ADVERTISEMENT

ಬಿಎಂಡಬ್ಲ್ಯು 'ಎಂ3 ಸೆಡಾನ್', 'ಎಂ4 ಕ್ಯುಪೆ' ಭಾರತೀಯ ಮಾರುಕಟ್ಟೆಗೆ ಲಗ್ಗೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2014, 10:28 IST
Last Updated 27 ನವೆಂಬರ್ 2014, 10:28 IST

ನೊಯ್ಡಾ: ಬಿಎಂಡಬ್ಲ್ಯು 'ಆಲ್ ನ್ಯೂ ಎಂ3 ಸೆಡಾನ್' ಮತ್ತು 'ಆಲ್ ನ್ಯೂ ಎಂ4 ಕ್ಯುಪೆ' ಐಷಾರಾಮಿ ಕಾರುಗಳು ಗುರುವಾರ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟವು. ಇಲ್ಲಿನ ಬುದ್ಧ ಇಂಟರ್ ನ್ಯಾಷನಲ್ ಸರ್ಕಿಟ್ ನಲ್ಲಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಈ ಎರಡೂ ಕಾರುಗಳನ್ನು ಚಾಲನೆ ಮಾಡುವ ಮೂಲಕ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

'ಈ ಕಾರುಗಳು ಉತ್ತಮ ಡ್ರೈವಿಂಗ್ ಅನುಭವ ನೀಡುತ್ತವೆ. ಇವೆರಡೂ ಕಾರುಗಳನ್ನು ಡ್ರೈವ್ ಮಾಡಿದಾಗ ಬ್ಯಾಟಿಂಗ್ ಮಾಡಿದ ಅನುಭವವಾಯಿತು. ರೇಸಿಂಗ್ ನ ವೇಗಕ್ಕೆ ಹಾಗೂ ಕುಟುಂಬದ ಅಗತ್ಯಕ್ಕೆ ತಕ್ಕಂತ ಕಾರುಗಳಿವು' ಎಂದರು ಸಚಿನ್.

'ಇವು ರೇಸಿಂಗ್ ಸರಣಿಯ ಕಾರುಗಳಾದರೂ ಭಾರತದ ರಸ್ತೆಗಳಿಗೆ ಹೊಂದಿಕೊಳ್ಳುತ್ತವೆ. ಹೊಸ ಪೀಳಿಗೆಯವರಿಗೆ ಈ ಕಾರುಗಳು ಹೆಚ್ಚು ಇಷ್ಟವಾಗುತ್ತವೆ. ಎಂ5 ಹಾಗೂ ಎಂ6 ಕಾರುಗಳು ಸಹ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲಿವೆ' ಎಂದು ಬಿಎಂಡಬ್ಲ್ಯು ಭಾರತೀಯ ಸಮೂಹದ ಅಧ್ಯಕ್ಷ ಫಿಲಿಪ್ ವೊನ್ ಸಾಹ್ ಹೇಳಿದರು.

ADVERTISEMENT

'ಆಲ್ ನ್ಯೂ ಎಂ3 ಸೆಡಾನ್'ನ ಎಕ್ಸ್ ಷೋರೂಂ ಬೆಲೆ ರೂ.1.19 ಕೋಟಿ ಮತ್ತು 'ಆಲ್ ನ್ಯೂ ಎಂ4 ಕ್ಯುಪೆ'ನ ಎಕ್ಸ್ ಷೋರೂಂ ಬೆಲೆ ರೂ.1.21 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.