏರಿಕೆಯಾಗಿದೆ.

ಇಂಟರ್‌ಗ್ಲೋಬ್‌ ಏವಿಯೇಷನ್‌ ಲಿಮಿಟೆಡ್‌ (ಇಂಡಿಗೊ) ಷೇರು ಶೇ 9.88ರ ವರೆಗೂ ಏರಿಕೆಯಾಗಿ, ಪ್ರತಿ ಷೇರು ಬೆಲೆ ₹1,002 ತಲುಪಿತು. ಸ್ಪೈಸ್‌ಜೆಟ್‌ ಷೇರು ಸಹ ಶೇ 4.88ರಷ್ಟು ಹೆಚ್ಚಳವಾಗಿ ಪ್ರತಿ ಷೇರು ಬೆಲೆ ₹42.95ರಲ್ಲಿ ವಹಿವಾಟು ನಡೆದಿದೆ.

ಮಧ್ಯಾಹ್ನ 1:55ಕ್ಕೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 295.49 ಅಂಶ ಹೆಚ್ಚಳವಾಗಿ 31,114.10 ಅಂಶ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 91.70 ಅಂಶ ಚೇತರಿಕೆಯೊಂದಿಗೆ 9,158.25 ಅಂಶ ಮುಟ್ಟಿದೆ. ಹೂಡಿಕೆದಾರರು ಎಚ್‌ಡಿಎಫ್‌ಸಿ, ಕೊಟ್ಯಾಕ್‌ ಬ್ಯಾಂಕ್‌ ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳ ಖರೀದಿ ಮುಂದುವರಿಸಿದ್ದಾರೆ.

ನಾಲ್ಕನೇ ತ್ರೈಮಾಸಿಕದ ಲಾಭಾಂಶ ಪ್ರಕಟಿಸಿರುವ ಬಜಾಜ್‌ ಆಟೊ ಕಂಪನಿಯ ಷೇರು ಶೇ 6.50ರಷ್ಟು ಜಿಗಿತ ಕಂಡಿದೆ. ಪ್ರತಿ ಷೇರು ಬೆಲೆ ₹2,722.80 ಆಗಿದೆ. ಕಳೆದ ತ್ರೈಮಾಸಿಕದಲ್ಲಿ ಕಂಪನಿ ₹1,353.99 ಕೋಟಿ ಲಾಭ ಗಳಿಸಿದೆ.

ಸೆನ್ಸೆಕ್ಸ್‌ ಕಂಪನಿಗಳ ಸಾಲಿನಲ್ಲಿ ಬಜಾಜ್‌ ಆಟೊ, ಹೀರೊ ಮೊಟೊಕಾರ್ಪ್‌, ಕೊಟ್ಯಾಕ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಏಷಿಯನ್‌ ಪೇಂಟ್ಸ್‌ ಹಾಗೂ ಮಾರುತಿ ಷೇರುಗಳು ಗಳಿಕೆ ದಾಖಲಿಸಿವೆ. ಎನ್‌ಟಿಪಿಸಿ, ಒಎನ್‌ಜಿಸಿ, ಐಟಿಸಿ ಹಾಗೂ ಟೆಕ್‌ ಮಹೀಂದ್ರಾ ಷೇರುಗಳು ಸಹ ಲಾಭ ಗಳಿಸಿವೆ.

ವಿದೇಶಿ ಹೂಡಿಕೆದಾರರು ಬುಧವಾರ ₹1,466.52 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಗುರುವಾರ ಡಾಲರ್‌ ಎದುರು ರೂಪಾಯಿ ಮೌಲ್ಯ 13 ಪೈಸೆ ಚೇತರಿಕೆ ಕಂಡು ಪ್ರತಿ ಡಾಲರ್‌ಗೆ ₹75.67 ಆಗಿದೆ.

ದೇಶದಲ್ಲಿ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು, ಚೀನಾ ಮತ್ತು ಅಮೆರಿಕ ನಡುವಿನ ಸಂಘರ್ಷ ಹೂಡಿಕೆದಾರರಲ್ಲಿ ಆತಂಕ ಉಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT