ಬೆಂಗಳೂರು: ಒಂದು ವಾರದಿಂದೀಚೆಗೆ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕೆಲ ಪೈಸೆಗಳಷ್ಟು ಇಳಿಕೆ ಕಂಡಿವೆ.
ವಾರದ ಹಿಂದೆ (ಸೆ. 17) ಬೆಂಗಳೂರಿನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳ ಪೆಟ್ರೋಲ್ ಸರಾಸರಿ ಮಾರಾಟ ದರ ಪ್ರತಿ ಲೀಟರ್ಗೆ ₹ 71.62 ಇತ್ತು. ಈ ಭಾನುವಾರ (ಸೆ. 24) ಈ ಸರಾಸರಿ ಬೆಲೆ ₹ 71.48ಕ್ಕೆ ತಲುಪಿದೆ. ಅಂದರೆ, ಪ್ರತಿ ಲೀಟರ್ಗೆ 14 ಪೈಸೆ ಇಳಿಕೆಯಾಗಿದೆ. ಅದೇ ರೀತಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 23 ಪೈಸೆ ಇಳಿಕೆ ಕಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.