ADVERTISEMENT

ಚಿಲ್ಲರೆ ಹಣದುಬ್ಬರ 3 ವರ್ಷದ ಕನಿಷ್ಠ

ಪಿಟಿಐ
Published 14 ಜನವರಿ 2017, 19:30 IST
Last Updated 14 ಜನವರಿ 2017, 19:30 IST
ಚಿಲ್ಲರೆ ಹಣದುಬ್ಬರ 3 ವರ್ಷದ ಕನಿಷ್ಠ
ಚಿಲ್ಲರೆ ಹಣದುಬ್ಬರ 3 ವರ್ಷದ ಕನಿಷ್ಠ   

ನವದೆಹಲಿ: ಚಿಲ್ಲರೆ ಹಣದುಬ್ಬರವು ಡಿಸೆಂಬರ್‌ನಲ್ಲಿ ಶೇ 3.41ಕ್ಕೆ ಇಳಿಕೆ ದಾಖಲಿಸುವ ಮೂಲಕ ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಗ್ರಾಹಕ ಬೆಲೆ ಸೂಚ್ಯಂಕವು (ಸಿಪಿಐ) ಆಧರಿಸಿ ಚಿಲ್ಲರೆ ಹಣದುಬ್ಬರ ನಿರ್ಧರಿಸಲಾಗುತ್ತದೆ. 2016ರ ನವೆಂಬರ್‌ ತಿಂಗಳಿನಲ್ಲಿ ಇದು ಶೇ 3.63ರಷ್ಟಿತ್ತು ಎಂದು ಕೇಂದ್ರ ಅಂಕಿ–ಅಂಶ ಇಲಾಖೆ ಮಾಹಿತಿ ನೀಡಿದೆ.

ಈ ಮೊದಲು 2014ರ ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಕನಿಷ್ಠ ಮಟ್ಟದಲ್ಲಿತ್ತು. 2015ರ ಡಿಸೆಂಬರ್‌ನಲ್ಲಿ ಶೇ 5.61ರಷ್ಟಿತ್ತು.

ADVERTISEMENT

ನೋಟು ರದ್ದತಿಯಿಂದ ಗ್ರಾಹಕರಲ್ಲಿ ನಗದು ಚಲಾವಣೆ ಪ್ರಮಾಣ ಕಡಿಮೆಯಾಗಿದೆ. ಇದರ ಪರಿಣಾಮದಿಂದ ಅವರ ಖರೀದಿ ಸಾಮರ್ಥವೂ ತಗ್ಗಿದೆ. ಕೊಳ್ಳುವವರೇ ಇಲ್ಲದೆ ತರಕಾರಿ ಮತ್ತು ಬೇಳೆಕಾಳುಗಳ ಬೆಲೆ ಇಳಿಕೆ ಕಂಡಿದೆ. ಹೀಗಾಗಿ, ಚಿಲ್ಲರೆ ಹಣದುಬ್ಬರ ಇಳಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಗ್ರಾಮೀಣ ಭಾಗದಲ್ಲಿ ಚಿಲ್ಲರೆ ಹಣದುಬ್ಬರ ಶೇ 3.83 ರಷ್ಟು ಮತ್ತು ನಗರ ಪ್ರದೇಶದಲ್ಲಿ ಶೇ 2.90ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.