ADVERTISEMENT

ಹಾಡಿನ ಹಕ್ಕಿ

ತಮ್ಮಣ್ಣ ಬೀಗಾರ
Published 1 ಏಪ್ರಿಲ್ 2017, 19:30 IST
Last Updated 1 ಏಪ್ರಿಲ್ 2017, 19:30 IST
ಚಿತ್ರ: ಶ್ರೀಕಂಠಮೂರ್ತಿ
ಚಿತ್ರ: ಶ್ರೀಕಂಠಮೂರ್ತಿ   

ಹಾಡಿನ ಹಕ್ಕಿ ನೋಡಿದ್ದೀರಾ
ಶಾಲೆಯ ಒಳಗೆ ಬಂದಿತ್ತಂತೆ
ಪುಸ್ತಕದಲ್ಲಿ ಕಂಡಿತ್ತಂತೆ
ಎಲ್ಲರ ತಲೆಯ ಹೊಕ್ಕಿತ್ತಂತೆ
ಕಚಗುಳಿ ಇಟ್ಟು ಹಾರಿಹೋಯ್ತಂತೆ
ಹಾಡಿನ ಹಕ್ಕಿ ಕಂಡಿದ್ದೀರಾ

ಮಕ್ಕಳ ಸಂಗಡ ಬಂದಿತ್ತಂತೆ
ಅಜ್ಜಿಯ ಕೊರಳಲಿ ಕೂತಿತ್ತಂತೆ
ಸುಗ್ಗಿಯ ಹಾಡಲಿ ಕುಣಿದಿತ್ತಂತೆ
ಖುಷಿ ಖುಷಿಯಾಗಿ ಹಾರಿಹೋಯ್ತಂತೆ
ಹಾಡಿನ ಹಕ್ಕಿ ಬಂದಿತ್ತಂತೆ

ಜಿಂಕೆ ಸಂಗಡ ಓಡಿತ್ತಂತೆ
ನೀರಿನ ಆಟ ಆಡಿತ್ತಂತೆ
ಗಾಳಿಯ ಸಂಗಡ ಸೇರಿತ್ತಂತೆ
ಹಸಿರಲಿ ಬೆರೆತು ಉಳಿದಿತ್ತಂತೆ

ADVERTISEMENT

ಹಾಡಿನ ಹಕ್ಕಿ ನೀನೇ ಬೇಕು
ಪಾಪು ತೊಟ್ಟಿಲು ತೂಗಲು ಬೇಕು
ಜೋಕಾಲಿ ಹಗ್ಗ ಜೀಕಲು ಬೇಕು
ಎಲ್ಲಾ ಕಡೆಯಲು ನೀನಿರಬೇಕು
ನಿನ್ನಯ ಜೊತೆಗೆ ನಾನಿರಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.