ADVERTISEMENT

ಪೇಟೆ ಮೇಲೆ ತ್ರೈಮಾಸಿಕ ಫಲಿತಾಂಶದ ಪ್ರಭಾವ

ಪಿಟಿಐ
Published 16 ಜುಲೈ 2017, 19:30 IST
Last Updated 16 ಜುಲೈ 2017, 19:30 IST

ನವದೆಹಲಿ: ಈ ವಾರದ ಷೇರುಪೇಟೆ ವಹಿವಾಟಿನ ಮೇಲೆ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಫಲಿತಾಂಶವು ಸಾಕಷ್ಟು ಪ್ರಭಾವ ಬೀರಲಿದೆ ಎಂದು ಮಾರುಕಟ್ಟೆ ಪರಿಣತರು ಹೇಳಿದ್ದಾರೆ.

‘ರಿಲಯನ್ಸ್‌ ಇಂಡಸ್ಟ್ರೀಸ್‌, ಬಜಾಜ್‌ ಆಟೊ, ಎಸಿಸಿ, ಅಲ್ಟ್ರಾಟೆಕ್‌ ಸಿಮೆಂಟ್‌, ವಿಪ್ರೊ ಮತ್ತು ಕೋಟಕ್‌ ಮಹೀಂದ್ರಾ ಬ್ಯಾಂಕ್‌ ತ್ರೈಮಾಸಿಕ ಫಲಿತಾಂಶ ಈ ವಾರ ಹೊರಬೀಳಲಿದೆ. ಇದು ಷೇರುಪೇಟೆಯ ದಿಕ್ಕನ್ನು ನಿರ್ಧರಿಸಲಿದೆ’ ಎಂದು ಟ್ರೇಡ್‌ ಸ್ಮಾರ್ಟ್‌ ಆನ್‌ಲೈನ್‌ ಸ್ಥಾಪಕ ವಿಜಯ್ ಸಿಂಘಾನಿಯಾ ಅವರು ಹೇಳಿದ್ದಾರೆ.

‘ತ್ರೈಮಾಸಿಕ ಫಲಿತಾಂಶಕ್ಕೂ ಮುನ್ನ ಮತ್ತು ನಂತರ ಷೇರುಪೇಟೆಯಲ್ಲಿ ಚಂಚಲ ಸ್ವರೂಪದ ವಹಿವಾಟು ನಡೆಯಲಿದೆ’ ಎಂದು ಸ್ಯಾಮ್ಕೊ ಸೆಕ್ಯುರಿಟೀಸ್‌ನ ಸಿಇಒ ಜಮೀತ್‌ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‌ಸೋಮವಾರದಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭ ವಾಗಲಿದೆ. ಇಲ್ಲಿ ನಡೆಯುವ ವಿದ್ಯಮಾನಗಳೂ ಷೇರುಪೇಟೆಯ ಮೇಲೆ ಪ್ರಭವ ಬೀರಲಿವೆ ಎಂದು ತಜ್ಞರು ಹೇಳಿದ್ದಾರೆ.

ಕಳೆದವಾರ ಬಿಎಸ್‌ಇ ಸೂಚ್ಯಂಕ 660 ಅಂಶ ಮತ್ತು ಎನ್‌ಎಸ್‌ಇ ನಿಫ್ಟಿ 221 ಅಂಶ ಏರಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.