ಹಲವು ಅಧ್ಯಯನಗಳ ಪ್ರಕಾರ ಭಾರತದಲ್ಲಿ ಪ್ರತಿ 100 ಜನರ ಪೈಕಿ 30 ಜನರ ಬಳಿ ಮಾತ್ರ ಒಂದಲ್ಲ ಒಂದು ಬಗೆಯ ಜೀವ ವಿಮೆ ಇದೆ. ಅಂದರೆ ದೇಶದ ಶೇಕಡ 70ರಷ್ಟು ಜನರ ಬಳಿ ಯಾವುದೇ ಜೀವ ವಿಮೆ ಇಲ್ಲ. ತಿಳಿವಳಿಕೆಯ ಕೊರತೆಯಿಂದ ವಿಮೆ ಪಡೆದುಕೊಳ್ಳದವರು ಒಂದಷ್ಟು ಮಂದಿಯಾದರೆ, ಹಣಕಾಸಿನ ಪರಿಸ್ಥಿತಿ ಚೆನ್ನಾಗಿಲ್ಲ ಎನ್ನುವ ಕಾರಣಕ್ಕೆ ವಿಮೆ ಮಾಡಿಸಿಕೊಳ್ಳದವರು ಮತ್ತೊಂದಷ್ಟು ಮಂದಿ.

ಈ ಸಮಸ್ಯೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರವು ಅತ್ಯಂತ ಕಡಿಮೆ ದರದಲ್ಲಿ ಎರಡು ಮಹತ್ವದ ವಿಮಾ ಪಾಲಿಸಿಗಳನ್ನು ಪರಿಚಯಿಸಿದೆ. ಒಂದನೆಯದ್ದು, ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಎರಡನೆಯದ್ದು, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ (ಪಿಎಂಎಸ್ಬಿವೈ). ಈ ಎರಡೂ ವಿಮಾ ಪಾಲಿಸಿಗಳಿಗೆ ವರ್ಷಕ್ಕೆ ಒಟ್ಟು ₹ 456 ಖರ್ಚು ಮಾಡಿದರೆ ನಿಮಗೆ ಒಟ್ಟು ₹ 4 ಲಕ್ಷದ ವಿಮಾ ರಕ್ಷೆ ಸಿಗುತ್ತದೆ. ಬನ್ನಿ, ಆ ಎರಡು ಮಹತ್ವದ ವಿಮಾ ಪಾಲಿಸಿಗಳ ಬಗ್ಗೆ ವಿವರವಾಗಿ ತಿಳಿಯೋಣ.

₹436ಕ್ಕೆ ₹2 ಲಕ್ಷದ ವಿಮೆ: ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು 2015ರ ಮೇ 9ರಿಂದ ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ (ಪಿಎಂಜೆಜೆಬಿವೈ) ಜಾರಿಗೆ ತಂದಿತು. ಈ ಯೋಜನೆ ಅತ್ಯಂತ ಕಡಿಮೆ ಪ್ರೀಮಿಯಂ ಮೊತ್ತಕ್ಕೆ ವ್ಯಕ್ತಿಗೆ ಜೀವ ವಿಮೆ ನೀಡುತ್ತದೆ. ಹೌದು, ಒಂದು ವರ್ಷಕ್ಕೆ ಬರೀ ₹436 ಪಾವತಿಸಿದರೆ ₹ 2 ಲಕ್ಷದ ರಕ್ಷೆ ಇರುವ ಈ ವಿಮೆಯನ್ನು ಪಡೆದುಕೊಳ್ಳಬಹುದು. ಸ್ವಯಂ ಚಾಲಿತವಾಗಿ ಪಾವತಿ (ಆಟೋ ಡೆಬಿಟ್) ಮೂಲಕ ಈ ವಿಮೆಯನ್ನು
ನವೀಕರಿಸಿಕೊಳ್ಳಬಹುದು. ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆ ಹೊಂದಿರುವ 18 ವರ್ಷ ಮೇಲ್ಪಟ್ಟ 50 ವರ್ಷದ ಒಳಗಿನ ವ್ಯಕ್ತಿಗಳು ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಗೆ ಅರ್ಹರು. ವ್ಯಕ್ತಿಗೆ 55 ವರ್ಷ ಆಗುವವರೆಗೆ ಪ್ರೀಮಿಯಂ ಪಾವತಿಸುತ್ತ ಯೋಜನೆಯ ಅನುಕೂಲ ಪಡೆಯಬಹುದು.

ಈ ವಿಮೆ ಪಡೆದಿರುವ ವ್ಯಕ್ತಿ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ₹ 2 ಲಕ್ಷ ಪರಿಹಾರ ಸಿಗುತ್ತದೆ. ಆದರೆ ಈ ವಿಮೆಯಲ್ಲಿ ಅವಧಿ ಪೂರ್ಣಗೊಂಡ ನಂತರದ ಸೌಲಭ್ಯಗಳು ಅಥವಾ ಬೋನಸ್ ಲಭ್ಯವಿಲ್ಲ. ವಿಮೆ ಪ್ರೀಮಿಯಂ ಪಡೆದ 30 ದಿನಗಳ ನಂತರ ವಿಮಾ ರಕ್ಷೆಯು ಚಾಲ್ತಿಗೆ ಬರುತ್ತದೆ. ಕ್ಲೇಮ್ ಸಂದರ್ಭದಲ್ಲಿ ನಿರ್ದಿಷ್ಟ ಬ್ಯಾಂಕ್ ಸಂಪರ್ಕಿಸಿ, ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

₹20ಕ್ಕೆ ಅಪಘಾತ ವಿಮೆ: ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ (ಪಿಎಂಎಸ್ಬಿವೈ) ಅಪಘಾತದಿಂದ ಉಂಟಾಗುವ ಸಾವು ಅಥವಾ ಅಂಗವೈಕಲ್ಯಕ್ಕೆ ಪರಿಹಾರ ಒದಗಿಸುತ್ತದೆ. 2015ರ ಮೇ 9ರಂದು ಕೇಂದ್ರ ಸರ್ಕಾರ ಈ ಯೋಜನೆ ಪರಿಚಯಿಸಿದೆ. ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆ ಹೊಂದಿರುವ 18 ವರ್ಷ ಮೇಲ್ಪಟ್ಟ ಹಾಗೂ 70 ವರ್ಷದ ಒಳಗಿನ ವ್ಯಕ್ತಿಗಳು ಈ ಯೋಜನೆಯ ಲಾಭ ಪಡೆಯಬಹುದು. ಪ್ರತಿ ವರ್ಷ ನಿಮ್ಮ ಬ್ಯಾಂಕ್ ಖಾತೆಯಿಂದ ಸ್ವಯಂ ಚಾಲಿತವಾಗಿ ಬರೀ ₹20 ಪಾವತಿಸಿದರೆ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಲ್ಲಿ ₹ 2 ಲಕ್ಷದವರೆಗೆ ಅಪಘಾತ ವಿಮೆಯ ಸೌಲಭ್ಯ ದಕ್ಕುತ್ತದೆ.

ಈ ವಿಮೆ ಪಡೆದಿರುವ ವ್ಯಕ್ತಿ ಸಾವನ್ನಪ್ಪಿದರೆ ಆ ಕುಟುಂಬಕ್ಕೆ ₹2 ಲಕ್ಷದ ವಿಮಾ ಪರಿಹಾರ ಸಿಗುತ್ತದೆ. ಒಂದೊಮ್ಮೆ ವ್ಯಕ್ತಿ ಅಪಘಾತದಿಂದ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರೆ ಅಥವಾ ಭಾಗಶಃ ಅಂಗವೈಕಲ್ಯಕ್ಕೆ ಒಳಗಾದರೆ ₹1 ಲಕ್ಷ ಪರಿಹಾರ ಲಭ್ಯ. ಕ್ಲೇಮ್ ಸಂದರ್ಭದಲ್ಲಿ, ಪಾಲಿಸಿ ಪಡೆದಿರುವ ನಿರ್ದಿಷ್ಟ ಬ್ಯಾಂಕ್ ಸಂಪರ್ಕಿಸಿ, ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಸತತ ಎರಡನೇ ವಾರವೂ ಕುಸಿತ

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರವೂ ಕುಸಿತ ದಾಖಲಿಸಿವೆ. ಮೇ 30ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಅಲ್ಪ ಪ್ರಮಾಣದಲ್ಲಿ ಕುಸಿದಿವೆ. 81,451 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.33ರಷ್ಟು ತಗ್ಗಿದೆ. 24,750 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 0.41ರಷ್ಟು ಇಳಿಕೆ ಕಂಡಿದೆ.

ಆದರೆ ಮಿಡ್ಕ್ಯಾಪ್ ಸೂಚ್ಯಂಕ ಶೇ 1.29ರಷ್ಟು ಗಳಿಸಿಕೊಂಡಿದ್ದರೆ , ಸ್ಮಾಲ್ಕ್ಯಾಪ್ ಸೂಚ್ಯಂಕ ಶೇ 1.36ರಷ್ಟು ಜಿಗಿದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ್ದ ಸುಂಕಗಳಿಗೆ ಅಂತಾರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯ ತಡೆ ನೀಡಿದ್ದ ಬೆನ್ನಲ್ಲೇ ಟ್ರಂಪ್ ನೇತೃತ್ವದ ಆಡಳಿತ ಮೇಲ್ಮನವಿ ಹೋಗಿರುವುದು ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರಿವೆ.

ವಾರದ ಅಂದಾಜಿನಲ್ಲಿ ನಿಫ್ಟಿ ವಲಯವಾರು ಪ್ರಗತಿ ನೋಡಿದಾಗ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 4.08ರಷ್ಟು, ಮಾಧ್ಯಮ ಶೇ 1.67ರಷ್ಟು, ನಿಫ್ಟಿ ರಿಯಲ್ ಎಸ್ಟೇಟ್ ಶೇ 1.33ರಷ್ಟು, ಎನರ್ಜಿ
ಶೇ 0.68ರಷ್ಟು, ನಿಫ್ಟಿ ಬ್ಯಾಂಕ್ ಶೇ 0.63ರಷ್ಟು, ಫೈನಾನ್ಸ್ ಶೇ 0.05ರಷ್ಟು ಮತ್ತು ಫಾರ್ಮಾ
ಶೇ 0.04ರಷ್ಟು ಗಳಿಸಿಕೊಂಡಿವೆ.

ಎಫ್ಎಂಸಿಜಿ ಶೇ -2.16ರಷ್ಟು, ಆಟೋ ಶೇ -0.81ರಷ್ಟು ಲೋಹ ಶೇ -0.61ರಷ್ಟು,
ಸರ್ವೀಸ್ ಶೇ – 0.26ರಷ್ಟು ಮತ್ತು ಐ.ಟಿ ಶೇ – 0.22ರಷ್ಟು ಕುಸಿದಿವೆ.

ಇಳಿಕೆ – ಏರಿಕೆ: ‘ನಿಫ್ಟಿ–50’ಯಲ್ಲಿ ವಾರದ ಲೆಕ್ಕಾಚಾರ ನೋಡಿದಾಗ ಅಲ್ಟ್ರಾಟೆಕ್ ಸಿಮೆಂಟ್ ಶೇ -4.69ರಷ್ಟು, ಗ್ರಾಸಿಮ್ ಇಂಡಸ್ಟ್ರೀಸ್ ಶೇ -4.43ರಷ್ಟು, ಐಟಿಸಿ ಶೇ – 4.11ರಷ್ಟು, ಟಾಟಾ ಕನ್ಸ್ಯೂಮರ್ ಶೇ – 3.09ರಷ್ಟು, ಶ್ರೀರಾಮ್ ಫೈನಾನ್ಸ್ ಶೇ – 3.03ರಷ್ಟು, ಎನ್ಟಿಪಿಸಿ ಶೇ – 3.02ರಷ್ಟು, ಪವರ್ ಗ್ರಿಡ್ ಕಾರ್ಪೊರೇಷನ್ ಶೇ -2.75ರಷ್ಟು, ಹಿಂಡಾಲ್ಕೊ ಇಂಡಸ್ಟ್ರೀಸ್ ಶೇ –2.75ರಷ್ಟು, ಅಪೋಲೊ ಹಾಸ್ಪಿಟಲ್ಸ್ ಶೇ –2.36ರಷ್ಟು, ಏಷ್ಯನ್ ಪೇಂಟ್ಸ್ ಶೇ -2.27ರಷ್ಟು, ಟಿಸಿಎಸ್ ಶೇ -1.59ರಷ್ಟು ಮತ್ತು ಒಎನ್ಜಿಸಿ ಶೇ –1.58ರಷ್ಟು ಕುಸಿದಿವೆ.

ಟ್ರೆಂಟ್ ಶೇ 3.43ರಷ್ಟು, ಇಂಡಸ್ ಇಂಡ್ ಬ್ಯಾಂಕ್ ಶೇ 3.23ರಷ್ಟು, ಎಬಿಐ ಶೇ 2.87ರಷ್ಟು, ಅದಾನಿ ಪೋರ್ಟ್ಸ್ ಶೇ 2.61ರಷ್ಟು, ಎಲ್ ಆ್ಯಂಡ್ ಟಿ ಶೇ 2.18ರಷ್ಟು, ಡಾ ರೆಡ್ಡೀಸ್ ಲ್ಯಾಬ್ಸ್ ಶೇ 1.81ರಷ್ಟು, ಜಿಯೊ ಫೈನಾನ್ಶಿಯಲ್ ಸರ್ವಿಸಸ್ ಶೇ 1.67ರಷ್ಟು, ಏರ್ಟೆಲ್ ಶೇ 1.41ರಷ್ಟು, ಎಸ್ಬಿಐ ಲೈಫ್ ಇನ್ಶೂರೆನ್ಸ್ ಶೇ 0.91ರಷ್ಟು, ಎಟರ್ನಲ್ ಲಿಮಿಟೆಡ್ ಶೇ 0.91ರಷ್ಟು, ವಿಪ್ರೊ ಶೇ 0.89ರಷ್ಟು, ಎಚ್ಡಿಎಫ್ಸಿ ಬ್ಯಾಂಕ್ ಶೇ 0.43ರಷ್ಟು ಗಳಿಸಿಕೊಂಡಿವೆ.

ಮುನ್ನೋಟ: ಜೂನ್ 4ರಿಂದ 6ರವರೆಗೆ ಆರ್ಬಿಐ ಹಣಕಾಸು ನೀತಿ ಸಮಿತಿಯ ಸಭೆ ನಡೆಯಲಿದ್ದು ರೆಪೊ ದರವನ್ನು 25 ಮೂಲಾಂಶಗಳಷ್ಟು ಕಡಿತಗೊಳಿಸುವ ನಿರೀಕ್ಷೆಯಿದೆ. ಬಡ್ಡಿ ದರ ಇಳಿಕೆಯು ಷೇರುಪೇಟೆ ಮೇಲೆ ಪರಿಣಾಮ ಬೀರಲಿದೆ.

ಉಳಿದಂತೆ ಭಾರತದ ಜಿಡಿಪಿ ಬೆಳವಣಿಗೆ ದರ, ಅಮರಿಕ ಹಣದುಬ್ಬರ ಅಂಕಿ-ಅಂಶ ಸೇರಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶಿಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.