ದುಬೈ: ಭಾನುವಾರ ರಾತ್ರಿ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದ ಗ್ಯಾಲರಿಗಳು ನಿರೀಕ್ಷೆಯಂತೆ ಪೂರ್ಣ ತುಂಬಿರಲಿಲ್ಲ. ಆದರೆ, ಇದರಿಂದ ಭಾರತದ ಆಟಗಾರರ ಆಲ್ರೌಂಡ್ ಆಟದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಪಾಕಿಸ್ತಾನ ಎದುರಿನ ಈ ಪಂದ್ಯವನ್ನು ಬಹಿಷ್ಕರಿಸುವಂತೆ ಭಾರತ ತಂಡಕ್ಕೆ ಹಲವು ಸಂಘಟನೆಗಳು ಕರೆ ನೀಡಿದ್ದರ ನಡುವೆ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು 7 ವಿಕೆಟ್ಗಳಿಂದ ಪಾಕಿಸ್ತಾನ ತಂಡವನ್ನು ಸದೆಬಡಿಯಿತು. ಪಂದ್ಯದಲ್ಲಿ ಇನ್ನೂ 25 ಎಸೆತಗಳು ಬಾಕಿ ಇರುವಂತೆಯೇ ಜಯಶಾಲಿಯಾದ ಭಾರತ ತನ್ನ ಸಾಮರ್ಥ್ಯ ಮೆರೆಯಿತು.

ಉಭಯ ತಂಡಗಳ ನಡುವೆ ನಡೆದ ಕಳೆದ ಎಂಟು ಪಂದ್ಯಗಳ ಪೈಕಿ ಏಳರಲ್ಲಿ ಗುರಿ ಬೆನ್ನಟ್ಟಿದ ತಂಡವೇ ಗೆದ್ದಿತ್ತು. ಅದರಿಂದಾಗಿ ಇಲ್ಲಿ ಪಾಕ್ ತಂಡದ ನಾಯಕ ಸಲ್ಮಾನ್ ಆಘಾ ಅವರು ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಪಂದ್ಯದಲ್ಲಿ ಹಂತ ಹಂತವಾಗಿ ಪಿಚ್ನಲ್ಲಿ ಚೆಂಡಿನ ಚಲನೆ ನಿಧಾನವಾಗಬಹುದು ಚಲಿಸಬಹುದು ಎಂದು ಅವರು ನಿರೀಕ್ಷಿಸಿದ್ದರು. ಆದರೆ ಇದು ಅವರಿಗೆ ತಿರುಗುಬಾಣವಾಯಿತು. ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರಿದ್ದ ಭಾರತದ ಸ್ಪಿನ್ ವಿಭಾಗವು ಪಾಕ್ ತಂಡಕ್ಕೆ ಸಿಂಹಸ್ವಪ್ನವಾಯಿತು. 9 ವಿಕೆಟ್ಗಳಿಗೆ 127 ರನ್ಗಳ ಸಾಧಾರಣ ಮೊತ್ತಕ್ಕೆ ಸ್ಪಿನ್ ಬಳಗವು ಪಾಕ್ ತಂಡವನ್ನು ನಿಯಂತ್ರಿಸಿತು.

ಟೂರ್ನಿಯ ಮೊದಲ ಪಂದ್ಯದಲ್ಲಿ ಯುಎಇ ಎದುರು ನಾಲ್ಕು ವಿಕೆಟ್ ಗಳಿಸಿದ್ದ ಕುಲದೀಪ್, ಇಲ್ಲಿ 18ಕ್ಕೆ3 ಪಡೆದರು. ಅಕ್ಷರ್ ಪಟೇಲ್ ಅವರು ಚಾಣಾಕ್ಷತೆಯಿಂದ ಬೌಲಿಂಗ್ ಮಾಡಿದರು. ಎರಡು ವಿಕೆಟ್ ಪಡೆದು ಕುಲದೀಪ್ ಅವರಿಗೆ ಉತ್ತಮ ಬೆಂಬಲ ನೀಡಿದರು.

ಶಾಹೀನ್ ಶಾ ಆಫ್ರಿದಿ ಅವರು 16 ಎಸೆತಗಳಲ್ಲಿ 33 ರನ್ ಗಳಿಸಿದೇ ಹೋಗಿದ್ದರೆ ಪಾಕಿಸ್ತಾನ ಬ್ಯಾಟಿಂಗ್ನಲ್ಲಿ ಯಾವುದೇ ಸ್ವಾರಸ್ಯ ಇರುತ್ತಿರಲ್ಲಿ ಆಫ್ರಿದಿ ಅವರು ಇನಿಂಗ್ಸ್ನ ಕೊನೆ ಓವರ್ನಲ್ಲಿ ಹಾರ್ದಿಕ್ ಪಾಂಡ್ಯ ಎಸೆತವನ್ನು ಸಿಕ್ಸರ್ಗೆ ಎತ್ತಿದರು. ಅದೂ ಸೇರಿದಂತೆ ಒಟ್ಟು ನಾಲ್ಕು ಸಿಕ್ಸರ್ಗಳನ್ನು ಅವರು ಇನಿಂಗ್ಸ್ನಲ್ಲಿ ಸಿಡಿಸಿದರು.

ಗುರಿ ಬೆನ್ನಟ್ಟಿದ ಭಾರತ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ಆಫ್ರಿದಿ ಹಾಕಿದ ಮೊದಲ ಎಸೆತವನ್ನೇ ಬೌಂಡರಿಗೆರೆ ದಾಟಿಸಿದರು. ನಂತರದ ಎಸೆತವನ್ನು ಲಾಂಗ್ ಆಫ್ಗೆ ಸಿಕ್ಸರ್ ಎತ್ತಿದರು.

ಆದರೆ ಆಫ್ಸ್ಪಿನ್ನರ್ ಸೈಮ್ ಅಯೂಬ್ ಅವರ ಎಸೆತಗಳಿಗೆ ಮೊದಲು ಗಿಲ್ ಮತ್ತು ಅಭಿಷೇಕ್ ಅವರು ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಸೂರ್ಯಕುಮಾರ್ ಮತ್ತು ತಿಲಕ್ ವರ್ಮಾ ಅವರು ಸ್ವಲ್ಪ ಎಚ್ಚರಿಕೆಯಿಂದ ಲಯ ಕಂಡುಕೊಂಡರು. ಇವರಿಬ್ಬರ ಅರ್ಧಶತಕದ ಜೊತೆಯಾಟವು ತಂಡದ ಗೆಲುವಿಗೆ ಹಾದಿ ಸುಗಮಗೊಳಿಸಿತು. ಸೂಫಿಯಾನ್ ಮುಕೀಂ ಅವರ ಎಸೆತವನ್ನು ಮಿಡ್ವಿಕೆಟ್ಗೆ ಸಿಕ್ಸರ್ ಎತ್ತುವ ಮೂಲಕ ವಿಜಯದ ರನ್ ದಾಖಲಿಸಿದ ಸೂರ್ಯಕುಮಾರ್ ತಮ್ಮ 35ನೇ ಜನ್ಮದಿನವನ್ನೂ ಸಂಭ್ರಮಿಸಿದರು.

ಸೂರ್ಯಕುಮಾರ್ ಮತ್ತು ಶಿವಂ ದುಬೆ ಅವರು ಗೆಲುವಿನ ನಂತರ ಪಾಕಿಸ್ತಾನ ಆಟಗಾರರೊಂದಿಗೆ ಸಾಂಪ್ರದಾಯಿಕ ಹಸ್ತಲಾಘವ ಮಾಡದೇ ಪೆವಿಲಿಯನ್ನತ್ತ ಸಾಗಿದರು. ಟಾಸ್ ಹಾಕುವ ಸಂದರ್ಭದಲ್ಲಿ ಸೂರ್ಯಕುಮಾರ್ ಹಾಗೂ ಆಘಾ ಪರಸ್ಪರ ಕೈಕುಲುಕಿರಲಿಲ್ಲ.

ಪಾಕ್ ಆರಂಭಿಕ ಬ್ಯಾಟರ್ ಅಯೂಬ್ ಅವರು ಯುಎಇ ವಿರುದ್ಧದ ಪಂದ್ಯದಲ್ಲಿಯೂ ವೈಫಲ್ಯ ಅನುಭವಿಸಿದ್ದರು. ಈ ಪಂದ್ಯದಲ್ಲಿಯೂ ಅವರು ಲಯ ಕಂಡುಕೊಳ್ಳಲಿಲ್ಲ. ಹಾರ್ದಿಕ್ ಪಾಂಡ್ಯ ಹಾಕಿದ ಇನಿಂಗ್ಸ್ನ ಮೊದಲ ಎಸೆತದಲ್ಲಿಯೇ ಬೂಮ್ರಾಗೆ ಕ್ಯಾಚ್ ಕೊಟ್ಟು ಔಟಾದರು. ನಂತರದ ಓವರ್ನಲ್ಲಿ ಮೊಹಮ್ಮದ್ ಹ್ಯಾರಿಸ್ ಅವರು ಬೂಮ್ರಾ ಎಸೆತದಲ್ಲಿ ಔಟಾದರು. ಇದರಿಂದಾಗಿ ಪಾಕಿಸ್ತಾನ ತಂಡವು ಕೇವಲ 6 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತು.

ಈ ಹಿಂದೆ ಕೆಲವು ಪಂದ್ಯಗಳಲ್ಲಿ ಭಾರತ ತಂಡವನ್ನು ಕಾಡಿದ್ದ ಆರಂಭಿಕ ಬ್ಯಾಟರ್ ಸಾಹಿಬ್ಝಾದಾ ಫರ್ಹಾನ್ ಮತ್ತು ಫಕರ್ ಜಮಾನ್ ಅವರು ಇಲ್ಲಿ ಒಂದಿಷ್ಟು ಜಿಗುಟುತನ ತೋರಿಸಿದರು. ಜಮಾನ್ ಅವರು ವೇಗದ ಬೌಲರ್ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದರು. ಆದರೆ ಸ್ಪಿನ್ನರ್ಗಳ ಮುಂದೆ ಎಚ್ಚರಿಕೆಯಿಂದ ಆಡಿದರು. ಆದರೆ ಫರ್ಹಾನ್ ಅವರು ಬೂಮ್ರಾ ಎಸೆತಗಳಲ್ಲಿ ಎರಡು ಸಿಕ್ಸರ್ ಹೊಡೆದರೂ ಬ್ಯಾಟಿಂಗ್ ರೊಟೇಟ್ ಮಾಡುವಲ್ಲಿ ವಿಫಲರಾದರು.

ಪಾಕ್ ತಂಡವು ಏಳರಿಂದ ಹತ್ತನೇ ಓವರ್ಗಳ ನಡುವೆ ತಡಬಡಾಯಿಸಿತು. ಈ ಹಂತದಲ್ಲಿ ಕೇವಲ ಏಳು ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ಅಕ್ಷರ್ ಅವರು ಚಾಣಾಕ್ಷತೆಯಿಂದ ತಮ್ಮ ಎಸೆತಗಳಲ್ಲಿ ವೇಗದಲ್ಲಿ ಏರಿಳಿತ ಮಾಡಿದ್ದು ಫಲಿಸಿತು. ಕುಲದೀಪ್ ಅವರ ಎಸೆತಗಳಿಗೆ ಬ್ಯಾಟರ್ಗಳ ಬಳಿ ಉತ್ತರವೇ ಇರಲಿಲ್ಲ.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ: 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 127 (ಸಾಹಿಬ್ ಝಾದಾ ಫರ್ಹಾನ್ 40, ಶಾಹೀನ್ ಅಫ್ರಿದಿ ಔಟಾಗದೇ 33, ಜಸ್ಪ್ರೀತ್ ಬೂಮ್ರಾ 28ಕ್ಕೆ2, ಕುಲದೀಪ್ ಯಾದವ್ 18ಕ್ಕೆ3, ಅಕ್ಷರ್ ಪಟೇಲ್ 18ಕ್ಕೆ2)

ಭಾರತ: 15.5 ಓವರ್ಗಳಲ್ಲಿ 3ಕ್ಕೆ131 (ಅಭಿ ಷೇಕ್ ಶರ್ಮಾ 31, ಸೂರ್ಯಕುಮಾರ್ ಯಾದವ್ ಔಟಾಗದೇ 47, ತಿಲಕ್ ವರ್ಮಾ 31, ಸೈಮ್ ಅಯೂಬ್ 35ಕ್ಕೆ3) ಫಲಿತಾಂಶ: ಭಾರತ ತಂಡಕ್ಕೆ 7 ವಿಕೆಟ್ ಜಯ.

ಪಂದ್ಯಶ್ರೇಷ್ಠ: ಕುಲದೀಪ್ ಯಾದವ್.
.Asia Cup | ಬಲಿಷ್ಠ ಭಾರತದೆದುರು ಪಾಕ್ಗೆ ‘ಸತ್ವಪರೀಕ್ಷೆ’.Asia Cup: ಬಾಂಗ್ಲಾ ವಿರುದ್ಧ ಶ್ರೀಲಂಕಾಕ್ಕೆ 6 ವಿಕೆಟ್ಗಳ ಜಯ.Asia Cup: ಬಾಂಗ್ಲಾಕ್ಕೆ ಲಂಕಾ ಲಗಾಮು.Asia Cup | ಭಾರತ-ಪಾಕ್ ಪಂದ್ಯ ರದ್ದುಗೊಳಿಸಿ: ಪಹಲ್ಗಾಮ್ ಸಂತ್ರಸ್ತೆ ಮನವಿ .ಯುದ್ಧ ನಿಲ್ಲಿಸುವ ಮೋದಿಗೆ ಭಾರತ-ಪಾಕ್ ಪಂದ್ಯ ನಿಲ್ಲಿಸಲಾಗುತ್ತಿಲ್ಲ: ಸಂಜಯ್ ಲೇವಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.