ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಇಟ್ಟುಕೊಳ್ಳಲು ಇತ್ತಿಚೀನ ವರ್ಷಗಳಲ್ಲಿ ಜಿಮ್ಗೆ ಹೋಗುವರ ಸಂಖ್ಯೆ ಹೆಚ್ಚಾಗಿದೆ. ತೂಕ ಇಳಿಸಲು, ಹೆಚ್ಚಿಸಲು ಜಿಮ್ನಲ್ಲಿ ಕಸರತ್ತು ಮಾಡುತ್ತಾರೆ. ತೂಕ ಹೆಚ್ಚಿಸಲು, ಸ್ನಾಯುಗಳನ್ನ ಬೆಳೆಸಲು ಏನು ಮಾಬೇಕು ಎನ್ನುವ ಮಾಹಿತಿ ಇಲ್ಲಿದೆ.

ಕೆಲವರು ತೂಕ ಎತ್ತುವುದಕ್ಕೆ ವೇಗವಾಗಿ ಹೊಂದಿಕೊಳ್ಳುತ್ತಾರೆ. ಅಂಥವರು ತೂಕ ಬೇಗನೇ ಹೆಚ್ಚಿಸಿಕೊಳ್ಳಬಹುದು ಎನ್ನುವುದು ವರದಿಯೊಂದು ಹೇಳಿದೆ.

ತೂಕ ಎತ್ತಿದಾಗ, ಅದು ನಿಮ್ಮ ಸ್ನಾಯುಗಳ ಸಾಮರ್ಥ್ಯದ ಮೇಳೆ ಒತ್ತಡವನ್ನು ಹೆಚ್ಚಿಸುತ್ತದೆ. ಚಯಪಚಯ ಕ್ರಿಯೆಗೆ ಬಳಸುವ ಲ್ಯಾಕ್ಟೇಟ್ ಮತ್ತು ನೀರಿನಾಂಶಯುಕ್ತ ವಸ್ತುಗಳು ಸ್ನಾಯುಗಳು ನಿರ್ಮಾಣಗೊಳ್ಳಲು ಕಾರಣವಾಗುತ್ತವೆ.

ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಲು ಜೀವನ ಶೈಲಿಯ ಅಂಶಗಳು ಸಹ ಮುಖ್ಯವಾಗುತ್ತವೆ. ಸರಿಯಾದ ಸಮಯಕ್ಕೆ ನಿದ್ದೆ, ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಸೇವನೆ, ಹೆಚ್ಚು ಒತ್ತಡಕ್ಕೊಳಗಾಗದೆ ಕೆಲಸ ಮಾಡುವುದು ಮುಂತಾದವುಗಳು ದೇಹ ಸದೃಢವಾಗಿ ಇಡಲು ಸಹಕರಿಸುತ್ತದೆ. ಇವುಗಳನ್ನು ಪಾಲಿಸದಿದ್ದರೆ ನಿಮ್ಮ ಪ್ರಗತಿ ನಿಧಾನವಾಗುವ ಸಾಧ್ಯತೆಯಿದೆ.

ತೂಕವನ್ನು ಹೆಚ್ಚಿಸಿಕೊಳ್ಳಲು ಇಳಿಕೆಯಿಂದ ಏರಿಕೆ ಕ್ರಮ ಪಾಲಿಸಬೇಕು. ಉದಾಹರಣೆಗೆ; ನೀವು ಮೊದಲ ವಾರದಲ್ಲಿ 5 ಕೆ.ಜಿ ಡಬಲ್ಸ್ ಎತ್ತಿದ್ದರೆ ನಂತರ ದಿನಗಳಲ್ಲಿ 6 ಕೆ.ಜಿ ಎತ್ತುವ ಪ್ರಯತ್ನ ಮಾಡಿದರೆ ಹಂತ ಹಂತವಾಗಿ ದೇಹ ಸದೃಢವಾಗುತ್ತದೆ. ಅಲ್ಲದೇ ನಿಧನವಾಗಿ ತೂಕ ಹೆಚ್ಚಿಸುವ ಎತ್ತುವ ಅಭ್ಯಾಸ ಮಾಡಬೇಕು.

ನಿಮ್ಮ ಗುರಿ ಸ್ನಾಯುಗಳನ್ನು ನಿರ್ಮಿಸುವುದಾಗಿದ್ದರೆ, ಪ್ರತಿ ವಾರ ಒಂದೇ ರೀತಿಯ ತೂಕವನ್ನು ಎತ್ತಿದರೆ ಸಾಲುವುದಿಲ್ಲ, ನಿರಂತರವಾಗಿ ಹೆಚ್ಚೆಚ್ಚು ತೂಕ ಎತ್ತುವುದರ ಜತೆ ಪ್ರತಿ ದಿನ ಅಭ್ಯಾಸ ಮಾಡಬೇಕು.

ನೋಟ್ ಪುಸ್ತಕ ಇಟ್ಟುಕೊಂಡು ಪ್ರತಿದಿನದ ಜಿಮ್ ವರ್ಕೌಟ್ ಬಗ್ಗೆ ಬರೆದು ಇಟ್ಟುಕೊಳ್ಳುವುದು ಒಳ್ಳೆಯ ವಿಧಾನ. ವಾರವೀಡಿ ವರ್ಕೌಟ್ ಮಾಡುವುದರ ಜತೆ ಆಗಾಗ ವಿಶ್ರಾಂತಿ ಪಡೆಯಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.