ADVERTISEMENT

ಬಿಎಸ್‌ಎನ್‌ಎಲ್‌ನಿಂದ ಮೊಬೈಲ್‌ ವ್ಯಾಲೆಟ್‌

ಬ್ಯಾಂಕ್‌ ಖಾತೆ ಇಲ್ಲದೇ ಹಣ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 19:30 IST
Last Updated 4 ಜುಲೈ 2015, 19:30 IST

ನವದೆಹಲಿ (ಪಿಟಿಐ): ಹಣ ವರ್ಗಾವಣೆ, ಪಾವತಿಗೆ ಅನುಕೂಲವಾಗುವಂತೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಪ್ರೀ ಪೇಯ್ಡ್‌  ಕಾರ್ಡ್‌ ಹೊಂದಿರುವ ಗ್ರಾಹಕರಿಗಾಗಿ ‘ಮೊಬೈಲ್‌ ವ್ಯಾಲೆಟ್‌’ ಎಂಬ ಹೊಸ ಸೇವೆಯನ್ನು ಪರಿಚಯಿಸಿದೆ.

‘ಸ್ಪೀಡ್‌ ಪೇ’ ಹೆಸರಿನ ಈ ಸೇವೆಯಲ್ಲಿ ಗ್ರಾಹಕರು ಬ್ಯಾಂಕ್‌ ಖಾತೆ ಹೊಂದದೇ ಇದ್ದರೂ ಸಹ ಹಣ ತುಂಬಬಹುದು.  ಆ ಹಣವನ್ನು ಬ್ಯಾಂಕ್‌ ಖಾತೆಗೆ ವರ್ಗಾಯಿ ಸಲು ಅವಕಾಶವಿದೆ. ಅಲ್ಲದೆ, ಬ್ಯಾಂಕ್‌ ಶಾಖೆ ಅಥವಾ  ಬಿಎಸ್‌ಎನ್‌ಎಲ್‌ ಔಟ್‌ಲೆಟ್‌ಗಳಲ್ಲಿ  ₹1 ಲಕ್ಷದವರೆಗೆ ಹಣ  ಹಿಂದಕ್ಕೆ ಪಡೆದುಕೊಳ್ಳಬಹುದಾಗಿದೆ.

ಮಾಹಿತಿ ತಂತ್ರಜ್ಞಾನ (ಐಟಿ) ಕಂಪೆನಿ ‘ಪೈರೊ’ ಜತೆಗೂಡಿ ಈ ಸೇವೆಯನ್ನು ಪರಿಚಯಿಸಿದೆ. ಬಿಎಸ್‌ಎನ್‌ಎಲ್‌ ಗ್ರಾಹಕರು ಬಿಎಸ್‌ಎನ್‌ಎಲ್‌ ಮಳಿಗೆ ಅಥವಾ ಸೇವಾ ಕೇಂದ್ರಗಳಲ್ಲಿ ಮೊಬೈಲ್‌ ವ್ಯಾಲೆಟ್‌ ರೀಚಾರ್ಜ್‌ ಮಾಡಿಕೊಳ್ಳಬಹುದು. ಹೀಗೆ ರೀಚಾರ್ಜ್ ಮಾಡಿಕೊಂಡ ಹಣವನ್ನು  ಮೊಬೈಲ್‌ ಮೂಲಕ ಬ್ಯಾಂಕ್‌ ಖಾತೆಗೆ ವರ್ಗಾಯಿಸಬಹುದು ಎಂದು ಬಿಎಸ್‌ಎನ್‌ಎಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.

ಅಂಕಿ–ಅಂಶ
₹ 5 ಸಾವಿರ ಈ ಸೇವೆಯಲ್ಲಿ ಒಂದು ದಿನಕ್ಕೆ ಹಣ ಪಡೆಯುವ ಗರಿಷ್ಠ ಮಿತಿ
1% ವಹಿವಾಟು ಶುಲ್ಕವನ್ನು ಹಣ ವರ್ಗಾವಣೆಗೆ ವಿಧಿಸಲಾಗುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.