ADVERTISEMENT

ಸೆಬಿ : ತ್ಯಾಗಿ ಅಧಿಕಾರಾವಧಿ ಮೊಟಕು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST

ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಅಜಯ್‌ ತ್ಯಾಗಿ ಅವರ ಅಧಿಕಾರಾವಧಿ ಮೊಟುಕುಗೊಳಿಸಲಾಗಿದೆ. ಸೆಬಿ ಅಧ್ಯಕ್ಷ ಹುದ್ದೆ ಐದುವರ್ಷಗಳದ್ದಾಗಿದೆ.

ಆದರೆ ತ್ಯಾಗಿ ಅವರ  ಅಧಿಕಾರ ಅವಧಿಯನ್ನು ಮೂರು ವರ್ಷಕ್ಕೆ ತಗ್ಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಅಧಿಕಾರ ಅವಧಿ ಮೊಟಕುಗೊಳಿಸಿರುವ ಬಗ್ಗೆ ಯಾವುದೇ ಕಾರಣವನ್ನು ನೀಡಿಲ್ಲ.

ಫೆಬ್ರುವರಿ 11 ರಂದು ಸಂಪುಟ ನೇಮಕ ಸಮಿತಿಯು ತ್ಯಾಗಿ ಅವರನ್ನು ಅಧ್ಯಕ್ಷ ಹುದ್ದೆಗೆ ನೇಮಕ ಮಾಡಿತ್ತು. ತ್ಯಾಗಿ ಅವರು ಆರ್ಥಿಕ ವ್ಯವಹಾರಗಳ ಹೂಡಿಕೆ ವಿಭಾಗದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದಾರೆ.

ADVERTISEMENT

ಸದ್ಯ, ಸೆಬಿ ಅಧ್ಯಕ್ಷರಾಗಿರುವ ಯು.ಕೆ. ಸಿನ್ಹಾ ಅವರ ಅಧಿಕಾರಾವಧಿ ಮಾರ್ಚ್‌ 1ಕ್ಕೆ ಮುಕ್ತಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.