ದುಬೈ: ಏಷ್ಯಾಕಪ್ 2025ರ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡ ಒಮಾನ್ ವಿರುದ್ಧ ಪ್ರಯಾಸಕರ ಗೆಲುವಿನೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೂಪರ್ 4ಗೆ ಹಂತಕ್ಕೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್ ಕಳೆದುಕೊಂಡರೂ ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ಗೆ ಬಾರದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಏಷ್ಯಾ ಕಪ್ನಲ್ಲಿ ಬಲಿಷ್ಠ ತಂಡವಾಗಿರುವ ಟೀಂ ಇಂಡಿಯಾ, ಲೀಗ್ನಲ್ಲಿ ನಡೆದ ಮೊದಲ ಎರಡು ಪಂದ್ಯಗಳಲ್ಲಿ ಯುಎಇ ಹಾಗೂ ಪಾಕಿಸ್ತಾನ ತಂಡಗಳ ವಿರುದ್ಧ ಸುಲಭವಾಗಿ ಗೆಲ್ಲುವ ಮೂಲಕ ಸೂಪರ್ 4 ಹಂತಕ್ಕೆ ಲಗ್ಗೆ ಇಟ್ಟಿತ್ತು. ಹಾಗಾಗಿ ಅಷ್ಟೇನು ಮಹತ್ವವಲ್ಲದ ಪಂದ್ಯದಲ್ಲಿ ಭಾರತ ತಂಡ ತನ್ನ ಬ್ಯಾಟಿಂಗ್ ಬಲ ಹೆಚ್ಚಿಸಿಕೊಳ್ಳಲು ಹಲವು ಪ್ರಯೋಗ ನಡೆಸಿತು. ಅದರಲ್ಲಿ ಸೂರ್ಯಕುಮಾರ್ ಬ್ಯಾಟಿಂಗ್ ಕ್ರಮಾಂಕದಲ್ಲಿನ ಬದಲಾವಣೆ ಕೂಡ ಒಂದು.

ಟೂರ್ನಿಯ ಮೊದೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿರದ ಆಟಗಾರರಿಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಲು ಭಾರತ ತಂಡ ನಿರ್ಧರಿಸಿತ್ತು. ಪರಿಣಾಮ ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದರು. ನಾಲ್ಕನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ನಡೆಸಿದರು. ಸಾಮಾನ್ಯವಾಗಿ ಸೂರ್ಯಕುಮಾರ್ ಈ ಎರಡು ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು.
.Asia Cup 2025: ಟಾಸ್ ವೇಳೆ ಕೈ ಕುಲುಕದೆ ನಡೆದ ಸೂರ್ಯಕುಮಾರ್–ಸಲ್ಮಾನ್ ಆಘಾ.Asia Cup: ಪಾಕ್ ಪಂದ್ಯಕ್ಕೂ ಮುನ್ನ ಭಾರತೀಯ ಬ್ಯಾಟರ್ಗಳಿಗೆ ಒಮಾನ್ ಪರೀಕ್ಷೆ.
ಈ ಎರಡು ಕ್ರಮಾಂಕ ಹೊರತಾಗಿಯೂ ಟೀಂ ಇಂಡಿಯಾ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆದರೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ಗೆ ಬರಲಿಲ್ಲ. ಭಾರತ 179 ರನ್ಗಳಿಗೆ 8 ವಿಕೆಟ್ ಕಳೆದುಕೊಂಡಾಗಲೂ ಅವರು ಬ್ಯಾಟಿಂಗ್ಗೆ ಬಾರದಿರಲು ಪ್ರಮುಖ ಕಾರಣ ಭಾರತದ ಬ್ಯಾಟಿಂಗ್ ಬಲ ಹೆಚ್ಚಿಸುವುದಾಗಿತ್ತು. ಹೆಚ್ಚೇನು ಮಹತ್ವದ ಪಂದ್ಯವಾಗಿಲ್ಲದಿದ್ದರಿಂದ ಅವರು ಕೊನೆಯವರೆಗೂ ಬ್ಯಾಟಿಂಗ್ಗೆ ಬರದಿರಲು ನಿರ್ಧರಿಸಿದರು.

ಇನ್ನೂ ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.