2026ರ ನಂತರದಲ್ಲಿ ನಡೆಯಬೇಕಿರುವ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯು ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಹಾಗೂ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ರಾಜಕೀಯವಾಗಿ ವಿರೋಧಿಸುವ ಪಕ್ಷಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಮುಂದೆ ನಡೆಯಲಿರುವ ಕ್ಷೇತ್ರ ಮರುವಿಂಗಡಣೆ ಕಾರ್ಯವು ದಕ್ಷಿಣದ ರಾಜ್ಯಗಳ ಮೇಲಿನ ತೂಗುಗತ್ತಿ ಎಂದು ಭಾವಿಸಿರುವ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಈ ವಿಚಾರವಾಗಿ ಚರ್ಚಿಸಲು ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳ ಸಭೆ ನಡೆಸಿದ್ದಾರೆ. ಅಲ್ಲದೆ, ಕೆಲವು ಮುಖ್ಯಮಂತ್ರಿಗಳಿಗೆ ಪತ್ರ ಕೂಡ ಬರೆದಿದ್ದಾರೆ.

ಮರುವಿಂಗಡಣೆ ವಿಚಾರವಾಗಿ ದಕ್ಷಿಣ ಭಾರತದಲ್ಲಿ ಇರುವ ಆತಂಕವನ್ನು ತಗ್ಗಿಸಲು ಯತ್ನಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ಮರುವಿಂಗಡಣೆ ನಡೆದ ನಂತರದಲ್ಲಿ ದಕ್ಷಿಣದ ಯಾವುದೇ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ಒಂದಿನಿತೂ ಕಡಿಮೆ ಆಗುವುದಿಲ್ಲ ಎಂದಿದ್ದಾರೆ. ಕ್ಷೇತ್ರಗಳ ಸಂಖ್ಯೆಯಲ್ಲಿನ ಹೆಚ್ಚಳದಲ್ಲಿ ದಕ್ಷಿಣದ ರಾಜ್ಯಗಳು ನ್ಯಾಯಸಮ್ಮತ ಪಾಲು ಪಡೆಯುತ್ತವೆ ಎಂದು ಭರವಸೆ ನೀಡಿದ್ದಾರೆ. ಆದರೆ ಈ ಹೇಳಿಕೆಯನ್ನು ಹಲವು ಬಗೆಗಳಲ್ಲಿ ವ್ಯಾಖ್ಯಾನಿಸಲಾಗುತ್ತಿರುವ ಕಾರಣ ವಿವಾದ ತಣ್ಣಗಾಗಿಲ್ಲ.

ಮುಂದಿನ ಜನಗಣತಿ ಪ್ರಕ್ರಿಯೆ ಪೂರ್ಣಗೊಂಡ ನಂತರದಲ್ಲಿ ದೇಶದಲ್ಲಿ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಕಾರ್ಯ ಆರಂಭವಾಗಲಿದೆ. ಈ ಮರುವಿಂಗಡಣೆ ಪ್ರಕ್ರಿಯೆಯು ಲೋಕಸಭಾ ಕ್ಷೇತ್ರಗಳನ್ನು ಹೊಸದಾಗಿ ರಚಿಸುವಲ್ಲಿ ಮಹತ್ವದ ಪರಿಣಾಮ ಬೀರಲಿದೆ, ಭವಿಷ್ಯದ ಲೋಕಸಭೆಯಲ್ಲಿ ವಿವಿಧ ರಾಜ್ಯಗಳಿಗೆ ಇರುವ ಪ್ರಾತಿನಿಧ್ಯದ ಮೇಲೆ ನೇರ ಪರಿಣಾಮ ಉಂಟುಮಾಡಲಿದೆ. ಸಂವಿಧಾನಕ್ಕೆ 2002ರಲ್ಲಿ ತಂದ 84ನೇ ತಿದ್ದುಪಡಿಯ ಅನ್ವಯ 2026ರ ನಂತರ ಕ್ಷೇತ್ರಗಳ ಮರುವಿಂಗಡಣೆ ಕಾರ್ಯ ನಡೆಯುವ ನಿರೀಕ್ಷೆ ಇದೆ.

2021ರಲ್ಲಿ ನಡೆಯಬೇಕಿದ್ದ ಜನಗಣತಿಯು ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ನಡೆಯಲಿಲ್ಲ, ಇಂದಿಗೂ ಅದು ನಡೆದಿಲ್ಲ. ಹೀಗಾಗಿ, ಜನಗಣತಿ ಕೆಲಸ ಪೂರ್ಣಗೊಂಡ ನಂತರ, ಮರುವಿಂಗಡಣೆ ಆಯೋಗದ ರಚನೆಯ ನಂತರ ಕ್ಷೇತ್ರಗಳ ಗಡಿಗಳನ್ನು ಗುರುತಿಸುವ ಕೆಲಸವು ಶುರುವಾಗುತ್ತದೆ. ದೇಶದ ಜನಸಂಖ್ಯೆಯ ಸ್ವರೂಪದಲ್ಲಿ ಆಗಿರುವ ಬದಲಾವಣೆಗಳು, ದೇಶದ ಒಟ್ಟು ಜನಸಂಖ್ಯೆಯಲ್ಲಿ ರಾಜ್ಯಗಳ ಜನಸಂಖ್ಯೆಯ ಶೇಕಡಾವಾರು ಪ್ರಮಾಣದಲ್ಲಿ ಆಗುವ ಬದಲಾವಣೆಗಳ ಕಾರಣದಿಂದಾಗಿ ಮರುವಿಂಗಡಣೆಯ ಕಾರ್ಯದಿಂದ ಆಗುವ ಪರಿಣಾಮಗಳು ಮಹತ್ವ ಪಡೆದುಕೊಳ್ಳುತ್ತವೆ.

ಕಡೆಯ ಬಾರಿ ನಡೆದ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯು ಆಗ ಹೊಸದಾಗಿ ಲಭ್ಯವಿದ್ದ ಜನಸಂಖ್ಯಾ ಅಂಕಿ–ಅಂಶಗಳನ್ನು ಪರಿಗಣಿಸಿತಾದರೂ ಅದು ಪ್ರತಿ ರಾಜ್ಯಕ್ಕೆ ನಿಗದಿಯಾಗಿದ್ದ ಕ್ಷೇತ್ರಗಳ ಸಂಖ್ಯೆಯನ್ನು ಬದಲಿ
ಸುವ ಕೆಲಸ ಮಾಡಲಿಲ್ಲ. ರಾಜ್ಯಗಳ ಒಳಗೆಯೇ ಕ್ಷೇತ್ರಗಳ ಗಡಿಗಳನ್ನು ಮರುಹೊಂದಾಣಿಕೆ ಮಾಡಲಾಯಿತು. ಮುಂದೆ ನಡೆಯಲಿರುವ ಜನಗಣತಿಯನ್ನು ಆಧಾರವಾಗಿ ಇರಿಸಿಕೊಂಡು ಮುಂದಿನ ಕ್ಷೇತ್ರ ಮರುವಿಂಗಡಣೆ ಸಮಿತಿಯು ಕ್ಷೇತ್ರ ಮರುವಿಂಗಡಣೆ ಮಾಡುವುದಾದಲ್ಲಿ, ಪ್ರತಿ ರಾಜ್ಯದ ಜನಸಂಖ್ಯೆ ಪ್ರಮಾಣದಲ್ಲಿ ಆಗಿರುವ ಬದಲಾವಣೆಗಳನ್ನು ಅದು ಗಮನಕ್ಕೆ ತೆಗೆದುಕೊಳ್ಳುತ್ತದೆಯೇ ಅಥವಾ ಹಿಂದೆ ಮಾಡಿದಂತೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುತ್ತದೆಯೇ?

2011ರ ಜನಗಣತಿಯನ್ನು ಆಧರಿಸುವುದಾದಲ್ಲಿ, ಪ್ರತಿ ರಾಜ್ಯದ ಜನಸಂಖ್ಯಾ ಪ್ರಮಾಣದಲ್ಲಿಯೂ ದೊಡ್ಡ ಬದಲಾವಣೆ ಆಗಿದೆ. 2011ರ ಜನಗಣತಿಯ ಅಂಕಿ–ಅಂಶ ಆಧರಿಸಿ ಮರುವಿಂಗಡಣೆ ಕಾರ್ಯ ನಡೆದಲ್ಲಿ, ರಾಜ್ಯಗಳಿಗೆ ಸಿಗುವ ಕ್ಷೇತ್ರಗಳ ಸಂಖ್ಯೆಯಲ್ಲಿ ಬದಲಾವಣೆಗಳು ಆಗುತ್ತವೆ. ಏಳು ರಾಜ್ಯಗಳು ಹೊಂದಿರುವ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ, 10 ರಾಜ್ಯಗಳ (ಹಾಗೂ ದೆಹಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳ) ಕ್ಷೇತ್ರಗಳ ಸಂಖ್ಯೆಯು ಈಗಿರುವಂತೆಯೇ ಉಳಿದುಕೊಳ್ಳುತ್ತದೆ, ಉಳಿದ ರಾಜ್ಯಗಳ ಸೀಟುಗಳ ಸಂಖ್ಯೆಯಲ್ಲಿ ಇಳಿಕೆ ಆಗಲಿದೆ.

2011ರ ಜನಗಣತಿಯ ಆಧಾರದಲ್ಲಿ ಮರುವಿಂಗಡಣೆ ಆದಲ್ಲಿ ದೇಶದ ದಕ್ಷಿಣ, ಪೂರ್ವ ಮತ್ತು ಈಶಾನ್ಯ ಭಾಗದ ರಾಜ್ಯಗಳು ಒಟ್ಟು 25 ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುತ್ತವೆ. ಉತ್ತರ, ಪಶ್ಚಿಮ ಮತ್ತು ಮಧ್ಯ ಭಾರತದ ರಾಜ್ಯಗಳಿಗೆ ಗಳಿಕೆ ಆಗುತ್ತದೆ. ತಮಿಳುನಾಡು ಎಂಟು ಸ್ಥಾನಗಳನ್ನು ಕಳೆದುಕೊಳ್ಳಬಹುದು. ನಂತರದ ಸ್ಥಾನಗಳಲ್ಲಿ ಕೇರಳ (5 ಸ್ಥಾನ ಇಳಿಕೆ), ಆಂಧ್ರಪ್ರದೇಶ (3), ಒಡಿಶಾ (2) ಇರಲಿವೆ. ಕರ್ನಾಟಕ, ಮೇಘಾಲಯ, ಮಣಿಪುರ, ಗೋವಾ, ತೆಲಂಗಾಣ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಪಂಜಾಬ್ ತಲಾ ಒಂದು ಸ್ಥಾನ ಕಳೆದುಕೊಳ್ಳಲಿವೆ. ಉತ್ತರ ಪ್ರದೇಶವು ಏಳು ಸ್ಥಾನಗಳನ್ನು, ಬಿಹಾರ ಮತ್ತು ರಾಜಸ್ಥಾನ ತಲಾ 5 ಸ್ಥಾನಗಳನ್ನು, ಮಧ್ಯಪ್ರದೇಶವು 4 ಸ್ಥಾನಗಳನ್ನು, ಮಹಾರಾಷ್ಟ್ರ 2 ಸ್ಥಾನಗಳನ್ನು, ಜಾರ್ಖಂಡ್ ಮತ್ತು ಹರಿಯಾಣ ತಲಾ ಒಂದು ಸ್ಥಾನವನ್ನು ಪಡೆದುಕೊಳ್ಳಬಹುದು. ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಕಾರ್ಯವನ್ನು ಜನಸಂಖ್ಯೆಯನ್ನು ಮಾತ್ರ ಆಧರಿಸಿ ನಡೆಸಿದಲ್ಲಿ ಅಧಿಕಾರದ ಸಮತೋಲನ ತಪ್ಪುತ್ತದೆ, ದೇಶದ ಉತ್ತರ, ಕೇಂದ್ರ ಮತ್ತು ಪಶ್ಚಿಮ ಭಾಗದಲ್ಲಿ ಇರುವ ಹಿಂದಿ ಭಾಷಿಕ ರಾಜ್ಯಗಳಿಗೆ ಇನ್ನಷ್ಟು ಹೆಚ್ಚಿನ ಮಹತ್ವ ಸಿಗುತ್ತದೆ.

ಹೊಸದಾಗಿ ನಿರ್ಮಾಣ ಆಗಿರುವ ಸಂಸತ್ ಭವನದ ಲೋಕಸಭೆಯಲ್ಲಿ 888 ಸದಸ್ಯರಿಗೆ ಆಸನಗಳ ವ್ಯವಸ್ಥೆ ಇದೆ. ಹೀಗಾಗಿ, ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 888ಕ್ಕೆ ಹೆಚ್ಚಿಸಿದಾಗ, ದಕ್ಷಿಣ ಮತ್ತು ಪೂರ್ವ ಭಾಗದ ರಾಜ್ಯಗಳ ಸೀಟುಗಳ ಸಂಖ್ಯೆಯಲ್ಲಿ ಕಡಿಮೆಯೇನೂ ಆಗುವುದಿಲ್ಲ ಎಂಬ ವಾದ ಇದೆ. ಸಂಖ್ಯೆಯ ದೃಷ್ಟಿಯಿಂದ ಮಾತ್ರ ಗಮನಿಸಿದರೆ ಈ ವಾದ ಸತ್ಯವೆಂದು ಅನ್ನಿಸಬಹುದು. ಯಾವ ರಾಜ್ಯವೂ ತನ್ನ ಲೋಕಸಭಾ ಸೀಟುಗಳ ಸಂಖ್ಯೆಯಲ್ಲಿ ಇಳಿಕೆ ಕಾಣದು ಎಂದು ಕೇಂದ್ರ ಗೃಹ ಸಚಿವರು ಹೇಳಿರುವುದು ಸತ್ಯ. ಆದರೆ 888 ಸೀಟುಗಳನ್ನು ಜನಸಂಖ್ಯೆಯ ಆಧಾರದಲ್ಲಿ (2011ರ ಜನಗಣತಿಯ ಅಂಕಿ-ಅಂಶಗಳನ್ನು ಆಧರಿಸಿ) ಮರುಹಂಚಿಕೆ ಮಾಡಿದಾಗ, ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್, ಗೋವಾ, ಮಣಿಪುರ ರಾಜ್ಯಗಳ ಸೀಟುಗಳ ಶೇಕಡಾವಾರು ಪ್ರಮಾಣ ಕಡಿಮೆ ಆಗುತ್ತದೆ. ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ ಮತ್ತು ಜಾರ್ಖಂಡ್ ರಾಜ್ಯಗಳ ಸೀಟುಗಳ ಶೇಕಡಾವಾರು ಪ್ರಮಾಣವು ಈಗ ಅವು ಹೊಂದಿರುವ ಪ್ರಮಾಣಕ್ಕಿಂತ ಹೆಚ್ಚಾಗುತ್ತದೆ.

ಲೋಕಸಭಾ ಕ್ಷೇತ್ರಗಳ ಮರುಹಂಚಿಕೆಯ ಕಾರ್ಯವನ್ನು ಆರಂಭಿಸಿದಾಗ, ಪ್ರತಿ ರಾಜ್ಯವು ದೇಶದ ಒಟ್ಟು ಜನಸಂಖ್ಯೆಯಲ್ಲಿ ಹೊಂದಿರುವ ಪ್ರಮಾಣವನ್ನು ಮಾತ್ರವೇ ಆಧಾರವಾಗಿ ಇರಿಸಿಕೊಳ್ಳಬೇಕೇ ಅಥವಾ ಬೇರೆ ಅಂಶಗಳನ್ನೂ ಆಧಾರವಾಗಿ ಇರಿಸಿಕೊಂಡು ಸಮತೋಲನವೊಂದನ್ನು ಸಾಧಿಸುವುದನ್ನು ಪರಿಗಣಿಸಲಾಗು
ತ್ತದೆಯೇ ಎಂಬ ಚರ್ಚೆಗಳು ಆಗಬೇಕು. ಕ್ಷೇತ್ರಗಳ ಮರುಹಂಚಿಕೆಯ ಸಂದರ್ಭದಲ್ಲಿ ಜನಸಂಖ್ಯೆಯನ್ನು ಮಾತ್ರವೇ ಆಧಾರವಾಗಿ ಇರಿಸಿಕೊಳ್ಳುವುದಾದರೆ, ಲೋಕಸಭೆಯ ಒಟ್ಟು ಸೀಟುಗಳಲ್ಲಿ ದಕ್ಷಿಣ ಭಾರತದ ಹಾಗೂ ಪೂರ್ವ ಭಾರತದ ಹಲವು ರಾಜ್ಯಗಳ ಸೀಟುಗಳ ಪ್ರಮಾಣವು ಕಡಿಮೆ ಆಗುತ್ತದೆ ಎಂಬುದರಲ್ಲಿ ಅನುಮಾನ ಇಲ್ಲ.

ಲೋಕಸಭೆಯ ಒಟ್ಟು ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಆಗ ಎಲ್ಲ ರಾಜ್ಯಗಳ ಸೀಟುಗಳ ಸಂಖ್ಯೆ ಹೆಚ್ಚಾಗಬಹುದು. ಆದರೆ ಇಲ್ಲಿ ಇರುವ ಪ್ರಶ್ನೆ ರಾಜ್ಯಗಳ ಸೀಟುಗಳ ಪ್ರಮಾಣದಲ್ಲಿ ಯಾವ ಬಗೆಯಲ್ಲಿ ಬದಲಾವಣೆ ಆಗುತ್ತದೆ ಎಂಬುದಾಗಿದೆ. ಜನಸಂಖ್ಯೆಯನ್ನು ಮಾತ್ರವೇ ಆಧಾರವಾಗಿ ಇರಿಸಿಕೊಂಡು ಕ್ಷೇತ್ರಗಳ ಮರುವಿಂಗಡಣೆ ಆದಲ್ಲಿ, ಒಕ್ಕೂಟ ವ್ಯವಸ್ಥೆಯಲ್ಲಿನ ಸಮತೋಲನದಲ್ಲಿ ಬದಲಾವಣೆ ಆಗುವುದು ಖಚಿತ. ಆಗ ದೇಶದ ಕೆಲವು ಪ್ರದೇಶಗಳ ರಾಜಕೀಯ ಪ್ರಾಬಲ್ಯವು ಇನ್ನಷ್ಟು ಹೆಚ್ಚಾಗಲಿದೆ. ಹೀಗೆ ಆದಲ್ಲಿ ಒಕ್ಕೂಟ ಆಡಳಿತ ವ್ಯವಸ್ಥೆಯ ಮೂಲ ಭಿತ್ತಿಯಲ್ಲಿ ಬದಲಾವಣೆ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.