ADVERTISEMENT

ಡಿಜಿಟಲ್‌ ಪಾವತಿ ದೂರು ಇತ್ಯರ್ಥಕ್ಕೆ ಶೀಘ್ರವೇ ಸಹಾಯವಾಣಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2017, 19:30 IST
Last Updated 13 ಜೂನ್ 2017, 19:30 IST

ಡಿಜಿಟಲ್‌ ಪಾವತಿಗೆ ಸಂಬಂಧಿಸಿದಂತೆ ಗ್ರಾಹಕರ ದೂರುಗಳನ್ನು ಇತ್ಯರ್ಥಪಡಿಸಲು, ಕೇಂದ್ರ ಸರ್ಕಾರದ ಉಚಿತ ಸಹಾಯವಾಣಿ ಸೇವೆಯು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದೆ.

ಉಚಿತ ಕರೆ ಸಂಖ್ಯೆ 14442ಕ್ಕೆ ಕರೆ ಮಾಡುವ ಮೂಲಕ ಗ್ರಾಹಕರು ಮೊಬೈಲ್‌ ವಾಲೆಟ್‌, ಯುಪಿಐ ಮತ್ತು ‘ಭೀಮ್‌’ಗೆ ಸಂಬಂಧಿಸಿದ ದೂರುಗಳನ್ನು  ದಾಖಲಿಸಬಹುದು.

ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ರಾಷ್ಟ್ರೀಯ ಪಾವತಿ ನಿಗಮದ ಜತೆಗೂಡಿ ಸಹಾಯವಾಣಿ ಸೇವೆ ಒದಗಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿವೆ. ದೂರು ಇತ್ಯರ್ಥಪಡಿಸಲು ಸಿದ್ಧಪಡಿಸಿರುವ ಕರಡು ನಿಯಮಗಳ ಬಗ್ಗೆ ಗ್ರಾಹಕರ ಅಭಿಪ್ರಾಯ ಸಂಗ್ರಹಿಸಿ  ಮಾರ್ಗಸೂಚಿ ಸಿದ್ಧಪಡಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ADVERTISEMENT

ಸದ್ಯ, ಡಿಜಿಟಲ್‌ ವಾಲೆಟ್‌ ಕಂಪೆನಿಗಳು ಗ್ರಾಹಕರಿಗೆ ಸಹಾಯವಾಣಿ ಸೇವೆ ಒದಗಿಸುತ್ತಿವೆ. ಆದರೆ ಈ ಬಗ್ಗೆ ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಭೀಮ್‌ ಆ್ಯಪ್‌ ಮೂಲಕ ವಹಿವಾಟು ನಡೆಸುವಾಗ ಯಾವುದೇ ರೀತಿಯ ಸಮಸ್ಯೆ ಎದುರಾದರೆ ಅದನ್ನು ಪರಿಹರಿಸಲು ಯಾವುದೇ ವ್ಯವಸ್ಥೆ ಇಲ್ಲ.

**

ಡಿಜಿಟಲ್‌ ಪಾವತಿ ಪ್ರಗತಿ

₹3.31 ಲಕ್ಷ
ಯುಪಿಐ ಮೂಲಕ ನಡೆದಿರುವ ವಹಿವಾಟು

₹1,406 ಕೋಟಿ
‘ಭೀಮ್‌’ ಮೂಲಕ ನಡೆದಿರುವ ವಹಿವಾಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.