ADVERTISEMENT

ಮಾರುತಿ ಸುಜುಕಿ ವಾಣಿಜ್ಯ ವಾಹನಕ್ಕೆ ಎರಡು ಪ್ರಶಸ್ತಿ

ಪಿಟಿಐ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST

ಬೆಂಗಳೂರು: ಇತ್ತೀಚೆಗೆ ಪ್ರದಾನ ಮಾಡಲಾದ ವಾಣಿಜ್ಯ ವಾಹನಗಳ ವರ್ಷದ ಪ್ರಶಸ್ತಿ ವಿಭಾಗದಲ್ಲಿ  ಮಾರುತಿ ಸುಜುಕಿಯ ಮಿನಿ ಟ್ರಕ್‌, ‘ಸೂಪರ್‌ ಕ್ಯಾರಿ ಲೈಟ್‌ ಕಮರ್ಷಿಯಲ್‌ ವೆಹಿಕಲ್‌’ಗೆ ಎರಡು ಪ್ರಶಸ್ತಿಗಳು ಲಭಿಸಿವೆ.

2017ರ ಸಣ್ಣ ವಾಣಿಜ್ಯ ವಾಹನ (ಎಸ್‌ಸಿವಿ) ಮತ್ತು ವರ್ಷದ ವಾಣಿಜ್ಯ ವಾಹನ ಪ್ರಶಸ್ತಿಗಳನ್ನು ಮಿನಿ ಟ್ರಕ್‌ ಬಾಚಿಕೊಂಡಿದೆ. ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದರಿಂದಲೇ ಈ ಪ್ರಶಸ್ತಿಗಳು ಲಭಿಸಿವೆ. ಇದು ಸಿಎನ್‌ಜಿ ಮತ್ತು ಡೀಸೆಲ್‌ ಚಾಲಿತ ಮಾದರಿಗಳಲ್ಲಿ ಲಭ್ಯ ಇದೆ. ದೇಶದಾದ್ಯಂತ ಸಂಸ್ಥೆಯ ವಾಣಿಜ್ಯ ವಾಹನಗಳ 175 ವಿತರಕರು ಇದ್ದಾರೆ.

ಸರಕು ಸಾಗಣೆ, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ), ನೀರು, ಹಾಲು ಪೂರೈಕೆ, ತರಕಾರಿ ಮಾರಾಟಗಾರರಿಗೆ ‘ಸೂಪರ್‌ ಕ್ಯಾರಿ’ ವಾಹನ ಮೆಚ್ಚುಗೆಯಾಗಿದೆ. ದೇಶದಾದ್ಯಂತ ಇರುವ 3,300 ಸೇವಾ ಕೇಂದ್ರಗಳು ಇರುವುದು ಕೂಡ ಇದರ ಖರೀದಿ ಆಸಕ್ತಿ ಹೆಚ್ಚಿಸಿದೆ ಎಂದು ಸಂಸ್ಥೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.