ADVERTISEMENT

ಮೆರ್ಕ್‌ ಎಂ–ಲ್ಯಾಬ್‌ ಕೇಂದ್ರ

​ಪ್ರಜಾವಾಣಿ ವಾರ್ತೆ
Published 21 ಮೇ 2017, 19:30 IST
Last Updated 21 ಮೇ 2017, 19:30 IST
ಮೆರ್ಕ್‌ ಎಂ–ಲ್ಯಾಬ್‌ ಕೇಂದ್ರ
ಮೆರ್ಕ್‌ ಎಂ–ಲ್ಯಾಬ್‌ ಕೇಂದ್ರ   

ಬೆಂಗಳೂರು: ಆರೋಗ್ಯ ಕ್ಷೇತ್ರದ ಜನಪ್ರಿಯ ಜೈವಿಕ ವಿಜ್ಞಾನ ಮತ್ತು ತಂತ್ರಜ್ಞಾನ ಜಾಗತಿಕ ಸಂಸ್ಥೆಯಾದ ಮೆರ್ಕ್‌, ಬೆಂಗಳೂರಿನಲ್ಲಿ ಎಂ–ಲ್ಯಾಬ್‌  ಸಹಯೋಗ ಕೇಂದ್ರ ತೆರೆದಿದೆ.

‘ಪೀಣ್ಯ ಕೈಗಾರಿಕಾ ಕೇಂದ್ರದ ಮೂರನೇ ಹಂತದಲ್ಲಿರುವ ಎಂ–ಲ್ಯಾಬ್‌, ಜಾಗತಿಕ ಗುಣಮಟ್ಟದ ತಂತ್ರಜ್ಞಾನ ಪರಿಣತಿ ಹೊಂದಿದ್ದು, ಹೊಸ ಚಿಕಿತ್ಸಾ ವಿಧಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ, ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲಿದೆ. ಜೈವಿಕ ಔಷಧಿ ತಯಾರಿಕಾ ಕಂಪೆನಿಗಳು, ಆಸ್ಪತ್ರೆ  ಮತ್ತು ರೋಗಿಗಳಿಗೆ ಜಾಗತಿಕ ಗುಣಮಟ್ಟದ ತಂತ್ರಜ್ಞಾನ ಸೇವೆಯನ್ನು ತ್ವರಿತವಾಗಿ ಪೂರೈಸಲಿದೆ’ ಎಂದು ಮೆರ್ಕ್‌  ಲೈಫ್‌ ಸೈನ್ಸ್‌ನ ಸಿಇಒ ಉದಿತ್‌ ಭಾತ್ರಾ ತಿಳಿಸಿದರು.

ವಿಶ್ವದ ಅತ್ಯಂತ ಹಳೆಯ ಔಷಧಿ ಮತ್ತು ರಾಸಾಯನಿಕ ಸಂಸ್ಥೆಯಾದ ಮೆರ್ಕ್‌, ವಿಶ್ವದ  9 ಕಡೆಯಲ್ಲಿ ಮಾತ್ರ ಇಂತಹ ಕೇಂದ್ರಗಳನ್ನು ತೆರೆದಿದೆ.

ಸಿಂಜಿನ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ನ ಜೈವಿಕ ಮತ್ತು ಔಷಧಿ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಡಾ. ಧನಂಜಯ ಪಾಟಣಕರ್‌ , ‘ಬೆಂಗಳೂರು ದೇಶದ ಜೈವಿಕ ಔಷಧ ತಯಾರಿಕೆ ಉದ್ಯಮ ಕೇಂದ್ರವಾಗಿ ಬೆಳೆಯುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.