ADVERTISEMENT

ಕುಸಿದ ಸೆನ್ಸೆಕ್ಸ್, ನಿಫ್ಟಿ: ಐಟಿ ಕ್ಷೇತ್ರಗಳ ಷೇರು ವಹಿವಾಟು ತುಸು ಚೇತರಿಕೆ

ಏಜೆನ್ಸೀಸ್
Published 18 ಮೇ 2017, 10:59 IST
Last Updated 18 ಮೇ 2017, 10:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಷೇರುಮಾರುಕಟ್ಟೆಯ ಗುರುವಾರದ ವಹಿವಾಟು ಇಳಿಕೆಯೊಂದಿಗೆ ಕೊನೆಗೊಂಡಿದೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 223.98 ಅಂಶ ಇಳಿಕೆಯಾಗಿ 30,434.79 ಅಂಶ ದಾಖಲಿಸಿದೆ.

96.30 ಅಂಶ ಇಳಿಕೆಯಾಗುವ ಮೂಲಕ ನಿಫ್ಟಿ 9,429.45 ಅಂಶ ದಾಖಲಿಸಿದೆ. ಮಿಡ್‌ಕ್ಯಾಪ್, ಬ್ಯಾಂಕಿಂಗ್ ಷೇರುಗಳ ವಹಿವಾಟಿನಲ್ಲಿ ಕುಸಿತ ಕಂಡು ಬಂದಿದ್ದು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ (ಐಟಿ) ಷೇರುಗಳ ವ್ಯವಹಾರ ಮಾತ್ರ ಚೇತರಿಕೆ ದಾಖಲಿಸಿದೆ.

ವಿಪ್ರೊ, ಟಿಸಿಎಸ್ ಷೇರುಗಳು ಉತ್ತಮ ಆದಾಯಗಳಿಸಿದ್ದರೆ ಬಿಎಚ್‌ಇಎಲ್‌, ಟಾಟಾ ಮೋಟರ್ಸ್, ಯೆಸ್‌ ಬ್ಯಾಂಕ್ ಷೇರುಗಳ ವಹಿವಾಟು ಕುಸಿದಿದೆ.

ADVERTISEMENT

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು, ಲೋಹಗಳು, ಮಿಡ್‌ಕ್ಯಾಪ್ ಷೇರುಗಳ ವಹಿವಾಟಿನಲ್ಲೂ ಇಳಿಕೆ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.