ADVERTISEMENT

ಶಾಶ್ವತ ಪಿಎಫ್‌ ಖಾತೆ: ಬ್ಯಾಂಕ್‌ ಮಾಹಿತಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2014, 19:30 IST
Last Updated 18 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ಶಾಶ್ವತ ಭವಿಷ್ಯನಿಧಿ ಖಾತೆ ಸಂಖ್ಯೆಗಾಗಿ (ಯುಎಎನ್‌) ನೌಕರರು ತಮ್ಮ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಬ್ಯಾಂಕ್‌ ಶಾಖೆಯ ಐಎಫ್‌ಎಸ್‌ಸಿ ಮಾಹಿತಿ ನೀಡಬೇಕಿರುವುದನ್ನು ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಕಡ್ಡಾಯಗೊಳಿಸಿದೆ.

ಯುಎಎನ್‌ ನೌಕರರಿಗೆ ನೀಡುವ ಶಾಶ್ವತ ಭವಿಷ್ಯ ನಿಧಿ ಸಂಖ್ಯೆಯಾಗಿದೆ.  ಇದರಿಂದ ನೌಕರ ಕಂಪೆನಿ ಬದಲಿಸಿದರೂ ಪಿಎಫ್‌ ಸಂಖ್ಯೆ ಬದಲಾಗುವುದಿಲ್ಲ. ಈ ಶಾಶ್ವತ ಪಿಎಫ್‌ ಸಂಖ್ಯೆ ನೀಡಲು ಐಎಫ್‌ಎಸ್‌ ಕೋಡ್ ಸಹಿತ ನೌಕರರ ಬ್ಯಾಂಕ್‌ ಖಾತೆ ಮಾಹಿತಿ ಪಡೆದುಕೊಳ್ಳುವಂತೆ 120 ಪ್ರಾದೇಶಿಕ ಕಚೇರಿಗಳಿಗೆ ಇಪಿಎಫ್‌ಒ ಸೂಚನೆ ನೀಡಿದೆ.

ಈಗಾಗಲೇ 1.80 ಕೋಟಿ ನೌಕರರ ಬ್ಯಾಂಕ್‌ ವಿವರಗಳನ್ನು, 86.90 ಲಕ್ಷ ನೌಕರರ ಪಾನ್‌ ಕಾರ್ಡ್‌ ಸಂಖ್ಯೆ ಮತ್ತು 28.20 ಲಕ್ಷ ನೌಕರರ ಆಧಾರ್‌ ಸಂಖ್ಯೆ ಸಂಗ್ರಹಿಸಲಾಗಿದೆ ಎಂದು ಇಪಿಎಫ್‌ಒ ಮಾಹಿತಿ ನೀಡಿದೆ. ಅಕ್ಟೋಬರ್‌ 15ರ ಒಳಗಾಗಿ 4.17 ಕೋಟಿ ಬಳಕೆದಾರರಿಗೆ ಯುಎಎನ್‌ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.