ADVERTISEMENT

ಪೇಟೆಯಲ್ಲಿ ಸಕಾರಾತ್ಮಕ ವಹಿವಾಟು

ಪಿಟಿಐ
Published 13 ಮೇ 2017, 19:30 IST
Last Updated 13 ಮೇ 2017, 19:30 IST

ಮುಂಬೈ:  ದೇಶಿ ಷೇರುಪೇಟೆಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗುವಂತಹ ಸಕಾರಾತ್ಮಕ ವಿದ್ಯಮಾನಗಳು ನಡೆಯುತ್ತಿವೆ. ಇದರಿಂದ ಸೂಚ್ಯಂಕಗಳು ಹೊಸ ದಾಖಲೆ ಮಟ್ಟವನ್ನು ತಲುಪಿ ವಹಿವಾಟು ಅಂತ್ಯಗೊಳಿಸುತ್ತಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು  (ಬಿಎಸ್‌ಇ) ಈ ವಾರದ ವಹಿವಾಟಿನಲ್ಲಿ 329 ಅಂಶ ಏರಿಕೆ ಕಂಡು 30,188 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.  ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 116 ಅಂಶ ಏರಿಕೆ ಕಂಡು, 9,401 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ರಿಯಲ್‌ ಎಸ್ಟೇಟ್‌, ವಾಹನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಲೋಹ, ಆರೋಗ್ಯ ಸೇವೆ, ಗ್ರಾಹಕ ಬಳಕೆ ವಸ್ತುಗಳು, ಎಫ್‌ಎಂಸಿಜಿ, ವಿದ್ಯುತ್‌, ತೈಲ ಮತ್ತು ಅನಿಲ ಹಾಗೂ ಬ್ಯಾಂಕಿಂಗ್ ವಲಯದ ಷೇರುಗಳಲ್ಲಿ ಖರೀದಿ ಚುಟುವಟಿಕೆ ಹೆಚ್ಚಾಗಿತ್ತು.

ಪ್ರಮುಖ ಅಂಶಗಳು: ಈ  ಬಾರಿ ವಾಡಿಕೆಯಂತೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಇದರಿಂದ ಕೃಷಿ ಉತ್ಪಾದನೆ ಹೆಚ್ಚಾಗಿ ಆರ್ಥಿಕ ಪ್ರಗತಿಗೆ ನೆರವಾಗಲಿದೆ. ಈ ಸುದ್ದಿಯು ಹೂಡಿಕೆದಾರರಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ಉತ್ತಮ ವಹಿವಾಟು ನಡೆಯುವಂತೆ ಮಾಡಿತು.

ADVERTISEMENT

ಇನ್ನು, ನಾಲ್ಕನೇ ತ್ರೈಮಾಸಿಕದಲ್ಲಿ ಪ್ರಮುಖ ಕಂಪೆನಿಗಳ ಆರ್ಥಿಕ ಸಾಧನೆ, ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಸುಧಾರಣಾ ಕ್ರಮಗಳು ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳ ಮಾರಾಟದಿಂದ ಖರೀದಿಯತ್ತ ಹೊರಳಿರುವುದು ಷೇರುಪೇಟೆ ಚಟುವಟಿಕೆ  ಹೆಚ್ಚಿಸಿವೆ.

ವಾರದ ವಹಿವಾಟು

* ಬಿಎಸ್‌ಇ ಸಾರ್ವಕಾಲಿಕ ಗರಿಷ್ಠ ಮಟ್ಟ 30,251

* ನಿಫ್ಟಿಯ ಸಾರ್ವಕಾಲಿಕ ಗರಿಷ್ಠ ಮಟ್ಟ9,422

* ಬಿಎಸ್‌ಇ ವಹಿವಾಟು ಮೊತ್ತ ₹19 ಸಾವಿರ ಕೋಟಿ

* ಎನ್‌ಎಸ್‌ಇ ವಹಿವಾಟು ಮೊತ್ತ ₹1.21 ಲಕ್ಷ ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.