
ಜನ ನಾಯಗನ್: ನಟ ವಿಜಯ್ ಅವರ ಬಹುನಿರೀಕ್ಷಿತ ಸಿನಿಮಾ ಜನನಾಯಗನ್ 2026ರಲ್ಲಿ ತೆರೆ ಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ರಾಜಕೀಯ, ಥ್ರಿಲ್ಲರ್ ಸಿನಿಮಾವಾಗಿರುವ ಇದು ಜನವರಿ 9ರಂದು ತೆರೆಕಾಣಲಿದೆ. ದಳಪತಿ ವಿಜಯ್ ಪೂರ್ಣಾವಧಿ ರಾಜಕೀಯ ಪ್ರವೇಶ ಮಾಡಿರುವುದರಿಂದ, ಇದು ಅವರ ಕೊನೆಯ ಚಿತ್ರವಾಗಲಿದೆ.

ಟಾಕ್ಸಿಕ್: ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಮಾಫಿಯಾ ಕುರಿತ ಸಿನಿಮಾವಾಗಿದೆ. ಸಿನಿಮಾದಲ್ಲಿ ಯಶ್ ನಾಯಕ ನಟನಾಗಿ ನಟಿಸಿದ್ದಾರೆ. ಗೋವಾದ ಡ್ರಗ್ ಮಾಫಿಯಾದ ಕುರಿತ ಕಥಾ ಹಂದರವನ್ನು ಹೊಂದಿದೆ. ಈ ಸಿನಿಮಾ 2026ರ ಮಾರ್ಚ್ 19ರಂದು ಸಿನಿಮಾ ಬಿಡುಗಡೆಯಾಗಲಿದೆ.

ಜೈಲರ್ 2: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್–2 ಸಿನಿಮಾ, 2026ರ ಜೂನ್ 12ರಂದು ಬಿಡುಗಡೆಯಾಗಲಿದೆ.

NTRNeel: ಹೆಸರು ಅಂತಿಮಗೊಳ್ಳದ ಜೂನಿಯರ್ ಎನ್‌ಟಿಆರ್ ಮತ್ತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಬಹುನಿರೀಕ್ಷಿತ ಆಕ್ಷನ್ ಸಿನಿಮಾ NTRNeel ಟ್ಯಾಗ್ ಲೈನ್ ಹೊಂದಿರುವ ಸಿನಿಮಾ 2026ರಲ್ಲಿ ಬಿಡುಗಡೆಯಾಗಲಿದೆ.

ರಾಮಾಯಣ: ರಾಮಾಯಣ ಸಿನಿಮಾ ಭಾರತದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ 2026ರಲ್ಲಿ ತೆರೆಕಾಣಲಿದೆ ಎಂದು ಹೇಳಲಾಗಿದೆ.

ಬಾರ್ಡರ್ 2: ಸನ್ನಿ ಡಿಯೋಲ್, ದಿಲ್ಜಿತ್ ದೋಸಾಂಜ್, ವರುಣ್ ಧವನ್ ಮತ್ತು ಅಹಾನ್ ಶೆಟ್ಟಿಯ ತಾರಾಬಳಗದ ಬಾರ್ಡರ್ 2, ಬಹುನಿರೀಕ್ಷಿತ ಚಿತ್ರವಾಗಿದೆ. ಅನುರಾಗ್ ಸಿಂಗ್ ನಿರ್ದೇಶಿಸಿದ ಮತ್ತು ಟಿ-ಸೀರೀಸ್ ಮತ್ತು ಜೆಪಿ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಕಿಂಗ್: ಸಿದ್ಧಾರ್ಥ್ ಆನಂದ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರ 'ಕಿಂಗ್' ನಲ್ಲಿ ಸೂಪರ್ ಸ್ಟಾರ್ ಶಾರುಖ್ ಖಾನ್ ಜೊತೆಗೆ ಸುಹಾನಾ ಖಾನ್ ನಟಿಸಿದ್ದಾರೆ. 2026ರಲ್ಲಿ ಈ ಚಿತ್ರ ಬಿಡುಗಡೆ ಕಾಣುವ ನಿರೀಕ್ಷೆಯಲ್ಲಿದೆ.

ಲವ್ ಅಂಡ್ ವಾರ್: ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ನಟಿಸಿರುವ ಲವ್ ಅಂಡ್ ವಾರ್ ಚಿತ್ರ 2026ರಲ್ಲಿ ಬಿಡುಗಡೆಯಾಗಲಿದೆ. ಸಿನಿಮಾವು ಹಾಸ್ಯ ಹಾಗೂ ಪ್ರೇಮ ಕಥೆಯಿಂದ ಕೂಡಿರಲಿದೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.