ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಭಾರತ- ರಷ್ಯಾ, ಚೀನಾ-ಅಮೆರಿಕ ಎಲ್ಲರ ಚಿತ್ತ ಚಂದ್ರನತ್ತ; ಚಂದಿರನೇತಕೆ ಕಾಡುವ ನಮ್ಮ?

Published : 11 ಆಗಸ್ಟ್ 2023, 13:25 IST
Last Updated : 11 ಆಗಸ್ಟ್ 2023, 13:25 IST
ಫಾಲೋ ಮಾಡಿ
Comments
ಚಂದ್ರನಲ್ಲಿ ನೀರು ಇದೆಯೇ...?
2008ರಲ್ಲಿ ಮೊದಲ ಬಾರಿಗೆ ಚಂದ್ರನ ಅಂಗಳದಲ್ಲಿ ನೀರು ಇದೆ ಎಂದು ಇಸ್ರೊದ ಚಂದ್ರಯಾನ–1ರ ಮೂಲಕ ತಿಳಿದುಬಂತು. ಹೈಡ್ರಾಕ್ಸಿಲ್ ಕಣಗಳು ಚಂದ್ರನ ಮೇಲೆ ಅಲ್ಲಲ್ಲಿ ಇರುವುದನ್ನು ನಾಸಾ ಕೂಡಾ ಹೇಳಿತು. ಜೀವಿಗಳ ಬದುಕಿಗೆ ಬೇಕಿರುವುದೇ ನೀರು. ಜತೆಗೆ ಜಲಜನಕ ಹಾಗೂ ಆಮ್ಲಜನಕಗಳು ರಾಕೇಟ್‌ನ ಪ್ರಮುಖ ಇಂಧನಗಳೂ ಹೌದು.
ಚಂದ್ರನಲ್ಲಿದೆ ಹೀಲಿಯಂ–3
ಭೂಮಿಯಲ್ಲಿ ವಿರಳವಾಗಿರುವ ಹೀಲಿಯಂನ ಐಸೊಟೋಪ್‌ ಹೀಲಿಯಂ–3 ಚಂದ್ರನಲ್ಲಿದೆ. ಅದರ ಪ್ರಮಾಣ ಕೋಟಿ ಟನ್‌ಗೂ ಹೆಚ್ಚು ಎಂದು ನಾಸಾ ಅಂದಾಜು ಮಾಡಿದೆ. ಫ್ಯೂಷನ್ ರಿಯಾಕ್ಟರ್‌ನಲ್ಲಿ ಪರಮಾಣು ಇಂಧನವಾಗಿ ಇದನ್ನು ಬಳಸಬಹುದು. ಜತೆಗೆ ಇದು ವಿಕರಣ ಹೊರಸೂಸದ ಕಾರಣ ಇದರಿಂದ ಯಾವುದೇ ಹಾನಿಕಾರಕ ತ್ಯಾಜ್ಯ ಹೊರಹೊಮ್ಮುವುದಿಲ್ಲ ಎಂದು ಯುರೋಪ್‌ನ ಬಾಹ್ಯಾಕಾಶ ಏಜೆನ್ಸಿ ಹೇಳಿದೆ.
ಚಂದಮಾಮನ ಬಳಿ ಇವೆ ಅಪರೂಪದ ಖನಿಜಗಳು
ಭೂಮಿಯಲ್ಲಿ ಅತಿ ಅಪರೂಪ ಎನ್ನಬಹುದಾದ ಹಾಗೂ ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳ ಉಪಕರಣಗಳಲ್ಲಿ ಬಳಸುವ ಲೋಹಗಳು ಚಂದ್ರನಲ್ಲಿವೆ ಎಂದೂ ಹೇಳಲಾಗುತ್ತಿದೆ. ಇದರಲ್ಲಿ ಸ್ಕ್ಯಾಂಡಿಯಂ, ಯಟ್ರಿಯಂ, ಲ್ಯಾಂಥೆನೈಡ್‌ 15 ಕೂಡಾ ಇದೆ ಎಂದು ಸಂಶೋಧಕರು ಹೇಳಿದ್ದಾರೆ.
ಹಾಗಿದ್ದರೆ ಚಂದ್ರನಲ್ಲಿ ಗಣಿಗಾರಿಕೆ ನಡೆಸಲು ಸಾಧ್ಯವೇ?
ಇದು ಹೆಚ್ಚು ಸ್ಪಷ್ಟವಿಲ್ಲದಿದ್ದರೂ, ಚಂದ್ರನಲ್ಲಿ ಗಣಿಗಾರಿಕೆ ನಡೆಸಬೇಕೆಂದರೆ ಒಂದಷ್ಟು ಮೂಲಸೌಕರ್ಯಗಳ ನಿರ್ಮಾಣ ಅಗತ್ಯ. ಅದರಲ್ಲಿ ರೋಬೊಗಳ ಪಾತ್ರವೇ ದೊಡ್ಡದು. ಅದಕ್ಕೆ ಅಗತ್ಯವಿರುವ ನೀರು ದೊರೆತಲ್ಲಿ ಮನುಷ್ಯ ಹೆಚ್ಚು ಕಾಲ ಚಂದ್ರನಲ್ಲಿ ಇರಬಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT