ADVERTISEMENT

ಷೇರುಪೇಟೆ ವಹಿವಾಟು ಇಳಿಕೆ

ಪಿಟಿಐ
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST
ಷೇರುಪೇಟೆ ವಹಿವಾಟು ಇಳಿಕೆ
ಷೇರುಪೇಟೆ ವಹಿವಾಟು ಇಳಿಕೆ   

ಮುಂಬೈ :  ಮೂರನೇ ತ್ರೈಮಾಸಿಕದಲ್ಲಿ ಮಾರುಕಟ್ಟೆಯ ನಿರೀಕ್ಷೆಯಂತೆ ಹಣಕಾಸು ಸಂಸ್ಥೆಗಳ ಆರ್ಥಿಕ ಸಾಧನೆ ಪ್ರಕಟವಾಗಿಲ್ಲ. ಇದರಿಂದ ಶುಕ್ರವಾರ ಷೇರುಪೇಟೆಗಳಲ್ಲಿ ವಹಿವಾಟು ಇಳಿಕೆ ಕಂಡಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 274 ಅಂಶ ಇಳಿಕೆಯಾಗಿ, ಎರಡು ವಾರಗಳ ಕನಿಷ್ಠ ಮಟ್ಟವಾದ 27,035 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ನಿಫ್ಟಿ) ಸಹ 75 ಅಂಶ ಇಳಿಕೆಕಂಡು, 8,349 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ಬ್ಯಾಂಕಿಂಗ್‌ ವಲಯಕ್ಕೆ ನಷ್ಟ:ಬ್ಯಾಂಕಿಂಗ್‌ ವಲಯದ ಷೇರುಗಳಿಗೆ ಹೆಚ್ಚು ನಷ್ಟವಾಗಿದೆ. ಮೂರನೇ ತ್ರೈಮಾಸಿಕದಲ್ಲಿ ಖಾಸಗಿ ವಲಯದ ಆ್ಯಕ್ಸಿಸ್‌ ಬ್ಯಾಂಕ್ ನಿವ್ವಳ ಲಾಭ ಶೇ 73 ರಷ್ಟು ಕುಸಿತ ಕಂಡಿದ್ದು, ₹580 ಕೋಟಿಗಳಿಗೆ ಇಳಿಕೆಯಾಗಿದೆ.

ಐಸಿಐಸಿಐ ಬ್ಯಾಂಕ್‌ನ ಷೇರುಗಳೂ ಮಾರಾಟದ ಒತ್ತಡಕ್ಕೆ ಒಳಗಾಗಿ ಶೇ 2.34 ರಷ್ಟು ನಷ್ಟ ಅನುಭವಿಸಿದವು. ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್‌  ಭಾರತೀಯ ಸ್ಟೇಟ್ ಬ್ಯಾಂಕ್‌ (ಎಸ್‌ಬಿಐ) ಷೇರು ಮೌಲ್ಯ ಶೇ 2.83 ರಷ್ಟು  ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.