ADVERTISEMENT

ಒಂದು ರೂಪಾಯಿ ನೋಟು ಮುದ್ರಣಕ್ಕೆ ₹ 1.14ರಷ್ಟು ವೆಚ್ಚ!

​ಪ್ರಜಾವಾಣಿ ವಾರ್ತೆ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ನವದೆಹಲಿ(ಪಿಟಿಐ): ಒಂದು ರೂಪಾಯಿ ನೋಟನ್ನು ಮುದ್ರಿಸಲು ಆಗುತ್ತಿರುವ ವೆಚ್ಚ ಎಷ್ಟು? ಈ ಪ್ರಶ್ನೆಗೆ ಉತ್ತರ ₹ 1.14. ಅಂದರೆ, ನೋಟಿನ  ಮುದ್ರಣಕ್ಕೆ ಅದರ ಮುಖಬೆಲೆಗಿಂತಲೂ ಅಧಿಕ ಮೊತ್ತವೇ ವೆಚ್ಚವಾಗುತ್ತಿದೆ!

ಇತ್ತೀಚೆಗೆ ಮರಳಿ ಚಲಾವಣೆಗೆ ಬಂದ ₹ 1ರ ನೋಟಿನ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಗುರುವಾರ ಈ ಉತ್ತರ ಸಿಕ್ಕಿದೆ.

ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ‘ಸೆಕ್ಯುರಿಟಿ ಪ್ರಿಂಟಿಂಗ್‌ ಆ್ಯಂಡ್‌ ಮಿಂಟಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ’ (ಎಸ್‌ಪಿಎಂಸಿಐಎಲ್‌) 2014-15ರಲ್ಲಿ ₹ 1 ನೋಟು ಮುದ್ರಣಕ್ಕೆ  ಅಂದಾಜು ₹ 1.14ರಷ್ಟು ವೆಚ್ಚವಾಗಿರ ಬಹುದು. ಈ ಕುರಿತ ಲೆಕ್ಕಪತ್ರಗಳು ಪರಿಶೀಲನೆಯಾಗುತ್ತಿದ್ದು, ಅಂತಿಮ ಅಂಕಿ ಅಂಶ ಇನ್ನಷ್ಟೇ ಪ್ರಕಟಗೊಳ್ಳ ಬೇಕಿದೆ ಎಂದು ತಿಳಿಸಿದೆ.

ಆರ್‌ಟಿಐ ಕಾರ್ಯಕರ್ತ ಸುಭಾಷ್‌ ಚಂದ್ರ ಅಗರ್ವಾಲ್‌ ಅವರು ನೋಟಿನ ಮುದ್ರಣ ವೆಚ್ಚದ ಕುರಿತು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT