ನವದೆಹಲಿ: ‘ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನವನ್ನು ಎಲ್ಲರಿಗೂ, ಎಲ್ಲೆಡೆ ಒದಗಿಸಲು ‘ರಿಲಯನ್ಸ್ ಇಂಟೆಲಿಜೆನ್ಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಗುವುದು’ ಎಂದು ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.

ಇದು ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಾಗಿದೆ. ದೇಶದಲ್ಲಿ ಎ.ಐ ಮೂಲಸೌಕರ್ಯವನ್ನು ದೊಡ್ಡ ಮಟ್ಟದಲ್ಲಿ ಸ್ಥಾಪಿಸುವ ಮೂಲಕ ಕೃತಕ ಬುದ್ಧಿಮತ್ತೆಯನ್ನು ಒದಗಿಸಲಾಗುವುದು ಎಂದು ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಹೇಳಿದ್ದಾರೆ.

ಎ.ಐ ಮೂಲಸೌಕರ್ಯ ಸ್ಥಾಪಿಸುವುದು, ಜಾಗತಿಕ ಪಾಲುದಾರಿಕೆ ಮಾಡಿಕೊಳ್ಳುವುದು, ಭಾರತಕ್ಕಾಗಿ ಎ.ಐ ಸೇವೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರತಿಭೆಗಳನ್ನು ಬೆಳಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಜಾಮ್ನಗರದಲ್ಲಿ ಗಿಗಾವಾಟ್, ಎ.ಐ ದತ್ತಾಂಶ ಕೇಂದ್ರಗಳ ಸ್ಥಾಪನೆಯ ಕಾರ್ಯ ಈಗಾಗಲೇ ಆರಂಭವಾಗಿದೆ. ಈ ಘಟಕಗಳು ದೇಶದ ಅಗತ್ಯಗಳನ್ನು ಪೂರೈಸಲಿವೆ. ಇದಕ್ಕಾಗಿ ಜಾಗತಿಕ ತಂತ್ರಜ್ಞಾನ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಸಣ್ಣ ವ್ಯಾಪಾರಿಗಳು, ಉದ್ಯಮಿಗಳು, ಶಿಕ್ಷಣ, ಆರೋಗ್ಯ, ಕೃಷಿ ವಲಯಕ್ಕೆ ಕೃತಕ ಬುದ್ಧಿಮತ್ತೆ ಸೇವೆಗಳನ್ನು ಒದಗಿಸಲಾಗುವುದು. ಈ ಸೇವೆಯು ವಿಶ್ವಾಸಾರ್ಹವಾಗಿದ್ದು, ಪ್ರತಿಯೊಬ್ಬ ಭಾರತೀಯನಿಗೆ ಕೈಗೆಟುಕುವ ದರದಲ್ಲಿರುತ್ತದೆ. ಎ.ಐ ಉತ್ಪಾದಕತೆ, ಸಾಮರ್ಥ್ಯವನ್ನು ಹೆಚ್ಚಿಸಲಿದ್ದು, ಮಾನವನ ಸಾಮರ್ಥ್ಯವನ್ನು ಊಹಿಸಲಾಗದ ಮಟ್ಟಕ್ಕೆ ಹೆಚ್ಚಿಸುತ್ತದೆ. ಕೃತಕ ಬುದ್ಧಿಮತ್ತೆಯು ‘ಕಾಮಧೇನು’ ಆಗಿದೆ ಎಂದು ಹೇಳಿದ್ದಾರೆ.

ಕಳೆದ ಮೂರು ವರ್ಷದಲ್ಲಿ ಕಂಪನಿ ₹5.6 ಲಕ್ಷ ಕೋಟಿ ಹೂಡಿಕೆ ಮಾಡಿದೆ ಎಂದು ತಿಳಿಸಿದ್ದಾರೆ.

ಮೆಟಾ, ಗೂಗಲ್ ಜೊತೆ ಪಾಲುದಾರಿಕೆ

ವ್ಯಾಪಾರ ಸಂಸ್ಥೆಗಳಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸೇವೆ ಒದಗಿಸಲು ರಿಲಯನ್ಸ್ ಇಂಡಸ್ಟ್ರೀಸ್, ಮೆಟಾದೊಂದಿಗೆ ಜಂಟಿ ಪಾಲುದಾರಿಕೆ ಮಾಡಿಕೊಂಡಿದೆ.

ಆರಂಭಿಕವಾಗಿ ₹855 ಕೋಟಿ ಹೂಡಿಕೆ ಮಾಡಿದೆ. ಇದರಲ್ಲಿ ಶೇ 70ರಷ್ಟು ರಿಲಯನ್ಸ್ ಇಂಡಸ್ಟ್ರೀಸ್ ಹೂಡಿಕೆ ಮಾಡಿದ್ದರೆ, ಶೇ 30ರಷ್ಟು ಮೆಟಾ ಕಂಪನಿಯದ್ದಾಗಿದೆ. ಎ.ಐ ದತ್ತಾಂಶ ಕೇಂದ್ರಗಳ ಸ್ಥಾಪನೆಗೆ ಗೂಗಲ್ ಜೊತೆಗೆ ರಿಲಯನ್ಸ್ ಪಾಲುದಾರಿಕೆ ಮಾಡಿಕೊಂಡಿದೆ. ಮೆಟಾದ ಲಾಮಾ ಮಾದರಿಯನ್ನು ಉದ್ಯಮಗಳಿಗೆ ನೀಡಲಿದೆ.

‘ಮೆಟಾ ಮತ್ತು ರಿಲಯನ್ಸ್ ಒಪ್ಪಂದದ ಮೂಲಕ ಸೃಷ್ಟಿಯಾಗಲಿರುವ ಎ.ಐ ಮಾದರಿಗಳು ಭಾರತದ ಉದ್ಯಮಗಳಿಗೆ ಸಹಾಯ ಮಾಡಲಿವೆ. ರಿಲಯನ್ಸ್ ಜೊತೆಗಿನ ಒಪ್ಪಂದದಿಂದ ಈ ಸೇವೆಯು ಭಾರತದ ಪ್ರತಿ ಮೂಲೆಗೂ ತಲುಪಲಿದೆ’ ಎಂದು ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್ಬರ್ಗ್ ಹೇಳಿದ್ದಾರೆ.

ಮುಂದಿನ ವರ್ಷ ಜಿಯೊ ಐಪಿಒ

2026ರ ಮೊದಲ ಭಾಗದಲ್ಲಿ ರಿಲಯನ್ಸ್ ಜಿಯೊದ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಪ್ರಕ್ರಿಯೆ (ಐಪಿಒ) ಆರಂಭಿಸಲಾಗುವುದು ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.

ಐಪಿಒಗೆ ಅರ್ಜಿ ಸಲ್ಲಿಸಲು ಎಲ್ಲ ಪ್ರಕ್ರಿಯೆಗಳನ್ನು ಮಾಡಲಾಗುತ್ತಿದೆ. ಮುಂದಿನ ವರ್ಷದ ಆರಂಭದ ವೇಳೆಗೆ ಐಪಿಒ ಆರಂಭಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ. ಪ್ರಸ್ತುತ ಜಿಯೊ ಬಳಕೆದಾರರ ಸಂಖ್ಯೆ 50 ಕೋಟಿ ದಾಟಿದೆ ಎಂದಿದ್ದಾರೆ.

ಜಿಯೊದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶೇ 66.3ರಷ್ಟು ಪಾಲು ಹೊಂದಿದೆ. ಮೆಟಾ ಶೇ 10 ಮತ್ತು ಗೂಗಲ್ ಶೇ 7.7ರಷ್ಟು ಪಾಲನ್ನು ಹೊಂದಿವೆ. ಉಳಿದ ಶೇ 16ರಷ್ಟನ್ನು ಈಕ್ವಿಟಿ ಹೂಡಿಕೆದಾರರು ಹೊಂದಿದ್ದಾರೆ.

ಅಂಬಾನಿ ಅವರು ಷೇರುಗಳ ಮಾರಾಟದ ಪ್ರಮಾಣವನ್ನು ಬಹಿರಂಗಪಡಿಸಿಲ್ಲ. ಆದರೂ, ಈ ಐಪಿಒ ಭಾರತದ ಇತಿಹಾಸದಲ್ಲಿ ಅತಿದೊಡ್ಡ ಸಾರ್ವಜನಿಕ ಷೇರು ಮಾರಾಟ ಆಗಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
.ಜಿಯೊ ಸಿನಿಮಾ ಮತ್ತು ಡಿಸ್ನಿ+ ಹಾಟ್ಸ್ಟಾರ್ ವಿಲೀನ: JioHotstar ಅನಾವರಣ.ಜಿಯೊ ಹಾಟ್ಸ್ಟಾರ್ ಜಗತ್ತಿನ 2ನೇ ದೊಡ್ಡ ಒಟಿಟಿ: ಆಕಾಶ್ ಅಂಬಾನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.