ಆ್ಯಸಿಡಿಟಿ ಎಂಬುವುದು ಬಹುತೇಕರಿಗೆ ಕಾಡುವ ದೊಡ್ಡ ಆರೋಗ್ಯ ಸಮಸ್ಯೆ. ಇದನ್ನು ಆಯುರ್ವೇದದಲ್ಲಿ ಆಮ್ಲ ಪಿತ್ತ ಎಂದು ಕರೆಯುತ್ತಾರೆ. ಮನೆಯಲ್ಲೇ ಸಿಗುವ ವಸ್ತುಗಳಿಂದ ಇದನ್ನು ಹೇಗೆ ನಿಯಂತ್ರಿಸಿಕೊಳ್ಳಬಹುದು ಎಂದು ಆಯುರ್ವೇದ ತಜ್ಞರು ಮಾಹಿತಿ ನೀಡಿದ್ದಾರೆ.

ಆ್ಯಸಿಡಿಟಿಗೆ ಮುಖ್ಯ ಕಾರಣಗಳು

ಸಮಯಕ್ಕೆ ಸರಿಯಾಗಿ ಊಟ ಸೇವಿಸದೆ ಯಾವುದೋ ಸಮಯದಲ್ಲಿ ಆಹಾರ ಸೇವಿಸುವುದರಿಂದ ಆ್ಯಸಿಡಿಟಿ ಉಂಟಾಗುತ್ತದೆ.

ಆಹಾರ ಪದ್ಧತಿಯಲ್ಲಿ ಏರುಪೇರಾದಾಗ ಉದಾಹರಣೆಗೆ ಆಲೂಗಡ್ಡೆ, ಹಸಿರು ಮೆಣಸಿನಕಾಯಿ, ಅತಿಯಾದ ಖಾರ ಸೇರಿದಂತೆ ಆ್ಯಸಿಡಿಟಿಗೆ ಕಾರಣವಾಗುವ ಆಹಾರ ಪದಾರ್ಥಗಳ ಹೆಚ್ಚು ಸೇವನೆಯಿಂದ ಆಮ್ಲ ಪಿತ್ತ ಉಂಟಾಗುತ್ತದೆ.

ಅತಿಯಾದ ರಾಸಾಯನಿಕ ಬಳಸಿ ಆಹಾರ ಸಿದ್ಧಪಡಿಸುವ ಹೋಟೆಲ್ಗಳಲ್ಲಿ ಊಟ ಮಾಡುವುದರಿಂದ ಕೂಡ ಈ ಸಮಸ್ಯೆ ಉಂಟಾಗುತ್ತದೆ.

ರಾತ್ರಿ ಸಮಯದಲ್ಲಿ ಕಾಫಿ ಟೀ ಕುಡಿಯುವುದರಿಂದ ಆಮ್ಲ ಪಿತ್ತ ಉಂಟಾಗುತ್ತದೆ ಎಂಬುವುದು ಆಯುರ್ವೇದ ತಜ್ಞರಾದ ಡಾ ಶರದ್ ಕುಲಕರ್ಣಿ ಅವರ ಅಭಿಪ್ರಾಯವಾಗಿದೆ.

ಇದರ ಮುಖ್ಯ ಲಕ್ಷಣಗಳು

ಎದೆಯುರಿ

ಬಾಯಿಯಲ್ಲಿ ಹುಳಿ/ ಕಹಿ ಆಮ್ಲ ಬರುವುದು

ವಾಂತಿ ಬಂದಂತೆ ಆಗುವುದು

ತಲೆ ನೋವು

ಹೊಟ್ಟೆ ನೋವು

ಹಸಿವು ಆಗದೇ ಇರುವುದು

ಮಲ ವಿಸರ್ಜನೆ ಜಾಗದಲ್ಲಿ ಉರಿ ಆಗುವುದು

ಜೀರ್ಣಕ್ರಿಯೆಯಲ್ಲಿ ತೊಂದರೆ (ಅಜೀರ್ಣ) ಉಂಟಾಗುತ್ತದೆ ಎಂದು ಆಯುರ್ವೇದ ತಜ್ಞರಾದ ಡಾ ಶರದ್ ಕುಲಕರ್ಣಿ ಅವರು ಮಾಹಿತಿ ನೀಡಿದ್ದಾರೆ.

.ತಲೆ ಹೊಟ್ಟಿನ ಸಮಸ್ಯೆಗೆ ಇಲ್ಲಿವೆ ಸರಳ ಮನೆ ಮದ್ದುಗಳು .
ಈ ಸಮಸ್ಯೆಯನ್ನು ನಿಯಂತ್ರಿಸಿಕೊಳ್ಳುವುದು ಹೇಗೆ

ಸರಿಯಾದ ಸಮಯಕ್ಕೆ ಊಟ ಮಾಡುವುದು.

ಖಾರ, ಉಪ್ಪಿನಕಾಯಿ ಸೇವನೆಯನ್ನು ಕಡಿಮೆ ಮಾಡಬೇಕು.

ಮಧ್ಯಾಹ್ನ ಊಟಕ್ಕೂ ಹತ್ತು ನಿಮಿಷ ಮೊದಲು ಚಿಟಿಕೆಯಷ್ಟು ಉಪ್ಪಿನ ಜತೆ ಚೂರು ಶುಂಠಿಯನ್ನು ಸೇವಿಸಬೇಕು.

ಹೆಚ್ಚಿನ ಪ್ರಮಾಣದ ಡೋಸೆಜ್ ಮಾತ್ರೆಯನ್ನು ಸಾಧ್ಯವಾದಷ್ಟು ನಿಯಂತ್ರಿಸಬೇಕು.

ದಿನಕ್ಕೆ ಕನಿಷ್ಠ 3ಲೀ ನೀರು ಕುಡಿಯಲೇಬೇಕು

ಸೌತೆಕಾಯಿಯನ್ನು ರುಬ್ಬಿ ಮಜ್ಜಿಗೆ ಜತೆ ಕುಡಿಯುವುದರಿಂದ ಆಮ್ಲ ಪೀತ ಕಡಿಮೆ ಆಗುತ್ತದೆ.

ಬಿಸಿ ನೀರಿನಲ್ಲಿ 9–10 ಮೆಂತ್ಯೆ ಕಾಳನ್ನು ಹಾಕಿ ಕಾಲಿ ಹೊಟ್ಟೆಗೆ ಕುಡಿಯುವುದರಿಂದ ಈ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.

ರಾತ್ರಿ ನೆನೆಸಿಟ್ಟ ಮೆಂತ್ಯೆ ಕಾಳಿನ ಜತೆಗೆ ಚಿಟಿಕೆಯಷ್ಟು ಅಜವಾನ ಬಿಸಿ ನೀರಿನಲ್ಲಿ ಸೇವಿಸುವುದರಿಂದ ಆ್ಯಸಿಡಿಟಿ ನಿಯಂತ್ರಣಕ್ಕೆ ಬರುತ್ತದೆ ಎಂದು ಆಯುರ್ವೇದ ತಜ್ಞ ಡಾ ಶರದ್ ಕುಲಕರ್ಣಿ ಅವರು ಸಲಹೆ ನೀಡಿದ್ದಾರೆ.

ಲೇಖಕರು: ಬೆಂಗಳೂರಿನ ಆಯುರ್ವೇದ ವೈದ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.