ADVERTISEMENT

ಜಿಎಸ್‌ಟಿ: ಗರಿಷ್ಠ ಮಿತಿ ಹೆಚ್ಚಳ

ಪಿಟಿಐ
Published 2 ಮಾರ್ಚ್ 2017, 19:45 IST
Last Updated 2 ಮಾರ್ಚ್ 2017, 19:45 IST

ನವದೆಹಲಿ (ಪಿಟಿಐ):  ಮಾದರಿ ಸರಕು ಮತ್ತು ಸೇವಾ ತೆರಿಗೆ ಮಸೂದೆಯಲ್ಲಿನ  (ಜಿಎಸ್‌ಟಿ) ಪ್ರಸ್ತಾವಿತ ತೆರಿಗೆ ದರದ ಗರಿಷ್ಠ ಮಿತಿಯನ್ನು ಶೇ14ರಿಂದ ಶೇ 20ಕ್ಕೆ ಹೆಚ್ಚಿಸಲು ಜಿಎಸ್‌ಟಿ ಮಂಡಳಿ ಒಪ್ಪಿಗೆ ಸೂಚಿಸಿದೆ. 

ಎಲ್ಲ ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡ ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದ ಜಿಎಸ್‌ಟಿ ಮಂಡಳಿಯು ಹೆಚ್ಚಿನ ತೆರಿಗೆ ದರದ ಮಿತಿಯನ್ನು ಶೇ 20ಕ್ಕೆ ನಿಗದಿಗೊಳಿಸಲು ಒಪ್ಪಿಗೆ ಸೂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2016ರ ನವೆಂಬರ್‌ನಲ್ಲಿ ಪ್ರಕಟಿಸಲಾಗಿದ್ದ ಮಾದರಿ ಜಿಎಸ್‌ಟಿ ಕಾನೂನು ಪರಿಷ್ಕೃತ ಕರಡು ಪ್ರತಿಯಲ್ಲಿ ಗರಿಷ್ಠ  ತೆರಿಗೆ ಮಿತಿಯನ್ನು ಶೇ 14ಕ್ಕೆ  ನಿಗದಿ ಗೊಳಿಸಲಾಗಿತ್ತು. ಇದರಿಂದಾಗಿ ಉದ್ದೇಶಿತ ಜಿಎಸ್‌ಟಿಯ ನಾಲ್ಕು ಹಂತದ ತೆರಿಗೆ ವ್ಯವಸ್ಥೆಗೆ (5,12,18,28)    ತೊಡಕಾಗದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಜಿಎಸ್‌ಟಿ ತೆರಿಗೆ ದರ ಗರಿಷ್ಠ ಮಿತಿ ಯಾವುದೇ ಕಾರಣಕ್ಕೂ ಶೇ 14ನ್ನು ದಾಟಬಾರದು ಎಂಬ ಉಲ್ಲೇಖವನ್ನು ಶೇ 20ರ ತೆರಿಗೆ ಮಿತಿ ದಾಟಬಾರದು ಎಂದು ಬದಲಾಯಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಭವಿಷ್ಯದಲ್ಲಿ ಜಿಎಸ್‌ಟಿ ತೆರಿಗೆ ದರದ ಗರಿಷ್ಠ ಮಿತಿ ಹೆಚ್ಚಿಸುವ ಅನಿವಾರ್ಯತೆ ಎದುರಾದರೆ  ಪುನಃ ಸಂಸತ್‌ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.