ADVERTISEMENT

ಮಕ್ಕಳ ಕಲ್ಪನಾ ವಿಲಾಸ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2016, 19:30 IST
Last Updated 6 ಫೆಬ್ರುವರಿ 2016, 19:30 IST
ಮಕ್ಕಳ ಕಲ್ಪನಾ ವಿಲಾಸ
ಮಕ್ಕಳ ಕಲ್ಪನಾ ವಿಲಾಸ   

‘ಕಥೆ ಬರೀರಿ’ ಎನ್ನುವ ‘ಮುಕ್ತಛಂದ’ದ ಕರೆಗೆ ಕನ್ನಡದ ಮಕ್ಕಳು ಗಮನಾರ್ಹ ಪ್ರಮಾಣದಲ್ಲಿ ಸ್ಪಂದಿಸಿದ್ದಾರೆ. ಶಾಲಾ ಪುಸ್ತಕಗಳ ಹೊರತಾಗಿಯೂ ನಮ್ಮ ಮಕ್ಕಳಿಗೆ ಸಾಂಸ್ಕೃತಿಕ ಲೋಕವೊಂದಿದೆ ಎನ್ನುವುದಕ್ಕೆ ಈ ಸ್ಪರ್ಧೆಗೆ ಬಂದ ಬರಹಗಳು ಉದಾಹರಣೆಯಂತಿವೆ. ನಾಡಿನ ವಿವಿಧ ಭಾಗಗಳಿಂದ ಸ್ಪರ್ಧೆಗೆ ಬಂದ ಕಥೆಗಳಲ್ಲಿನ ಪುಟಾಣಿಗಳ ಕಲ್ಪನಾವಿಲಾಸ ಬೆರಗು ಹುಟ್ಟಿಸುವಂತಿದೆ. ರಾಜ ರಾಣಿಯರ ಕಥೆಗಳಿಂದ ಈ ಹೊತ್ತಿನ ಪರಿಸರ ಕಾಳಜಿಯವರೆಗಿನ ವೈವಿಧ್ಯದ ಕಥೆಗಳು ಗಮನಸೆಳೆಯುತ್ತವೆ. ಅನೇಕ ಕಥೆಗಳಲ್ಲಿ ದೊಡ್ಡವರ ಹಸ್ತಕ್ಷೇಪ ಎದ್ದುಕಾಣಿಸುವಂತಿದೆ. ಈ ಹಸ್ತಕ್ಷೇಪದ ಕಾರಣದಿಂದಾಗಿಯೇ ಕಥೆಗಳು ಸೊರಗಿರುವುದೂ ಇದೆ.

‘ಪ್ರಜಾವಾಣಿ’ಯ ‘ಪುರವಣಿ ಬಳಗ’ ಸ್ಪರ್ಧೆಗೆ ಬಂದ ಹತ್ತು ಕಥೆಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಿದೆ. ಈ ಕಥೆಗಳ ಪುಟಾಣಿಗಳಿಗೆ ಅಭಿನಂದನೆ ಮತ್ತು ಶುಭಾಶಯ. ಬಹುಮಾನಿತರಿಗೆ ಪುಸ್ತಕರೂಪದ ಬಹುಮಾನಗಳನ್ನು ತಲುಪಿಸಲಾಗುವುದು.

ಬಹುಮಾನಿತ ಕಥೆಗಳು
ಸ್ನೇಹದ ಫಲ– ಹರ್ಷಿತ ಡಿ.ಕೆ., ಸಂತೇಬೆನ್ನೂರು
ಹುಣಸೆ ಮರದ ದೆವ್ವ– ದಿಶಾ ಪಿ., ಬೆಂಗಳೂರು
ಅಳಿಲು– ಖುಷಿ ಡಿ.ಆರ್., ಬೆಂಗಳೂರು
ಅವಂತಿಕಳ ಕಥೆ– ಎ.ಸಿ.ಶಾಲಿನಿ, ಟಿ.ನಡಂಪಲ್ಲಿ, ಮುಳಬಾಗಲು ತಾಲ್ಲೂಕು
ಜಾಣ ರಾಜಕುಮಾರಿ– ಮಹಿ ಎಸ್. ಶ್ರೀಧರ್, ಬೆಂಗಳೂರು
ಲಿಲ್ಲಿ ರೋಸ್– ನಿಷ್ಕಲ ಧಾತ್ರಿ, ಮಂಗಳೂರು
ತೋಟದ ಹೂವುಗಳು– ಸಿರಿ, ಸಿಂಧನೂರು
ನದಿಯ ಅಳಲು– ವಿನಯ್‌ಕುಮಾರ್ ಎಂ.ಕೆ., ಮೈಸೂರು
ರಾಮು ಮತ್ತು ಬೆಕ್ಕು– ಕಿರಣ್ ಕುಮಾರ್ ಡಿ.ಕೆ., ಕನ್ನಮಂಗಲ, ಚಿಕ್ಕಬಳ್ಳಾಪುರ ಜಿಲ್ಲೆ
ಇಲ್ಲಿಗೂ ಬಂದೆಯ ಜಡೆ ಶಂಕರ– ಪ್ರಿಯಾಂಕ ಕೆ.ಎಂ., ಹೆಗ್ಗಡಹಳ್ಳಿ, ನಂಜನಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.