ADVERTISEMENT

ಪತಂಜಲಿ ಜ್ಯೂಸ್‌ ಮಾರಾಟಕ್ಕೆ ತಡೆ

ಪಿಟಿಐ
Published 24 ಏಪ್ರಿಲ್ 2017, 19:29 IST
Last Updated 24 ಏಪ್ರಿಲ್ 2017, 19:29 IST

ನವದೆಹಲಿ: ಪ್ರಯೋಗಾಲಯ ಪರೀಕ್ಷೆಯಲ್ಲಿ ವಿಫಲವಾದ ಕಾರಣ ಪತಂಜಲಿ ಆಯುರ್ವೇದ ನೆಲ್ಲಿಕಾಯಿ ಜ್ಯೂಸ್‌ ಅನ್ನು ಸಶಸ್ತ್ರ ಪಡೆಗಳಿಗೆ ಮಾರಾಟ ಮಾಡುವುದನ್ನು ತಡೆ ಹಿಡಿಯಲಾಗಿದೆ.

ಕೋಲ್ಕತ್ತದಲ್ಲಿನ ಪಶ್ಚಿಮ ಬಂಗಾಳ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ನಡೆಸಿದ ಪರೀಕ್ಷೆ ವೇಳೆ, ಬಾಬಾ ರಾಮ್‌ದೇವ್‌ ಅವರ ಪತಂಜಲಿ ಸಂಸ್ಥೆಯ ನೆಲ್ಲಿಕಾಯಿ ರಸ ಆರೋಗ್ಯ ಸುರಕ್ಷತೆಯ ಮಾನದಂಡಗಳನ್ನು ತಲುಪಲು ವಿಫಲವಾಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಆಮದು ಸುಂಕ ಏರಿಸಿ’ 

ADVERTISEMENT

ನವದೆಹಲಿ: ತೊಗರಿ ಬೇಳೆ ಆಮದು ಸುಂಕವನ್ನು ಶೇ 10ರಿಂದ  ಶೇ 25ಕ್ಕೆ ಹೆಚ್ಚಿಸುವ ಪ್ರಸ್ತಾಪಕ್ಕೆ ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಹಾರ ಸಚಿವಾಲಯ ಬೆಂಬಲ ಸೂಚಿಸಿದೆ.

ತೊಗರಿ ಬೆಳೆಗಾರರ ಹಿತದೃಷ್ಟಿಯಿಂದ ಆಮದು ಸುಂಕ ಏರಿಸುವ ಪ್ರಸ್ತಾಪ ಬೆಂಬಲಿಸುವುದಾಗಿ   ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.