ADVERTISEMENT

ಕೈಗಾರಿಕಾ ಕ್ಷೇತ್ರ ಪ್ರಗತಿ ಶೇ5.8

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 19:30 IST
Last Updated 30 ಸೆಪ್ಟೆಂಬರ್ 2014, 19:30 IST

ನವದೆಹಲಿ(ಪಿಟಿಐ): ಕಲ್ಲಿದ್ದಲು, ಸಿಮೆಂಟ್‌ ಮತ್ತು ವಿದ್ಯುತ್ ಸೇರಿದಂತೆ ಪ್ರಮುಖ ಎಂಟು ಕೈಗಾರಿಕೆಗಳು ಆಗಸ್ಟ್‌ನಲ್ಲಿ ಶೇ 5.8ರಷ್ಟು ಉತ್ತಮ ಪ್ರಗತಿ ಸಾಧಿಸಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 4.7ರಷ್ಟಿತ್ತು.

ಕಲ್ಲಿದ್ದಲು ಶೇ 13.4, ಸಿಮೆಂಟ್‌ ಶೇ 10.3 ಮತ್ತು ವಿದ್ಯುತ್‌ ಶೇ 12.6ರಷ್ಟು ಪ್ರಗತಿ ಕಂಡಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ಉಕ್ಕು ತಯಾರಿಕೆ ಆಗಸ್ಟ್‌ನಲ್ಲಿ ಶೇ 9.1ರಷ್ಟು ವೃದ್ಧಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 8.1ರಷ್ಟಿತ್ತು.
ಆದರೆ ಕಚ್ಚಾತೈಲ (ಶೇ 4.9) ಮತ್ತು ನೈಸರ್ಗಿಕ ಅನಿಲ (ಶೇ 8.3) ಹಾಗೂ  ರಿಫೈನರಿ (ಶೇ 4.3)ಮತ್ತು ರಸಗೊಬ್ಬರ ವಲಯ (ಶೇ 4.3) ಇಳಿಕೆ ಆಗಿದೆ.

ಕಳೆದ ವರ್ಷದ ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿ ಶೇ 4.2ರಷ್ಟಿದ್ದ ಎಂಟು ಕೈಗಾರಿಕಾ ವಲಯಗಳ ಪ್ರಗತಿ, ಪ್ರಸಕ್ತ ಹಣಕಾಸು ವರ್ಷದ ಅದೇ  ಅವಧಿಯಲ್ಲಿ  ಶೇ 4.4ಕ್ಕೆ ಏರಿಕೆ ಕಂಡಿದೆ.

ಕೈಗಾರಿಕಾ ಪ್ರಗತಿ ಸೂಚ್ಯಂಕದಲ್ಲಿ (ಐಐಪಿ) ಈ ಎಂಟು ವಲಯಗಳ ಕೊಡುಗೆಯೇ ಶೇ 38ರಷ್ಟು ಇದೆ. ಹೀಗಾಗಿ ಆಗಸ್ಟ್‌ನ ಅಂಕಿ–ಅಂಶಗಳು ದೇಶದ ಒಟ್ಟಾರೆ ಕೈಗಾರಿಕಾ ವಲಯದ ತಯಾರಿಕೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.