ADVERTISEMENT

ಪೃಥ್ವಿ ಪರಿಚಯದ ಕೆಲ ಪ್ರಶ್ನೆಗಳು

ವಿಜ್ಞಾನ ವಿಶೇಷ

ಎನ್.ವಾಸುದೇವ್
Published 11 ಫೆಬ್ರುವರಿ 2017, 19:30 IST
Last Updated 11 ಫೆಬ್ರುವರಿ 2017, 19:30 IST
ಪೃಥ್ವಿ ಪರಿಚಯದ ಕೆಲ ಪ್ರಶ್ನೆಗಳು
ಪೃಥ್ವಿ ಪರಿಚಯದ ಕೆಲ ಪ್ರಶ್ನೆಗಳು   
1. ದಕ್ಷಿಣ ಅಮೆರಿಕ ಖಂಡದಲ್ಲಿ ಹಲವು ರಾಷ್ಟ್ರಗಳಲ್ಲಿ ಹರಡಿರುವ ಧರೆಯ ಅತ್ಯಂತ ವಿಸ್ತಾರ ವೃಷ್ಟಿವನ ‘ಅಮೆಜೋನಿಯಾದ’ದ ಒಂದು ದೃಶ್ಯ ಚಿತ್ರ–1 ರಲ್ಲಿದೆ. ದಕ್ಷಿಣ ಅಮೆರಿಕದಲ್ಲಿರುವ, ಈ ಕೆಳಗೆ ಹೆಸರಿಸಿರುವ ಯಾವ ರಾಷ್ಟ್ರಗಳಲ್ಲಿ ಈ ವೃಷ್ಟಿವನವನ್ನು ಕಾಣಬಹುದು?
ಅ. ವೆನಿಜೂಯೆಲ
ಬ. ಫೆರು
ಕ. ಚಿಲಿ
ಡ. ಈಕ್ವೆಡಾರ್‌
ಇ. ಅರ್ಜಂಟೈನಾ
ಈ. ಬ್ರೆಜಿಲ್‌
ಉ. ಈಕ್ವೆಡಾರ್‌
 
**
2. ಬಾಗಿ ಬಳುಕಿ ಪ್ರವಹಿಸುತ್ತಿರುವ ಅದ್ಭುತ ನದಿಯೊಂದರ ದೃಶ್ಯ ಚಿತ್ರ–2 ರಲ್ಲಿದೆ. ನಮ್ಮ, ದೇಶದ ಕೆಲವು ಪ್ರಸಿದ್ಧ ನದಿಗಳನ್ನು ಇಲ್ಲಿ ಪಟ್ಟಿಮಾಡಿದೆ. ಇವುಗಳಲ್ಲಿ ಯಾವ ಯಾವ ನದಿಗಳು ಸಂಪೂರ್ಣ ಭಾರತದಲ್ಲಷ್ಟೇ ಪ್ರವಹಿಸುತ್ತಿವೆ?
ಅ. ಗಂಗಾ
ಬ. ಗೋದಾವರೀ
ಕ. ಸಿಂಧೂ
. ಕೃಷ್ಣಾ
ಇ. ನರ್ಮದಾ
ಈ. ಬ್ರಹ್ಮಪುತ್ರ
ಉ. ಕಾವೇರಿ
 
**
3. ನಮ್ಮ ಪ್ರಪಂಚದ ಭೂಪಟ ಚಿತ್ರ–3 ರಲ್ಲಿದೆ. ಜಗತ್ತಿನ ವಿವಿಧ ಪ್ರಸಿದ್ಧ ಆರು ಸ್ಥಳಗಳನ್ನು ಭೂಪಟದ ಮೇಲಿನ 1 ರಿಂದ 6 ರವರೆಗಿನ ಸಂಖ್ಯೆಗಳು ಸೂಚಿಸುತ್ತಿವೆ; ಆ ಆರೂ ಸ್ಥಳಗಳನ್ನು ಈ ಕೆಳಗೆ ಸೂಚಿಸಲಾಗಿದೆ ಕೂಡ. ಯಾವ ಸಂಖ್ಯೆ ಯಾವ ಸ್ಥಳದ ಅತ್ಯಂತ ಸನಿಹದಲ್ಲಿದೆ?
ಅ. ಅಟ್ಲಾಂಟಕ್‌ ಮಹಾಸಾಗರ
ಬ. ಜಪಾನ್‌
ಕ. ಮಡಗಾಸ್ಕರ್‌
ಡ. ಸಿಯೆರ್ರಾ ನಿವ್ಯಾಡಾ
ಇ. ನ್ಯೂಜಿಲ್ಯಾಂಡ್‌
ಈ. ಅಟಕಾಮಾ
 
**
4. ವಿಶ್ವಪ್ರಸಿದ್ಧ ‘ಹಿಮಾಲಯ ಪರ್ವತ ಪಂಕ್ತಿ’ಯ ಒಂದು ದೃಶ್ಯ ಚಿತ್ರ–4 ರಲ್ಲಿದೆ. ಹಿಮಾಲಯದ ಹಲವಾರು ಅತ್ಯುನ್ನತ ಶಿಖರಗಳಲ್ಲಿ ಕೆಲವನ್ನು ಈ ಕೆಳಗೆ ಹೆಸರಿಸಲಾಗಿದೆ. ಈ ಶಿಖರಗಳನ್ನು ಎತ್ತರದ ಆರೋಹಣ ಕ್ರಮದಲ್ಲಿ ಅಣಿಗೊಳಿಸಬಲ್ಲಿರಾ?
ಅ. ಅನ್ನಪೂರ್ಣ  
ಬ. ಕಾಂಚನಗಂಗಾ
ಕ. ಧವಳಗಿರಿ    
ಡ. ನಂದಾದೇವಿ
ಇ. ಮಕಾಲು      
ಈ. ಎವರೆಸ್‌್ಟ
 
**
5. ಅಂತರಿಕ್ಷದಿಂದ ಕಾಣುವ ನಮ್ಮ ಧರೆಯ ಸುಂದರ ಸ್ಪಷ್ಟ ದೃಶ್ಯವೊಂದು ಚಿತ್ರ–5 ರಲ್ಲಿದೆ.
ಅ. ಈ ಚಿತ್ರದಲ್ಲಿ ಪೂರ್ಣ ಕಾಣುತ್ತಿರುವ ಭೂ ಖಂಡ ಯಾವುದು?
ಬ. ಈ ಭೂಖಂಡದ ಅತ್ಯಂತ ಪ್ರಸಿದ್ಧ ವಿಶ್ವ ದಾಖಲೆಯ ನದಿ ಯಾವುದು?
ಕ. ಇಲ್ಲಿನ ಅತ್ಯಂತ ವಿಖ್ಯಾತ ಮರುಭೂಮಿಯ ಹೆಸರೇನು?
 
**
6. ಶಾಶ್ವತ ಹಿಮಾವೃತ ಭೂಖಂಡ ‘ಅಂಟಾರ್ಕ್ಟಿಕಾ’ ಚಿತ್ರ–6 ರಲ್ಲಿದೆ. ಭೂತಳದ ಈ ಖಂಡವನ್ನು ‘ಮರುಭೂಮಿ’ಯೆಂದೇ ವರ್ಗೀಕರಿಸಲಾಗಿದೆ. ಅದಕ್ಕೆ ವೈಜ್ಞಾನಿಕ ಕಾರಣ ಏನು?
ಅ. ಅಲ್ಲಿನ ಪರಿಸರ ಅತ್ಯಂತ ಶೀತಲ.
ಬ. ಅಲ್ಲಿ ಸಸ್ಯಾಚ್ಛಾದನೆ ಇಲ್ಲ
ಕ. ಅಲ್ಲಿನ ಮಳೆ ಪ್ರಮಾಣ ಅತ್ಯಂತ ಕಡಿಮೆ.
ಡ. ಅದು ಮಾನವ ವಾಸಕ್ಕೆ ವಿಹಿತವಾಗಿಲ್ಲ.
 
**
7. ಸಿಡಿದೇಳುತ್ತಿರುವ ಜ್ವಾಲಾಮುಖಿಯೊಂದರ ರುದ್ರ–ರಮ್ಯ ದೃಶ್ಯವೊಂದು ಚಿತ್ರ–7 ರಲ್ಲಿದೆ. ಕೆಲವು ಜೀವಂತ–ವಿಖ್ಯಾತ ಅಗ್ನಿಪರ್ವತಗಳನ್ನೂ ಅವುಗಳಿರುವ ಸ್ಥಳಗಳನ್ನೂ ಇಲ್ಲಿ ಪಟ್ಟಿಮಾಡಿದೆ. ಇವುಗಳನ್ನು ಸರಿಹೊಂದಿಸಬಲ್ಲಿರಾ?
1. ಕಿಲೋವಾ                              ಅ. ಇಟಲಿ
2. ಸಂತಾ ಮರಿಯಾ                     ಬ. ಯುಎಸ್‌ಎ
3. ಸ್ಟ್ರಾಂಬೋಲಿ                          ಕ. ಗ್ವಾಟೆಮಾಲಾ
4. ಮೇಯಾನ್‌                            ಕ. ಅಂಟಾರ್ಕ್ಟಿಕಾ
5. ಎರಿಬಸ್                               ಇ. ಹವಾಯ್‌
6. ಸೆಂಟ್‌ ಹೆಲೆನ್‌್ಸ                     ಈ. ಫಿಲಿಪ್ಪೀನ್ಸ್‌
 
**
8. ಸುಂದರ ಪುಟ್ಟ ‘ದ್ವೀಪ’ವೊಂದು ಚಿತ್ರ–8 ರಲ್ಲಿದೆ. ಧರೆಯಲ್ಲಿ ಒಟ್ಟು ಲಕ್ಷಾಂತರ ದ್ವೀಪಸ್ತೋಮಗಳಿವೆ. ಪ್ರತ್ಯೇಕ ಸ್ವತಂತ್ರ ರಾಷ್ಟ್ರಗಳೇ ಆಗಿರುವ ದ್ವೀಪ/ ದ್ವೀಪಸ್ತೋಮಗಳನ್ನು ಈ ಪಟ್ಟಿಯಲ್ಲಿ ಗುರುತಿಸಿ:
. ಅಂಡಮಾನ್‌
. ಶ್ರೀಲಂಕಾ
ಕ. ನ್ಯೂಜಿಲ್ಯಾಂಡ್‌    
ಡ. ಗ್ಯಾಲಪಗೋಸ್‌
ಇ. ಹವಾಯ್‌
ಈ. ಜಪಾನ್‌
ಉ. ಈಸ್ಟರ್‌ ದ್ವೀಪಗಳು
 
**
9. ಧರೆಯಲ್ಲಿ ಸಂಭವಿಸುವ ‘ಹವಾ ವಿದ್ಯಮಾನ’ಗಳಲ್ಲೊಂದಾದ ‘ದೂಳು ದೆವ್ವ’ ಚಿತ್ರ–9 ರಲ್ಲಿದೆ. ಇಲ್ಲಿ ಹೆಸರಿಸಿರುವ ನಿಸರ್ಗ ವಿದ್ಯಮಾನಗಳಲ್ಲಿ ಯಾವುವು ಹವಾವಿದ್ಯಮಾನಗಳಲ್ಲ?
ಅ. ಆಮ್ಲ ಮಳೆ
. ಧ್ರುವ ಪ್ರಭೆ
ಕ. ಎಲ್‌–ನೈನೋ
ಡ. ಟಾರ್ನೆಡೋ
ಇ. ತ್ಸುನಾಮಿ
ಈ. ಇರಿಡಿಸೆನ್‌್ಸ
ಉ. ಸೈಕ್ಲೋನ್‌
ಟ. ಲಾ–ನೀನಾ
 
**
10. ಅಮೃತ ಶಿಲಾ ನಿರ್ಮಿತ, ವಿಶ್ವ ವಿಖ್ಯಾತ ಸುರಸುಂದರ ಶಿಲ್ಪ ‘ತಾಜ್‌ ಮಹಲ್‌’ ಚಿತ್ರ–10 ರಲ್ಲಿದೆ. ಅಮೃತಶಿಲೆ ಒಂದು ರೂಪಾಂತರ ಶಿಲೆ–ಹೌದಲ್ಲ? ಈ ಕೆಳಗೆ ಹೆಸರಿಸಿರುವ ಯಾವ ಶಿಲೆ ರೂಪಾಂತರಗೊಂಡು ಅಮೃತಶಿಲೆ ಆಗುತ್ತದೆ?
ಅ. ಗ್ರಾನೈಟ್‌
ಬ. ಮರಳು ಶಿಲೆ
ಕ. ಸುಣ್ಣ ಶಿಲೆ
ಡ. ಬಸಾಲ್ಟ್‌
 
**
11. ಚಿತ್ರ–11 ರಲ್ಲಿರುವ ಆನೆಯನ್ನು ನೋಡಿ. ನೋಡಿದೊಡನೆಯೇ ಇದು ‘ಆಫ್ರಿಕದ ಆನೆ’ ಎಂದು ತೀರ್ಮಾನಿಸಬಹುದು ಅಲ್ಲವೇ? ತಕ್ಷಣವೇ ತೀರ್ಮಾನಿಸಲು ನೆರವಾಗುವ ವಿಶಿಷ್ಟ ದೇಹ ಲಕ್ಷಣ ಇವುಗಳಲ್ಲಿ ಯಾವುದು?
ಅ. ದೈತ್ಯ ಶರೀರ         
ಬ. ಬಹು ವಿಶಾಲ ಕಿವಿಗಳು
ಕ. ಬೃಹತ್‌ ದಂತ ಜೋಡಿ      
. ಪುಟ್ಟ ಕಣ್ಣುಗಳು
 
**
12. ವಿಶ್ವ ಪ್ರಸಿದ್ಧವಾದ ಮಾನವ ನಿರ್ಮಿತವಾದ ಎರಡು ‘ಗಗನ ಚುಂಬಿ’ಗಳು ಚಿತ್ರ–12 ಮತ್ತು 13 ರಲ್ಲಿವೆ.
ಅ. ಈ ಗಗನ ಚುಂಬಿಗಳು ಯಾವುವು?
ಬ. ಇವು ಇರುವ ರಾಷ್ಟ್ರಗಳು ಮತ್ತು ನಗರಗಳು ಯಾವುವು?
 
**
ಉತ್ತರಗಳು
1. ಅ, ಬ, ಡ, ಈ ಮತ್ತು ಉ.
2. ಬ, ಡ, ಇ ಮತ್ತು ಉ.
3. 1–ಡ; 2–ಈ; 3–ಕ; 4–ಬ; 5–ಇ; 6–ಅ.
4. ಕ್ರಮವಾಗಿ ಡ–ಅ–ಕ–ಇ–ಬ–ಈ.
5. ಅ–ಆಫ್ರಿಕ; ಬ–ನೈಲ್‌; ಕ–ಸಹರಾ.
6. ಕ–ಅತ್ಯಂತ ಕಡಿಮೆ ಮಳೆ.
7. 1–ಇ; 2–ಕ; 3–ಅ; 4–ಈ; 5–ಡ; 6–ಬ.
8. ಬ, ಕ ಮತ್ತು ಈ.
9. ಬ ಮತ್ತು ಇ.
10. ಕ. ಸುಣ್ಣ ಶಿಲೆ.
11. ಬ. ಬಹು ವಿಶಾಲ ಕಿವಿಗಳು.
12. ಅ. ಚಿತ್ರ–12 – ಪೆಟ್ರೊನಾಸ್‌ ಟವರ್ಸ್‌. ಚಿತ್ರ–13–ಸಿ.ಎನ್‌. ಟವರ್‌.
      ಬ. ಚಿತ್ರ–12– ಮಲೇಶಿಯಾದ ಕೌಲಾಲಂಪುರ.
          ಚಿತ್ರ–13– ಕೆನಡದ ಟೊರಾಂಟೋ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.