ADVERTISEMENT

ವಿಜ್ಞಾನ ಪ್ರಪಂಚ: ಎಷ್ಟು ಪರಿಚಿತ?

ಎನ್.ವಾಸುದೇವ್
Published 13 ಮೇ 2017, 19:30 IST
Last Updated 13 ಮೇ 2017, 19:30 IST
ವಿಜ್ಞಾನ ಪ್ರಪಂಚ: ಎಷ್ಟು ಪರಿಚಿತ?
ವಿಜ್ಞಾನ ಪ್ರಪಂಚ: ಎಷ್ಟು ಪರಿಚಿತ?   

1. ಧರೆಯ ಜೀವ ಜಗದ ಅತ್ಯಂತ ದೀರ್ಘಾಯುಷಿಗಳು ವೃಕ್ಷಗಳೇ ತಾನೇ? ಹಲವು ಸಾವಿರ ವರ್ಷ ವಯಸ್ಸಾಗಿರುವ ಜೀವಂತ ವೃಕ್ಷವೊಂದರ ಚಿತ್ರ –1ರಲ್ಲಿದೆ. ಪ್ರಸ್ತುತ ಗರಿಷ್ಠ ಜೀವಿತದ ವಿಶ್ವದಾಖಲೆ ಸ್ಥಾಪಿಸಿರುವ ಜೀವಂತ ವೃಕ್ಷದ ವಯಸ್ಸು ಇವುಗಳಲ್ಲಿ ಯಾವುದಕ್ಕೆ ತುಂಬ ಸಮೀಪ?
ಅ.  12,000 ವರ್ಷ ಬ.  9,500 ವರ್ಷ
ಕ.   5,500 ವರ್ಷ ಡ.  4,300 ವರ್ಷ

2. ಚಿತ್ರ-2ರಲ್ಲಿರುವ ಕಪ್ಪೆ ಜೋಡಿಯನ್ನು ಗಮನಿಸಿ. ದಕ್ಷಿಣ ಅಮೆರಿಕದ ‘ಅಮೆಜೋನಿಯಾ’ ವೃಷ್ಟಿವನದಲ್ಲಿ ನೆಲೆಸಿರುವ ಈ ಬಗೆಯ ಕಪ್ಪೆಗಳ ವೈಶಿಷ್ಟ್ಯ ಇವುಗಳಲ್ಲಿ ಯಾವುದು ಗೊತ್ತೇ?
ಅ.  ಬಹಳ ಪುಟ್ಟ ದೇಹಗಾತ್ರ
ಬ.  ಗಾಢ ವರ್ಣಾಲಂಕೃತ ಶರೀರ
ಕ.   ಘೋರ ವಿಷ ತುಂಬಿದ ದೇಹ
ಡ.  ಅಳಿವ ಹಾದಿಯಲ್ಲಿರುವ ಪರಿಸ್ಥಿತಿ

3. ಭಾರೀ ಬಂಡೆಯೊಂದರ ಸೀಳು ನೋಟ ಚಿತ್ರ-3ರಲ್ಲಿದೆ. ಈ ವಿಸ್ಮಯಕರ ನೈಸರ್ಗಿಕ ವರ್ಣ ಚಿತ್ತಾರದಲ್ಲಿನ ಕೆಂಪು ಬಣ್ಣಕ್ಕೆ ಇಲ್ಲಿ ಹೆಸರಿಸಿರುವ ಯಾವ ಅಂಶ ಕಾರಣ?
ಅ.  ಕಬ್ಬಿಣದ ಆಕ್ಸೈಡ್    ಬ. ಸಿಲಿಕಾನ್ ಡೈ ಆಕ್ಸೈಡ್
ಕ.   ಇಂಗಾಲ                ಡ. ಕ್ಯಾಲ್ಷಿಯಂ ಕಾರ್ಬನೇಟ್

4. ಹದ್ದುಗಳ ವರ್ಗಕ್ಕೆ ಸೇರಿದ ಸುಪ್ರಸಿದ್ಧ ಹಕ್ಕಿಯೊಂದು ಚಿತ್ರ-4 ರಲ್ಲಿದೆ ನೋಡಿ:
ಅ.  ಈ ಹಕ್ಕಿಯ ಹೆಸರೇನು?
ಬ.  ಇದು ಯಾವ ದೇಶದ ರಾಷ್ಟ್ರ ಪಕ್ಷಿ?

5. ಚಾರ್ಲ್ಸ್ ಡಾರ್ವಿನ್ ನ ’ಜೀವ ವಿಕಾಸ ಸಿದ್ಧಾಂತ’ಕ್ಕೆ ಪ್ರೇರಣೆ ನೀಡಿದ, ಆಧಾರಗಳನ್ನೂ ಒದಗಿಸಿದ ವಿಖ್ಯಾತ ದ್ವೀಪದ ಒಂದು ದೃಶ್ಯ ಚಿತ್ರ-5ರಲ್ಲಿದೆ. ಈ ದ್ವೀಪ ಯಾವುದು ಗೊತ್ತೇ?
ಅ.  ಟಾಸ್ಮೇನಿಯಾ ಬ.  ಮಡಗಾಸ್ಕರ್
ಕ.   ಗ್ಯಾಲಪಗಾಸ್ ಡ.  ಹವಾಯ್

6. ಆಫ್ರಿಕ ಖಂಡದ ಅತ್ಯುನ್ನತ ಅಗ್ನಿಪರ್ವತದ ಒಂದು ದೃಶ್ಯ ಚಿತ್ರ-6ರಲ್ಲಿದೆ. ಹಿಮಾವೃತ, ಮೇಘಾವೃತ ಗಗನ ಚುಂಬಿ ಶಿಖರದ ಈ ಅಗ್ನಿಪರ್ವತ ಇವುಗಳಲ್ಲಿ ಯಾವುದು?
ಅ.  ಎಟ್ನಾ  ಬ.  ಕಿಲಿಮಂಜಾರೋ
ಕ.   ಫ್ಯೂಜಿಯಾಮಾ ಡ.  ಸೇಂಟ್ ಹೆಲೆನ್ಸ್
ಇ.  ಕ್ರಕಟೋವಾ

7. ವಿಶ್ವದ ಎರಡನೆಯ ಅತ್ಯಂತ ಬೃಹತ್ ಜಲ ವಿದ್ಯುತ್ ಯೋಜನೆಯ ಆಕರವಾಗಿರುವ ‘ಇಟಾಯಿಪು’ ಅಣೆಕಟ್ಟಿನ ಒಂದು ನೋಟ ಚಿತ್ರ- 7ರಲ್ಲಿದೆ. ಈ ಮಹಾನ್ ಅಣೆಕಟ್ಟು ಯಾವ ಭೂ ಖಂಡದಲ್ಲಿದೆ?
ಅ.  ಆಫ್ರಿಕ  ಬ.  ಆಸ್ಟ್ರೇಲಿಯಾ
ಕ.  ಯೂರೋಪ್ ಡ.  ಏಷಿಯಾ
ಇ.  ದಕ್ಷಿಣ ಅಮೇರಿಕ



8. ಕಲ್ಲಿದ್ದಿಲನ್ನು ಉರಿಸಿ ವಿದ್ಯುತ್ತನ್ನು ಉತ್ಪಾದಿಸುವ ‘ಶಾಖ ವಿದ್ಯುತ್ ಸ್ಥಾವರ’ವೊಂದರ ದೃಶ್ಯ ಚಿತ್ರ -8ರಲ್ಲಿದೆ. ಕಲ್ಲಿದ್ದಿಲಿನ ಹೊಗೆ ಬಹು ಹಾನಿಕಾರಕ ಎಂಬುದು ನಿಮಗೂ ಗೊತ್ತಲ್ಲ? ಕಲ್ಲಿದ್ದಿಲಿನ ಹೊಗೆಯಲ್ಲಿನ ಅಪಾಯಕಾರೀ ವಸ್ತುಗಳನ್ನು ಈ ಪಟ್ಟಿಯಲ್ಲಿ ಗುರುತಿಸಿ.
ಅ.   ಸಾರಜನಕದ ಆಕ್ಸೈಡ್      ಇ.   ಸೀಸ
ಬ.   ಪಾದರಸ                       ಈ.  ಹಾರು ಬೂದಿ
ಕ.    ಗಂಧಕದ ಡೈ ಆಕ್ಸೈಡ್     ಉ.  ರಂಜಕ
ಡ.   ಇಂಗಾಲದ ಡೈ ಆಕ್ಸೈಡ್    ಟ.   ಸೋಡಿಯಂ

9. ಪ್ರಸ್ತುತ ಅವಶೇಷ ರೂಪದಲ್ಲಷ್ಟೇ ಉಳಿದಿರುವ, ಪುರಾತನ, ವಿಶಿಷ್ಟ ವಿಧದ, ಬೃಹತ್ ಗಗನ ಚುಂಬಿ ಗೋಪುರ ನಿರ್ಮಾಣ ಚಿತ್ರ-9ರಲ್ಲಿದೆ. ಈ ಬಗೆಯ ಪ್ರಸಿದ್ಧ ವಾಸ್ತು ನಿರ್ಮಿತಿಯ ಹೆಸರೇನು ಗೊತ್ತೇ?
ಅ.  ಗೋರಿ ಪಿರಮಿಡ್
ಬ.  ದೇಗುಲ ಪಿರಮಿಡ್
ಕ.   ಜ಼ಿಗುರಾಟ್
ಡ. ಅರಮನೆ ಪಿರಮಿಡ್

10.  ಅಂತರಿಕ್ಷ ಕಾಯಗಳ ಅಧ್ಯಯನಕ್ಕೆ ಸಂಬಂಧಿಸಿದ ವಿಶೇಷ ವೈಜ್ಞಾನಿಕ ಸಾಧನ ವ್ಯವಸ್ಥೆಯೊಂದು ಚಿತ್ರ-10ರಲ್ಲಿದೆ. ಇದೇನೆಂದು ಈ ಕೆಳಗಿನ ಪಟ್ಟಿಯಲ್ಲಿ ಗುರುತಿಸಬಲ್ಲಿರಾ?
ಅ.  ರೇಡಾರ್ 
ಬ.  ಲೀಡರ್
ಕ.   ರೇಡಿಯೋ ದೂರದರ್ಶಕ 
ಡ.  ರೇಡಿಯೋ ಇಂಟರ್ ಫೆರಾಮೀಟರ್
ಇ.  ಸ್ಪೆಕ್ಟ್ರಾಮೀಟರ್

11. ನಮ್ಮ ಸೌರವ್ಯೂಹದ್ದೇ ಭೂಮ್ಯೇತರ ಗ್ರಹವೊಂದರ ಮೇಲಿನ ಮಾನವ ನೆಲೆಯೊಂದರ ವೈಜ್ಞಾನಿಕ ಕಲ್ಪನಾ ಚಿತ್ರವೊಂದು ಇಲ್ಲಿದೆ (ಚಿತ್ರ-11). ಮನುಷ್ಯರ ವಾಸ ಸಾಧ್ಯವಾಗಬಹುದಾದ ಈ ಗ್ರಹ ಯಾವುದು ಹೇಳಬಲ್ಲಿರಾ?
ಅ. ಶುಕ್ರ ಗ್ರಹ  ಬ. ಮಂಗಳ ಗ್ರಹ
ಕ.  ಗುರು ಗ್ರಹ ಡ. ನೆಪ್ಚೂನ್ ಗ್ರಹ

12. ಮನುಷ್ಯರಿಂದ ರಚನೆಗೊಂಡ, ಬಹಳ ಮಹತ್ವದ್ದೂ ಆಗಿರುವ, ಬಹು ವಿಶಿಷ್ಟ ಪ್ರಾಚೀನ ನಿರ್ಮಿತಿಗಳು ಚಿತ್ರ-12ರಲ್ಲಿವೆ. ಈ ನಿರ್ಮಿತಿಗಳು ಏನೆಂದು ಈ ಪಟ್ಟಿಯಲ್ಲಿ ಪತ್ತೆ ಹಚ್ಚಿ.
ಅ.  ಮೂಳೆ ಕೆತ್ತನೆಗಳು
ಬ.  ಚಿಪ್ಪುಗಳ ಪದಕ
ಕ.   ವಿಧ ವಿಧ ಶಿಲಾಯುಧಗಳು
ಡ.  ಕೆತ್ತಿದ ಮರದ ಚೂರುಗಳು

13. ನಮ್ಮ ಸೌರವ್ಯೂಹದ ಹಲವಾರು ಗ್ರಹಗಳು ಚಂದ್ರ ಪರಿವಾರವನ್ನು ಪಡೆದಿವೆ, ಹೌದಲ್ಲ? ಸೌರವ್ಯೂಹದ ಚಂದ್ರರನ್ನು ಕುರಿತ ಈ ಮೂರು ಸರಳ ಪ್ರಶ್ನೆಗಳಿಗೆ ಉತ್ತರಿಸಬಲ್ಲಿರಾ?
ಅ.  ಚಂದ್ರರೇ ಇಲ್ಲದ ಗ್ರಹಗಳು ಯಾವುವು ?
ಬ.  ಶನಿ ಗ್ರಹದ ಅತ್ಯಂತ ದೈತ್ಯ ಚಂದ್ರ ಚಿತ್ರ-13ರಲ್ಲಿದೆ. ಇದರ ಹೆಸರೇನು ?
ಕ.   ’ಗ್ಯಾನಿಮೀಡ್’ ಯಾವ ಗ್ರಹದ ಚಂದ್ರ ?

14. ನಮ್ಮ ಸೌರವ್ಯೂಹದಿಂದಾಚೆ, ಸೌರೇತರ ನಕ್ಷತ್ರಗಳನ್ನು ಪರಿಭ್ರಮಿಸುತ್ತಿರುವ (ಚಿತ್ರ-14) ಸಾವಿರಾರು ಅನ್ಯಗ್ರಹಗಳು ಪತ್ತೆಯಾಗಿವೆ, ಹೌದಲ್ಲ? ಅಂತಹ ಅನ್ಯಗ್ರಹಗಳಲ್ಲೆಲ್ಲ ನಮಗೆ ಅತ್ಯಂತ ಹತ್ತಿರ ಇರುವ ಅನ್ಯಗ್ರಹ ನಮ್ಮಿಂದ ಸುಮಾರು ಎಷ್ಟು ದೂರದಲ್ಲಿದೆ?
ಅ.   2.8 ಜ್ಯೋತಿರ್ವರ್ಷ ಬ.   4.2 ಜ್ಯೋತಿರ್ವರ್ಷ
ಕ.   6.4 ಜ್ಯೋತಿರ್ವರ್ಷ ಡ.  8.5 ಜ್ಯೋತಿರ್ವರ್ಷ

ಉತ್ತರಗಳು
1. ಬ.9550 ವರ್ಷ
2. ಕ. ವಿಷಮಯ ಶರೀರ
3. ಅ.ಕಬ್ಬಿಣದ ಆಕ್ಸೈಡ್
4.ಅ. ಬಾಲ್ಡ್ ಈಗಲ್, ಬ- ಯು. ಎಸ್. ಎ
5. ಕ. ಗ್ಯಾಲಪಗಾಸ್ ದ್ವೀಪ
6. ಡ. ಕಿಲಿಮಂಜಾರೋ
7. ಇ. ದಕ್ಷಿಣ ಅಮೆರಿಕ
8. ಉ ಮತ್ತು ಟ ಬಿಟ್ಟು ಇನ್ನೆಲ್ಲ
9. ಕ. ಜ಼ಿಗುರಾಟ್
10  ಡ.ರೇಡಿಯೋ ಇಂಟರ್ ಫೆರಾಮೀಟರ್
11. ಬ. ಮಂಗಳ ಗ್ರಹ
12. ಕ. ಶಿಲಾಯುಧಗಳು
13. ಅ. ಬುಧ ಮತ್ತು ಶುಕ್ರ, ಬ. ಟೈಟಾನ್, ಕ. ಗುರುಗ್ರಹ
14. ಬ. 4.2 ಜ್ಯೋತಿರ್ವರ್ಷ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.