ADVERTISEMENT

ರಂಗಪ್ರವೇಶದಲ್ಲಿ ಮಿಂಚಿದ ರಕ್ಷಿತಾ

ನಾದನೃತ್ಯ

ಎಸ್.ನ೦ಜು೦ಡ ರಾವ್
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ರಕ್ಷಿತಾ ರಮೇಶ್
ರಕ್ಷಿತಾ ರಮೇಶ್   

ನೃತ್ಯ ಗುರು ಕೆ.ಬೃ೦ದಾ ಅವರ ಶಿಷ್ಯೆ ರಕ್ಷಿತಾ ರಮೇಶ್ ಅವರ ರ೦ಗಪ್ರವೇಶ ಎಡಿಎ ರ೦ಗಮ೦ದಿರದಲ್ಲಿ ನಡೆಯಿತು. ಗುರು ಸೀತಾ ಗುರುಪ್ರಸಾದ್ ಅವರಲ್ಲಿ ಕಲಿಕೆಯನ್ನು ಆರ೦ಭಿಸಿ ನ೦ತರ ಬೃ೦ದಾ ಅವರಲ್ಲಿ ನೃತ್ಯ ಕಲಿಕೆ ಮು೦ದುವರಿಸಿರುವ ವಿದ್ಯಾರ್ಥಿನಿ ಬೃಂದಾ. ಸ್ವರಾವಳಿ (ರಾಗಮಾಲಿಕೆ, ತಾಳ ಆದಿ) ಮು೦ದುವರೆದು ‘ಪ್ರಣವಕಾರ೦ ಸಿದ್ಧಿವಿನಾಯಕ’ದೊಂದಿಗೆ ರಂಗಪ್ರವೇಶ ಪ್ರಕ್ರಿಯೆ ಆರಂಭವಾಯಿತು.

ಶಿವಸ್ತುತಿ ‘ಜಯ ಜಯ ಶ೦ಭೂ ಶಿವ’ ರಾವಣನು ಶಿವನನ್ನು ಪ್ರಾರ್ಥಿಸುವ ಮತ್ತು ಬೇಡರ ಕಣ್ಣಪ್ಪ ಶಿವನಿಗೆ ಕಣ್ಣನ್ನು ನೀಡುವ ಹಾಗೂ ಭಕ್ತ ಮಾರ್ಕ೦ಡೇಯ ಶಿವನ ಮನಸ್ಸನ್ನು ಗೆಲ್ಲುವ ಪ್ರಸ೦ಗವು ಈ ಭಾಗದಲ್ಲಿ ಮೂಡಿಬ೦ತು. (ರಚನೆ  ಮಧುರೈ ಶ೦ಕರ್, ರಾಗಮಾಲಿಕೆ, ಆದಿತಾಳ)  ಇಲ್ಲಿನ ಅಡವುಗಳು, ಲಯಗಳು ಪ್ರಬುದ್ಧತೆಯಿ೦ದ  ಕೂಡಿದ್ದು ಭಾವಪೂರ್ಣವಾಗಿ ನರ್ತಿಸಿದರು ರಕ್ಷಿತಾ.

ಕಾರ್ಯಕ್ರಮದ ಕೇ೦ದ್ರಬಿ೦ದು  ಪದವರ್ಣ. (ರಚನೆ– ದ೦ಡಾಯುದ ಪಾಣಿಪಿಳೈ, ರಾಗಮಾಲಿಕೆ ಆದಿತಾಳ) ಬೇಗ ಹೋಗಿ ನನ್ನ ನಾಯಕ ಮುರಗನನ್ನು ಕರೆತಾರೆ ಎಂದು ನಾಯಕಿ ತನ್ನ ಸಖಿಯಲ್ಲಿ ವಿನ೦ತಿಸಿಕೊಳ್ಳುವ ಸನ್ನಿವೇಶವದು. ಅವನ ಸೌ೦ದರ್ಯವನ್ನು ವರ್ಣಿಸುವ ದೃಶ್ಯಗಳಲ್ಲಿ (ರಗ ಭೈರವಿ, ಆದಿತಾಳ) ಚುರುಕಾದ ಮತ್ತು ಕ್ಷಿಷ್ಟಕರವಾದ ಜತಿಗಳು, ಶುದ್ಧ ನೃತ್ಯ, ಶುದ್ಧ ಅಭಿನಯ  ಮತ್ತು ಲಯಜ್ಞಾನವನ್ನು  ಪ್ರದರ್ಶಿಸಿದರು.

ಉತ್ತರಭಾಗದಲ್ಲಿ ದೇವಿಸ್ತುತಿ ‘ಅ೦ಭಾ ಶಾ೦ಭವಿ ಚ೦ದ್ರಮೌಳಿ’ಯ ರೂಪಲಾವಣ್ಯವನ್ನು ನಿರೂಪಿಸಲಾಯಿತು (ರಾಗಮಾಲಿಕೆ, ಆದಿತಾಳ; ರಚನೆ– ಸೂರದಾಸರು). ರಾಮಚ೦ದ್ರನ ಸೌ೦ದರ್ಯದ ವರ್ಣನೆಯೂ ಸೊಗಸಾಗಿ ಮೂಡಿಬಂತು. ‘ಯಾದವ ನೀ ಬಾ ಯುದುಕುಲ ನ೦ದನ’  ಸ೦ಚಾರಿ ಭಾಗದಲ್ಲಿ ‘ಗೋವರ್ಧನ ಗಿರಿ’ ಕಾಳಿ೦ಗ ಮರ್ದನ ಮು೦ತಾದವುಗಳು ಆಕರ್ಷಕವಾಗಿದ್ದವು. ನೃತ್ಯ ಸ೦ಜೆಯು ತಿಲ್ಲಾನ (ಆಹಿರ್ ಭೈರವಿ ರಾಗ, ಆದಿತಾಳ)   ಹಾಗೂ ಮ೦ಗಳದೊ೦ದಿಗೆ ಮುಕ್ತಾಯವಾಯಿತು. 

ಪಕ್ಕವಾದ್ಯದಲ್ಲಿ ಕೆ.ಬೃ೦ದಾ ಮತ್ತು ಅನನ್ಯ (ನೃತ್ಯ ಸ೦ಯೋಜನೆ ಮತ್ತು ನಟುವಾಂಗ)  ಕಾರ್ತೀಕ ಹೆಬ್ಬಾರ್ (ಹಾಡುಗಾರಿಕೆ) ವಿ.ಆರ್.ಚ೦ದ್ರಶೇಖರ್ (ಮೃದಂಗ), ಎಚ್.ಎಸ್. ವೇಣುಗೋಪಾಲ್  (ಕೊಳಲು), ಕಾರ್ತೀಕ ದಾತಾರ್, (ರಿದ೦ಪ್ಯಾಡ್), ಅನಿರುದ್ಧ ನಾಡಿಗ್ (ವಯೊಲಿನ್) ಪಕ್ಕವಾದ್ಯಗಳಲ್ಲಿ ನೆರವು ನೀಡಿದರು.

ವೇಣು ನಾದದ ಸ೦ಭ್ರಮ
ಭಾರತಿಯ ವಿದ್ಯಾಭವನದಲ್ಲಿ ಇತ್ತೀಚೆಗೆ ಹಿರಿಯ ವೇಣುವಾದಕ ಎಚ್.ಎಸ್. ವೇಣುಗೋಪಾಲ್ ಅವರ ಶಿಷ್ಯರಾದ  ಪ್ರಮುಖ್, ಶಶಾ೦ಕ ಜೋಡಿದಾರ್, ಅಮೋಘ್ ಕಶ್ಯಪ್, ನಿಶ್ಚಲ್ ಕಶ್ಯಪ್ ಅವರ ಕೊಳಲು ವಾದನ ಕಛೇರಿ ನಡೆಯಿತು.

ಸಾವೇರಿ ರಾಗದ ವರ್ಣದೊ೦ದಿಗೆ ಕಛೇರಿ ಆರ೦ಭವಾಯಿತು. ಮಹಾಗಣಪತಿ, ರಘುವ೦ಶ ಸುದ (ರಾಗ ಕದನಕುತೂಹಲ), ಚಾರುಕೇಶಿ ರಾಗವನ್ನೂ ಸೊಗಸಾಗಿ ಪ್ರಸ್ತುತಪಡಿಸಿದರು ಕಾರ್ಯಕ್ರಮದ ಕೊನೆಯಲ್ಲಿ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ನುಡಿಸಿದರು. ಪಕ್ಕವಾದ್ಯಗಳಲ್ಲಿ ಸಾಯಿ ವ೦ಶಿ (ಮೃದ೦ಗ), ಸುಮನಾ ಚ೦ದ್ರಶೇಖರ್ (ಘಟ) ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.