ADVERTISEMENT

ರಾಜ್ಯದಲ್ಲಿ ಆಸ್ಪೈರ್ ಹೋಮ್‌ ಫೈನಾನ್ಸ್ ವಹಿವಾಟು ಆರಂಭ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST

ಬೆಂಗಳೂರು:  ಮೋತಿಲಾಲ್ ಓಸ್ವಾಲ್ ಸೆಕ್ಯುರಿಟೀಸ್ ಲಿಮಿಟೆಡ್‌ನ  ಅಂಗ ಸಂಸ್ಥೆಯಾಗಿರುವ ಗೃಹ ಹಣಕಾಸು ಸಂಸ್ಥೆ ಆಸ್ಪೈರ್ ಹೋಮ್ ಫೈನಾನ್ಸ್ ಕಾರ್ಪೋರೇಷನ್ ಲಿಮಿಟೆಡ್ (ಎಎಚ್‍ಎಫ್‌ಸಿಎಲ್)  ರಾಜ್ಯದಲ್ಲಿ ತನ್ನ ವಹಿವಾಟು ವಿಸ್ತರಿಸಲು ಮುಂದಾಗಿದೆ.

ಈ ಉದ್ದೇಶ ಕಾರ್ಯಗತಗೊಳಿಸಲು ಬೆಂಗಳೂರಿನಲ್ಲಿ ಕಚೇರಿ ಆರಂಭಿಸಿದೆ. ರಾಜ್ಯದಲ್ಲಿ ಶೀಘ್ರದಲ್ಲೇ ಇನ್ನೂ ಏಳು ಶಾಖೆಗಳನ್ನು ತೆರೆಯಲಿದೆ. ಕೆಳ ಮತ್ತು ಮಧ್ಯಮ ವರ್ಗದ ಜನರ  ಗೃಹ ಹಣಕಾಸು ಅಗತ್ಯ ಪೂರೈಸುವುದು ಸಂಸ್ಥೆಯ ಉದ್ದೇಶವಾಗಿದೆ.

ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ಕಲಬುರ್ಗಿ, ಬೆಳಗಾವಿ, ದಾವಣಗೆರೆ, ಹೊಸಪೇಟೆಗಳಲ್ಲಿ ಸಂಸ್ಥೆಯು ಹಣಕಾಸಿನ ನೆರವನ್ನು ಒದಗಿಸಲಿದೆ.  ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ  ಅನಿಲ್ ಸಚ್ಚಿದಾನಂದ ಅವರು ಬೆಂಗಳೂರು ಶಾಖೆ ಉದ್ಘಾಟಿಸಿದರು.

ಪ್ರಸ್ತುತ ಹಣಕಾಸು ವರ್ಷದಲ್ಲಿ 750 ಗ್ರಾಹಕರಿಗೆ ಗೃಹ ಸಾಲ ವಿತರಿಸುವ ಗುರಿ ಹೊಂದಿದೆ. ಮುಂದಿನ ಹಣಕಾಸು ವರ್ಷದಲ್ಲಿ ಇದು 5,000 ಗ್ರಾಹಕರಿಗೆ ವಿಸ್ತರಿಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.