ADVERTISEMENT

ವಿಜಯ ಬ್ಯಾಂಕ್‌ ಲಾಭ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 22 ಜುಲೈ 2017, 19:30 IST
Last Updated 22 ಜುಲೈ 2017, 19:30 IST
ಕಿಶೋರ್‌ ಸಾನ್ಸಿ
ಕಿಶೋರ್‌ ಸಾನ್ಸಿ   

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌–ಜೂನ್‌) ವಿಜಯ ಬ್ಯಾಂಕ್‌ ನಿವ್ವಳ ಲಾಭ ₹254.69 ಕೋಟಿಗಳಷ್ಟಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ನಿವ್ವಳ ಲಾಭ ₹161.66 ಕೋಟಿಗಳಷ್ಟಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭದ ಪ್ರಮಾಣ ಶೇ 57.5 ರಷ್ಟು ಏರಿಕೆಯಾಗಿದೆ.

‘ಚಿಲ್ಲರೆ ವಹಿವಾಟಿನ ವರಮಾನ ಹೆಚ್ಚಳ ಮತ್ತು ವಸೂಲಿಯಾಗದ ಸಾಲ (ಎನ್‌ಪಿಎ) ತಗ್ಗಿರುವುದರಿಂದ ಈ ಪ್ರಗತಿ ಸಾಧ್ಯವಾಗಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಕಿಶೋರ್‌ ಸಾನ್ಸಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಬ್ಯಾಂಕ್‌ನ ಒಟ್ಟು ವರಮಾನ ₹2,395.05 ಕೋಟಿಗಳಿಂದ ₹3,510.11 ಕೋಟಿಗೆ ಏರಿಕೆ ಕಂಡಿದೆ.

ವಸೂಲಿಯಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣ ಶೇ 7.31 ರಿಂದ ಶೇ 7.30ಕ್ಕೆ  ಅಲ್ಪ ಇಳಿಕೆ ಕಂಡಿದೆ. ನಿವ್ವಳ ಎನ್‌ಪಿಎ ಶೇ5.42 ರಿಂದ ಶೇ 5.24ಕ್ಕೆ  ಇಳಿದಿದೆ.

ತ್ರೈಮಾಸಿಕದಲ್ಲಿ ಒಟ್ಟು ಶಾಖೆಗಳ ಸಂಖ್ಯೆ 1,868 ರಿಂದ 2,30ಕ್ಕೆ ಮತ್ತು ಎಟಿಎಂಗಳ ಸಂಖ್ಯೆ 1,680 ರಿಂದ 2,044ಕ್ಕೆ ಏರಿಕೆ ಕಂಡಿದೆ.
ಲಭಾಂಶ: 2016–17ನೇ ಆರ್ಥಿಕ ವರ್ಷಕ್ಕೆ ಪ್ರತಿ ಷೇರಿಗೆ ₹1.50 ರಷ್ಟು ಲಾಭಾಂಶ ಘೋಷಿಸಿದೆ.

ಗೃಹ ಸಾಲ: ಗೃಹ ಸಾಲ ನೀಡಿಕೆ ಶೇ 34 ರಷ್ಟು ಪ್ರಗತಿ ಕಂಡಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿಯೇ ಇದು ಅತ್ಯಂತ ಗರಿಷ್ಠ ಮಟ್ಟದ ಪ್ರಗತಿಯಾಗಿದೆ ಎಂದು ಸಾನ್ಸಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.