ನವದೆಹಲಿ: ಮಿದುಳಿನ ತ್ಯಾಜ್ಯವನ್ನು ತೆಗೆದುಹಾಕಲು ಸಹಾಯ ಮಾಡುವ ಸೆರೆಬ್ರೊಸ್ಪೈನಲ್ ದ್ರವ ದುರ್ಬಲಗೊಳ್ಳುವುದರಿಂದ ನಿದ್ರಾಹೀನತೆ ಹಾಗೂ ಹೃದಯದ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ಇದರಿಂದ ಬುದ್ಧಿಮಾಂದ್ಯತೆ ಹೆಚ್ಚಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಸೆರೆಬ್ರೊಸ್ಪೈನಲ್ ದ್ರವವು ಮಿದುಳಿನ ಕೇಂದ್ರ ನರಮಂಡಲವನ್ನು ಅಪಾಯಗಳಿಂದ ರಕ್ಷಿಸಿ ಪೋಷಕಾಂಶಗಳನ್ನು ಒದಗಿಸುತ್ತದೆ. ಸೆರೆಬ್ರೊಸ್ಪೈನಲ್ ಬಣ್ಣರಹಿತ ದ್ರವವು ಗ್ಲಿಂಫಾಟಿಕ್ ವ್ಯವಸ್ಥೆಯ ಭಾಗವಾಗಿದೆ.

ಗ್ಲಿಂಫಾಟಿಕ್ ವ್ಯವಸ್ಥೆಯನ್ನು ಬುದ್ಧಿಮಾಂದ್ಯತೆಯಿಂದ ರಕ್ಷಿಸುವ ಸೂಕ್ತ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಅಮಿಲಾಯ್ಡ್ ಎಂದು ಕರೆಯಲ್ಪಡುವ ಪ್ರೋಟೀನ್ಗಳು ಒಟ್ಟು ಸೇರಿ ವಿಷಕಾರಿ 'ಪ್ಲೇಕ್'ಗಳನ್ನು ರೂಪಿಸಿ, ಮರೆವಿನ ಕಾಯಿಲೆಗೆ ಕಾರಣವಾಗುತ್ತದೆ ಎಂದು ಬ್ರಿಟನ್ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ಮಾಹಿತಿ ನೀಡಿದ್ದಾರೆ.
.ಐಸ್ಲ್ಯಾಂಡ್ನಲ್ಲೂ ಸೊಳ್ಳೆ ಪತ್ತೆ: ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ಎಂದ ತಜ್ಞರು.
ಬುದ್ಧಿಮಾಂದ್ಯತೆಯು ಒಂದು ನರ ಸಂಕುಚಿತಗೊಳ್ಳುವ ಕಾಯಿಲೆಯಾಗಿದೆ. ವಯಸ್ಸಾದಂತೆ ನಿರಂತರವಾಗಿ ನೆನಪು, ಆಲೋಚನಾ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಇದರಿಂದ ದೈನಂದಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರಬಹುದು ಎಂದು ಸಂಶೋಧನೆ ಮಾಹಿತಿ ನೀಡಿದೆ.

ಮಿದುಳಿನ ಸಣ್ಣ ರಕ್ತನಾಳಗಳ ಅಸ್ವಸ್ಥತೆ: ಇದು ರಕ್ತದ ಹರಿವಿನ ಮೇಲೆ ಪರಿಣಾಮ ಬೀರಿ ನಡವಳಿಕೆಯ ಸಮಸ್ಯೆ ಉಂಟುಮಾಡಬಹುದು. ರಕ್ತದೊತ್ತಡವು ಹೃದಯ ರಕ್ತನಾಳದ ಅಪಾಯಕಾರಿ ಅಂಶಗಳು ಗ್ಲಿಂಫಾಟಿಕ್ ವ್ಯವಸ್ಥೆಯನ್ನು ಹಾನಿಗೊಳಿಸಿ, ಮಾನಸಿಕ ಆರೋಗ್ಯದ ಮೇಲೆ ತೊಂದರೆ ಉಂಟಾಗುವ ಸಾಧ್ಯತೆ ಇದೆ.

ಬ್ರಿಟನ್ನ ಬಯೋಬ್ಯಾಂಕ್ನಲ್ಲಿ 40 ಸಾವಿರ ವಯಸ್ಕರ ಎಂಆರ್ಐ ಮೆದುಳಿನ ಸ್ಕ್ಯಾನ್ಗಳನ್ನು ವಿಶ್ಲೇಷಿಸಿದ ಸಂಶೋಧಕರು, 10 ವರ್ಷಗಳ ಅವಧಿಯಲ್ಲಿ ಬುದ್ಧಿಮಾಂದ್ಯತೆಯ ಪ್ರಮಾಣ ಹೆಚ್ಚಿದೆ. ಈ ಸಮಸ್ಯೆ ಹೆಚ್ಚಾದಂತೆ ಸೆರೆಬ್ರಲ್ ಸಣ್ಣ ನಾಳಗಳ ಕಾಯಿಲೆಗೆ ಕಾರಣವಾಗುತ್ತದೆ ಎಂದಿದ್ದಾರೆ.

ಗ್ಲಿಂಫಾಟಿಕ್ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ‘ಉತ್ತಮ ನಿದ್ರೆ’ಯು ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡಲು ಒಂದು ತಂತ್ರವಾಗಿದೆ ಎಂದು ‘ದಿ ಜರ್ನಲ್ ಆಫ್ ದಿ ಆಲ್ಝೈಮರ್ಸ್’ ಅಧ್ಯಯನ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.