ADVERTISEMENT

ವಿದ್ಯುತ್‌ ಚಾಲಿತ ಆಟೊಗಳು ಕೈನೆಟಿಕ್‌, ಸ್ಮಾರ್ಟ್‌ಇ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ವಿದ್ಯುತ್‌ ಚಾಲಿತ ಕೈನೆಟಿಕ್‌ – ಸ್ಮಾರ್ಟ್‌ಇ ಆಟೊರಿಕ್ಷಾ
ವಿದ್ಯುತ್‌ ಚಾಲಿತ ಕೈನೆಟಿಕ್‌ – ಸ್ಮಾರ್ಟ್‌ಇ ಆಟೊರಿಕ್ಷಾ   

ಬೆಂಗಳೂರು: ವಿದ್ಯುತ್ ಚಾಲಿತ ತ್ರಿಚಕ್ರ ವಾಹನ ತಯಾರಿಕಾ ಸಂಸ್ಥೆ ಕೈನೆಟಿಕ್ ಗ್ರೀನ್, ಒಂದೂವರೆ ವರ್ಷದಲ್ಲಿ ದೇಶದಾದ್ಯಂತ 10,000 ವಿದ್ಯುತ್ ಚಾಲಿತ ತ್ರಿಚಕ್ರ ವಾಹನಗಳನ್ನು ಪರಿಚಯಿಸಲು, ವಿದ್ಯುತ್ ಚಾಲಿತ ವಾಹನ ತಯಾರಿಸುವ ‘ಸ್ಮಾರ್ಟ್‌ಇ’ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದಡಿ ಈಗಾಗಲೇ ಗುರುಗ್ರಾಮದಲ್ಲಿ 500 ವಾಹನಗಳನ್ನು ಬಳಕೆಗೆ ತರಲಾಗಿದೆ. ದೆಹಲಿ ಮೆಟ್ರೊ ಪ್ರಯಾಣಿಕರಿಂದ ಈ ‘ಇ–ಆಟೊರಿಕ್ಷಾ’ಗಳಿಗೆ ಉತ್ತೇಜಕರ ಪ್ರತಿಕ್ರಿಯೆ ದೊರೆತಿದೆ. ಮುಂಬರುವ ದಿನಗಳಲ್ಲಿ ಈ ಸೇವೆಯನ್ನು ದೇಶದ ಅನೇಕ ನಗರಗಳಲ್ಲಿ ಪರಿಚಯಿಸಲು ನಿರ್ಧರಿಸಲಾಗಿದೆ.

‘ಜನರಿಗೆ ಪರಿಸರ ಸ್ನೇಹಿ ಸೇವೆ ಒದಗಿಸುವುದು ಸಂಸ್ಥೆಯ ಧ್ಯೇಯವಾಗಿದೆ’ ಎಂದು ಕೈನೆಟಿಕ್ ಗ್ರೀನ್‌ ಎನರ್ಜಿ ಆ್ಯಂಡ್‌ ಪವರ್‌ ಸಲುಷನ್ಸ್‌ನ ಸಿಇಒ ಸುಲಜ್ಜಾ ಫಿರೋದಿಯಾ ಮೋಟ್ವಾನಿ ಹೇಳಿದ್ದಾರೆ. ‘2030ರ ವೇಳೆಗೆ ಭಾರತವು ವಿದ್ಯುತ್ ಚಾಲಿತ ವಾಹನಗಳ ದೇಶವಾಗುವ ನಿಟ್ಟಿನಲ್ಲಿ ಈ ಒಪ್ಪಂದವು ಮಹತ್ವದ ಮೈಲುಗಲ್ಲಾಗಲಿದೆ’ ಎಂದು ಸ್ಮಾರ್ಟ್‌ಇ ಸಂಸ್ಥೆ ಸಿಇಒ ಜಿ. ಶ್ರೀವಾಸ್ತವ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.