ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 01 ಅಕ್ಟೋಬರ್‌ 2023

Published 1 ಅಕ್ಟೋಬರ್ 2023, 13:52 IST
Last Updated 1 ಅಕ್ಟೋಬರ್ 2023, 13:52 IST
ಅಕ್ಷರ ಗಾತ್ರ
Introduction

ಬದಲಾದ ಪರಿಸ್ಥಿತಿಯಲ್ಲಿ JDS -BJP ಮೈತ್ರಿ ಅನಿವಾರ್ಯ: ನಿಖಿಲ್ ಕುಮಾರಸ್ವಾಮಿ, ತಿರುಪತಿ: ಭಕ್ತರ ದಟ್ಟಣೆ, 48 ಗಂಟೆ ಕಳೆದರೂ ಸಿಗದ ದರ್ಶನ, ಏಷ್ಯನ್ ಕ್ರೀಡಾಕೂಟ: ಶೂಟಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ಪಾರ್ಕ್‌ನಲ್ಲಿ ಕಸಗುಡಿಸಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.

1

ತಿರುಪತಿ: ಭಕ್ತರ ದಟ್ಟಣೆ, 48 ಗಂಟೆ ಕಳೆದರೂ ಸಿಗದ ದರ್ಶನ, ಟೋಕನ್‌ ವಿತರಣೆ ಸ್ಥಗಿತ

ಸುಪ್ರಸಿದ್ಧ ಧಾರ್ಮಿಕ ಸ್ಥಳ ತಿರುಪತಿಯ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದ್ದು, ಭಕ್ತರ ದಟ್ಟಣೆಯಿಂದಾಗಿ ದರ್ಶನಕ್ಕಾಗಿ 48 ಗಂಟೆಗೂ ಅಧಿಕ ಸಮಯ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ಸಂಪೂರ್ಣ ಸುದ್ದಿ ಓದಿ

2

ಪಾರ್ಕ್‌ನಲ್ಲಿ ಕಸಗುಡಿಸಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಕರೆಕೊಟ್ಟಿರುವ ಸ್ವಚ್ಛತಾ ಅಭಿಯಾನದ ಶ್ರಮದಾನಕ್ಕೆ ದೇಶದಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಕ್ಕಳಿಂದ ಹಿಡಿದು ರಾಜಕೀಯ ನಾಯಕರವರೆಗೂ ಒಂದು ಗಂಟೆಯ ಶ್ರಮದಾನದಲ್ಲಿ ಪಾಲ್ಗೊಂಡರು.

ಸಂಪೂರ್ಣ ಸುದ್ದಿ ಓದಿ

3

ಬೆಂಗಳೂರಿನಲ್ಲಿ ನಟ ನಾಗಭೂಷಣ ಕಾರು ಅಪಘಾತ: ಮಹಿಳೆ ಸಾವು

ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಟ ನಾಗಭೂಷಣ ಕಾರು ಅಪಘಾತವಾಗಿದ್ದು, ಪಾದಚಾರಿ ಎಸ್.ಪ್ರೇಮಾ (48) ಅವರು ಮೃತಪಟ್ಟಿದ್ದಾರೆ.

ಸಂಪೂರ್ಣ ಸುದ್ದಿ ಓದಿ

4

₹1.60 ಲಕ್ಷ ಕೋಟಿ ದಾಟಿದ ಜಿಎಸ್‌ಟಿ ಸಂಗ್ರಹ: ಹಣಕಾಸು ಸಚಿವಾಲಯ ಮಾಹಿತಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಸೆಪ್ಟೆಂಬರ್‌ನಲ್ಲಿ ₹1.62 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಕಳೆದ ಆಗಸ್ಟ್‌ನಲ್ಲಿ ₹1.59 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿತ್ತು.

ಸಂಪೂರ್ಣ ಸುದ್ದಿ ಓದಿ

5

7 ಮಂತ್ರಿ ಸ್ಥಾನ ಕೊಟ್ಟು, CM ಸ್ಥಾನವೂ ಬೇಕಾ? ಶಾಮನೂರು ವಿರುದ್ಧ ವಿಶ್ವನಾಥ್ ಗರಂ

‘ಜಾತ್ಯತೀತವಾದ ಕಾಂಗ್ರೆಸ್‌ ಪಕ್ಷದ ಪ್ರತಿನಿಧಿಯಾದ ಶಾಮನೂರು ಶಿವಶಂಕರಪ್ಪ ಅವರು ಜಾತಿಯ ಪಕ್ಷದ ಪ್ರತಿನಿಧಿಯಂತೆ ಮಾತನಾಡುತ್ತಿರುವುದನ್ನು ಖಂಡಿಸುತ್ತೇನೆ. ನಿಮಗೆ ಕಾಂಗ್ರೆಸ್‌ನಲ್ಲಿ ಅವಕಾಶ ಸಿಕ್ಕಿವೆ. ಏಳು ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಇನ್ನೆಷ್ಟು ಸ್ಥಾನ ಬೇಕಿತ್ತು’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಪ್ರಶ್ನಿಸಿದರು.

ಸಂಪೂರ್ಣ ಸುದ್ದಿ ಓದಿ

6

ಭಾರತದ ರಾಯಭಾರಿಗೆ ತಡೆ: ಸ್ಪಷ್ಟನೆ ನೀಡಿದ ಸ್ಕಾಟ್ಲೆಂಡ್‌ನ ಗುರುದ್ವಾರ

ಬ್ರಿಟನ್‌ನಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರು ಸ್ಕಾಟ್ಲೆಂಡ್‌ನ ಗ್ಲಾಸ್ಗೊ ಗುರುದ್ವಾರಕ್ಕೆ ಪ್ರವೇಶಿಸುವುದನ್ನು ಕೆಲ ದುಷ್ಕರ್ಮಿಗಳು ತಡೆದ ಬಗ್ಗೆ ಗ್ಲಾಸ್ಗೊ ಗುರುದ್ವಾರದ ಪ್ರಧಾನ ಕಾರ್ಯದರ್ಶಿ ಪ್ರಭ್ಜೋತ್ ಕೌರ್ ಸ್ಪಷ್ಟನೆ ನೀಡಿದ್ದಾರೆ.

ಸಂಪೂರ್ಣ ಸುದ್ದಿ ಓದಿ

7

ಬದಲಾದ ಪರಿಸ್ಥಿತಿಯಲ್ಲಿ JDS -BJP ಮೈತ್ರಿ ಅನಿವಾರ್ಯ: ನಿಖಿಲ್ ಕುಮಾರಸ್ವಾಮಿ

ಮೈತ್ರಿ ಕುರಿತು ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಹಿಂದೆ ಕಾಂಗ್ರೆಸ್ ಜೊತೆ ಆಕಸ್ಮಿಕವಾಗಿ ಮೈತ್ರಿ ಆಗಿತ್ತು. ಈಗ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ಜೊತೆ ಮೈತ್ರಿ ಅನಿವಾರ್ಯವಾಗಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.


ಸಂಪೂರ್ಣ ಸುದ್ದಿ ಓದಿ

8

ಮತಕ್ಕಾಗಿ ಒಂದು ಸಮುದಾಯವನ್ನು ಓಲೈಸುವ ಅಗತ್ಯವಿಲ್ಲ: ಎಚ್.ಡಿ. ಕುಮಾರಸ್ವಾಮಿ

ಮತಕ್ಕಾಗಿ ಒಂದು ಸಮುದಾಯವನ್ನು ಓಲೈಸುವ ಅಗತ್ಯವಿಲ್ಲ: ಮುಸ್ಲಿಮರ‌ ಕುರಿತು ನನಗಿರುವ ಬದ್ದತೆ ಕುರಿತು ಆ ಸಮುದಾಯದ ಬಂಧುಗಳಿಗೆ ಗೊತ್ತಿದೆ. ಈ ಬಗ್ಗೆ ಕಾಂಗ್ರೆಸ್ ನವರು ಮಾಡುತ್ತಿರುವ ಅಪಪ್ರಚಾರದ ಬಗ್ಗೆ ಮುಸ್ಲಿಮರು ಕಿವಿಗೊಡದೆ ಎಚ್ಚರಿಕೆಯಿಂದ ಇರಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.


ಸಂಪೂರ್ಣ ಸುದ್ದಿ ಓದಿ

9

ಏಷ್ಯನ್ ಕ್ರೀಡಾಕೂಟ: ಶೂಟಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ

ಚೀನಾದ ಹಾಂಗ್‌ಜೌನಲ್ಲಿ ನಡೆಯುತ್ತಿರುವ 19 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಶೂಟಿಂಗ್ ತಂಡಕ್ಕೆ ಮತ್ತೊಂದು ಚಿನ್ನದ ಪದಕ ಲಭಿಸಿದೆ.

ಸಂಪೂರ್ಣ ಸುದ್ದಿ ಓದಿ

10

Asian Games 2023 | ಬಾಕ್ಸಿಂಗ್‌ನಲ್ಲಿ ಭಾರತದ ನಿಖತ್‌ಗೆ ಕಂಚಿನ ಪದಕ

ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ. ಇಂದು ನಡೆದ ಮಹಿಳೆಯರ 50 ಕೆ.ಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ನಿಖತ್‌ ಝರೀನ್‌ ಕಂಚಿನ ಪದಕ ಪದಕ ಗೆದ್ದಿದ್ದಾರೆ.


ಸಂಪೂರ್ಣ ಸುದ್ದಿ ಓದಿ