ಬೆಂಗಳೂರು: ಮಳೆ ಕಾಡುಗಳಲ್ಲಿನ ಅಪರೂಪದ ಜೀವಿಯಾದ ಕಾಳಿಂಗ ಸರ್ಪಗಳ ಸಂರಕ್ಷಣೆಯ ಹೆಸರಿನಲ್ಲಿ, ಕಾನೂನು ಬಾಹಿರವಾಗಿ ವನ್ಯಜೀವಿ ಛಾಯಾಗ್ರಾಹಕರಿಗೆ ಛಾಯಾಗ್ರಹಣಕ್ಕೆ ಅವಕಾಶ ನೀಡುತ್ತಿರುವುದು, ಇದೇ ಉದ್ದೇಶಕ್ಕಾಗಿ ಕಾಳಿಂಗ ಮತ್ತು ಅವುಗಳ ಮರಿಗಳನ್ನು ಕೂಡಿಟ್ಟಿರುವ ಪ್ರಕರಣ ಪತ್ತೆಯಾಗಿದೆ.

‘ಆಗುಂಬೆ ರೈನ್ ಫಾರೆಸ್ಟ್ ರಿಸರ್ಚ್ ಸ್ಟೇಷನ್’ ಸಂಸ್ಥೆಯು ಇತ್ತೀಚೆಗೆ ಚಲನಚಿತ್ರ ಛಾಯಾಗ್ರಾಹಕ ಪ್ರದೀಪ್ ಹೆಗ್ಡೆ ಅವರನ್ನು ಕರೆಸಿ ಎರಡು ದಿನ ಕಾಳಿಂಗ ಸರ್ಪ ಮತ್ತು ಮರಿಗಳ ಚಿತ್ರೀಕರಣಕ್ಕೆ ಅವಕಾಶ ನೀಡಿದೆ. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ, ಅರಣ್ಯ ಇಲಾಖೆ ಸಿಬ್ಬಂದಿ ಬರುವಷ್ಟರಲ್ಲಿ ಹಾವುಗಳನ್ನು ಮರೆ ಮಾಚಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ದಿನೇಶ್ ಕಲ್ಲಹಳ್ಳಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಮಾಹಿತಿಯನ್ನು ಅರಣ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ.

‘ಈ ಸಂಸ್ಥೆ ವಿರುದ್ಧ ಬಂದಿರುವ ದೂರುಗಳ ಆಧಾರದಲ್ಲಿ, ತನಿಖೆ ನಡೆಸಿ ವರದಿ ನೀಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ಅದರ ಅನ್ವಯ ಶಿವಮೊಗ್ಗ ಡಿಸಿಎಫ್ ತನಿಖೆ ನಡೆಸಲಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಆಘಾತಕಾರಿ ವಿಷಯವೆಂದರೆ, ಕಾಳಿಂಗ ಸರ್ಪಗಳ ಮೈಥುನ, ಗೂಡು ಕಟ್ಟುವುದು, ಮೊಟ್ಟೆ ಇಡುವುದು, ಮರಿಗಳು ಹೊರಬರುವುದರ ಚಿತ್ರೀಕರಣ ನಡೆಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಳಿಂಗ ಸರ್ಪ ಮತ್ತು ಅವುಗಳ ಮರಿಗಳ ವಿಡಿಯೊ– ಚಿತ್ರಗಳಿಗೆ ವಿಪರೀತ ಬೇಡಿಕೆ ಇದೆ. ಇವುಗಳ ವಿಡಿಯೊ ಮತ್ತು ಚಿತ್ರಗಳು ಲಕ್ಷಾಂತರ ರೂಪಾಯಿ ಆದಾಯವನ್ನು ತಂದು ಕೊಡುತ್ತವೆ’ ಎಂದು ದೂರಿನಲ್ಲಿ ದಿನೇಶ್ ಹೇಳಿದ್ದರು.

‘ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಷೆಡ್ಯೂಲ್ 2ರ ಅಡಿ ಕಾಳಿಂಗ ಸರ್ಪ ವಿಶೇಷ ರಕ್ಷಣೆಗೆ ಒಳಪಡುವ ಜೀವಿ. ಕಾಳಿಂಗ ಸರ್ಪಗಳನ್ನು ಅಕ್ರಮವಾಗಿ ಹಿಡಿದು ವನ್ಯಜೀವಿ ಛಾಯಾಗ್ರಾಹಕರಿಗೆ ಫೋಟೋ, ವಿಡಿಯೊ ಮಾಡಲು ಅವಕಾಶ ನೀಡುವುದು, ಹಾವುಗಳನ್ನು ಹಿಡಿಯುವ ಹೆಸರಿನಲ್ಲಿ ಜನರಿಗೆ ಹಾವು ಮುಟ್ಟಲು ಅವಕಾಶ ನೀಡುವುದು, ಚಿತ್ರೀಕರಣಕ್ಕಾಗಿ ಹಾವುಗಳನ್ನು ಬಿಡುಗಡೆ ಮಾಡಿ, ವಾಣಿಜ್ಯ ಲಾಭ ಪಡೆಯುವುದು, ಅರಣ್ಯ ಇಲಾಖೆ ಅನುಮತಿ ಇಲ್ಲದೇ ಹಾವುಗಳನ್ನು ಬಂಧನದಲ್ಲಿ ಇಡುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಅಪರಾಧ. ಆದ್ದರಿಂದ, ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಚಿತ್ರೀಕರಣಕ್ಕೆ ಬಳಸಿದ ಕ್ಯಾಮೆರಾ ಸೇರಿದಂತೆ ಇತರ ಸಾಧನಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದರು.

ವನ್ಯಜೀವಿ ಪ್ರದೇಶದಲ್ಲಿ ಕಾಟೇಜ್: ‘ಉತ್ತರ ಭಾರತ ಮೂಲದ ಅಜಯ್ ಗಿರಿ ಎಂಬವರು ‘ಆಗುಂಬೆ ರೈನ್ ಫಾರೆಸ್ಟ್ ರಿಸರ್ಚ್ ಸ್ಟೇಷನ್’ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇವರು ವನ್ಯಜೀವಿ ಪ್ರದೇಶದಲ್ಲಿ ‘ಟೈಗರ್ ಕಾಟೇಜ್’ ನಿರ್ಮಿಸಿದ್ದಾರೆ. ಇದು ಅಕ್ರಮವಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ’ ಎಂದು ಆಗುಂಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅವರು ಕಾಳಿಂಗ ಸರ್ಪದ ಸಂಶೋಧಕ ಅಲ್ಲ. ಹಾವುಗಳನ್ನು ಸಂರಕ್ಷಿಸಿ ಕಾಡಿಗೆ ಬಿಡುವ ಕೆಲಸ ಮಾಡುತ್ತಾರೆ. ಇವರು ದೊಡ್ಡ ದೊಡ್ಡ ವನ್ಯಜೀವಿ ಛಾಯಾಗ್ರಾಹಕರು ಬಂದಾಗ ಕಾಳಿಂಗ ಸರ್ಪಗಳ ಚಿತ್ರೀಕರಣಕ್ಕೆ ಅವಕಾಶ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

‘ಆಗುಂಬೆ ವ್ಯಾಪ್ತಿಯಲ್ಲಿರುವ ವನ್ಯಜೀವಿ ಧಾಮದಲ್ಲಿ 2 ಎಕರೆ ಬೀಳು ಜಮೀನನ್ನು ಒತ್ತುವರಿ ಮಾಡಿರುವುದು ಪಂಚಾಯಿತಿ ಗಮನಕ್ಕೆ ಬಂದಿದೆ. ಈ ಬಗ್ಗೆ ವನ್ಯಜೀವಿ ವಿಭಾಗ ಮತ್ತು ಸಂರಕ್ಷಿತ ಅರಣ್ಯ ವಿಭಾಗದವರು ತನಿಖೆ ನಡೆಸುತ್ತಿದ್ದಾರೆ. ಸತ್ಯ ಹೊರ ಬರಲಿದೆ. ಇವರು ಮೇಲಿನ ಅಧಿಕಾರಿಗಳ ಹೆಸರು ಹೇಳಿ ಕೆಳ ಹಂತದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಹೆದರಿಸುವ ಕೆಲಸದಲ್ಲೂ ತೊಡಗಿದ್ದಾರೆ’ ಎಂದು ಅವರು ದೂರಿದರು.

‘ಹಣದ ದಾಹಕ್ಕಾಗಿ ಅಪಾಯದಲ್ಲಿ ಕಾಳಿಂಗ’

‘ಕಾಳಿಂಗ ಈಗ ಅಂತರರಾಷ್ಟ್ರೀಯ ವಸ್ತು. ಅದರ ಆಕರ್ಷಕ ಚಿತ್ರ ಗೂಡು ಮಾಡುವ ಮೊಟ್ಟೆ ಇಡುವ ಮರಿ ಹೊರಬರುವ ವಿಡಿಯೊ ತುಣುಕುಗಳಿಗೆ ಲಕ್ಷಾಂತರ ಬೆಲೆ ಇದೆ. ಅದರ ಗಾತ್ರ ಜೀವನ ವಿಧಾನ ಪರಿಸರ ವ್ಯವಸ್ಥೆಯಲ್ಲಿ ಅದರ ಪಾತ್ರ ಮೊದಲಾದ ಕಾರಣಗಳಿಗೆ ಅದರ ಸಂಶೋಧನೆಗೆಂದು ಕೋಟಿಗಟ್ಟಲೆ ಹಣ ಹರಿದು ಬರುತ್ತದೆ. ಹಣದ ದಾಹಕ್ಕಾಗಿ ಕಾಳಿಂಗ ಅಪಾಯದಲ್ಲಿದೆ’ ಎಂದು ಶೃಂಗೇರಿಯ ಬಯೋಡೈವರ್ಸಿಟಿ ಎನ್ವಿರಾನ್ಮೆಂಟ್ ಅಂಡ್ ಅಗ್ರಿಕಲ್ಚರ್ ಸ್ಟಡೀಸ್ನ (ಬಿಇಎಎಸ್) ಸಂಸ್ಥಾಪಕ ನಾಗರಾಜ ಕೂವೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.